Anil Kumble : ಟೀಂ ಇಂಡಿಯಾಕ್ಕೆ ಕನ್ನಡಿಗ ಅನಿಲ್‌ ಕುಂಬ್ಳೆ ಕೋಚ್‌

ಮುಂಬೈ: ಟೀಂ ಇಂಡಿಯಾದಲ್ಲೀಗ ಬದಲಾವಣೆಯ ಪರ್ವ ಆರಂಭಗೊಂಡಿದೆ. ನಾಯಕತ್ವದಿಂದ ಕೊಯ್ಲಿ ಕೆಳಗಿಳಿಯುವ ಸೂಚನೆ ನೀಡಿದ ಬೆನ್ನಲ್ಲೇ ಕೋಚ್‌ ರವಿಶಾಸ್ತ್ರಿ ಕೂಡ ನಿರ್ಗಮಿಸುವುದು ಖಚಿತ. ಇದೀಗ ಕನ್ನಡಿಗ ಅನಿಲ್‌ ಕುಂಬ್ಳೆ ಮುಂದಿನ ಟೀಂ ಇಂಡಿಯಾದ ಕೋಚ್‌ ಆಗೋ ಸಾಧ್ಯತೆ ದಟ್ಟವಾಗಿದೆ.

ಟಿ20 ವಿಶ್ವಕಪ್‌ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್‌ ರವಿಶಾಸ್ತ್ರಿ ಅವರ ಒಪ್ಪಂದದ ಅವಧಿ ಮುಕ್ತಾಯವಾಗಲಿದೆ. ರವಿಶಾಸ್ತ್ರಿ ಕೋಚಿಂಗ್‌ನಲ್ಲ ಭಾರತ ತಂಡ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಇದೇ ಕಾರಣಕ್ಕೆ ರವಿಶಾಸ್ತ್ರಿ ಅವರನ್ನು ಕೈಬಿಟ್ಟು ಹೊಸಬರನ್ನು ಕೋಚ್‌ ಅನ್ನಾಗಿ ನೇಮಕ ಮಾಡಲು ಬಿಸಿಸಿಐ ಉತ್ಸುಕವಾಗಿದೆ ಎನ್ನಲಾಗುತ್ತಿದೆ. ಈ ನಡುವಲ್ಲೇ ಹಲವು ಹೆಸರುಗಳ ಕೂಡ ಕೇಳಿಬರುತ್ತಿದೆ.

ಭಾರತ ತಂಡ ಶ್ರೀಲಂಕಾ ಹಾಗೂ ಇಂಗ್ಲೆಂಡ್‌ ಸರಣಿಯನ್ನು ಒಟ್ಟಿಗೆ ಆಡುವ ವೇಳೆಯಲ್ಲಿ ಶ್ರೀಲಂಕಾ ಸರಣಿಗೆ ರಾಹುಲ್‌ ದ್ರಾವಿಡ್‌ ಅವರನ್ನು ಕೋಚ್‌ ಆಗಿ ನೇಮಕ ಮಾಡಲಾಗಿತ್ತು. ಈ ಸರಣಿಯಲ್ಲಿ ರಾಹುಲ್‌ ಗರಡಿಯಲ್ಲಿ ಯುವ ತಂಡ ಅದ್ಬುತವಾಗಿ ಪ್ರದರ್ಶನವನ್ನು ನೀಡಿದೆ. ಈ ನಡುವಲ್ಲೇ ರಾಹುಲ್‌, ವಿವಿಎಸ್‌ ಲಕ್ಷಣ್‌ ಜೊತೆಯಲ್ಲೇ ಇದೀಗ ಅನಿಲ್‌ ಕುಂಬ್ಳೆ ಹೆಸರು ಕೋಚ್‌ ಹುದ್ದೆಗೆ ಕೇಳಿಬರುತ್ತಿದೆ.

ಭಾರತದ ದಿಗ್ಗಜ ಬೌಲರ್ ಕರ್ನಾಟಕದ ಅನಿಲ್ ಕುಂಬ್ಳೆ ಈ ಹಿಂದೆ 2016-2017ರಲ್ಲಿ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ಥಾನದ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಅನಿಲ್‌ ಕುಂಬ್ಳೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು.

ಆದ್ರೀಗ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಕೋಟ್‌ ಹುದ್ದೆಗೆ ಕುಂಬ್ಳೆ ಅವರೇ ಸೂಕ್ತ ಅನ್ನೋ ನಿರ್ಧಾರಕ್ಕೆ ಬಂದಂತಿದೆ. ಈಗಾಗಲೇ ಯುವ ತಂಡದ ಕೋಚ್‌ ಆಗಿ ರಾಹುಲ್‌ ಹಲವು ಪ್ರತಿಭೆಗಳನ್ನು ಬೆಳೆಸಿದ್ದು, ಸೀನಿಯರ್‌ ತಂಡಕ್ಕೆ ಕುಂಬ್ಳೆ ಕೋಚ್‌ ಆದ್ರೆ ಹೆಚ್ಚು ಶಿಸ್ತಿನಿಂದ ಕೂಡಿರಲಿದೆ ಅನ್ನೋದು ಸದ್ಯದ ಲೆಕ್ಕಾಚಾರ.

ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ಆಗಿರುವ ಅನಿಲ್‌ ಕುಂಬ್ಳೆ ಅವರನ್ನು ಕೋಚ್‌ ಆಗಿ ಮನವೊಲಿಸುವ ಕಾರ್ಯವನ್ನು ಬಿಸಿಸಿಐ ಮಾಡುತ್ತಿದೆ. ಕೊಯ್ಲಿ ನಾಯಕತ್ವದಿಂದ ಕೆಳಗೆ ಇಳಿದ್ರೆ ಅನಿಲ್‌ ಕುಂಬ್ಳೆ ಕೋಚ್‌ ಆಗುವುದು ಬಹುತೇಕ ಖಚಿತವಾಗಿದೆ. ಒಂದೊಮ್ಮೆ ಕುಂಬ್ಳೆ ನಿರಾಕಿಸಿದ್ರೆ ರಾಹುಲ್‌ ದ್ರಾವಿಡ್‌ ಅವರಿಗೆ ಪಟ್ಟಕಟ್ಟುವ ಸಾಧ್ಯತೆಯಿದೆ. ಕುಂಬ್ಳೆ ಹಾಗೂ ದ್ರಾವಿಡ್‌ ಇಬ್ಬರೂ ಕೋಚ್‌ ಆಗೋದಕ್ಕೆ ಒಪ್ಪಿಗೆ ನೀಡದೇ ಇದ್ರೆ, ವಿವಿಎಸ್‌ ಲಕ್ಷ್ಮಣ್‌ ಕೋಚ್‌ ಆಗುವ ಸಾಧ್ಯತೆಯಿದೆ. ಸದ್ಯ ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ಕ್ರಿಕೆಟ್ ಪ್ರಿಯರಿಗೆ ಶಾಕ್: ಟಿ20 ವಿಶ್ವಕಪ್ ಬಳಿಕ ಕೋಚ್ ಸ್ಥಾನ ತೊರೆಯಲಿದ್ದಾರೆ ರವಿಶಾಸ್ತ್ರಿ

ಇದನ್ನೂ ಓದಿ : ಯುಎಇ ಅಂಗಳದಲ್ಲಿ ಕನ್ನಡ ಕಂಪು : ಕುಂಬ್ಳೆ ಕನ್ನಡ ಹಾಡಿಗೆ ಮನಸೋತ ಪಂಜಾಬ್‌

ಇದನ್ನೂ ಓದಿ : IPL 2021 : ಅರಬ್‌ನಾಡಲ್ಲಿ ನಾಳೆಯಿಂದ ಐಪಿಎಲ್‌ ಹಬ್ಬ

ಇದನ್ನೂ ಓದಿ : ಐಪಿಎಲ್‌ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಅಬ್ಬರ : ಮೈದಾನದ ಹೊರಗೆ ಸಿಡಿದ ಸಿಕ್ಸರ್‌

(BCCI Wants Anil Kumble Back as Team India Head Coach)

Comments are closed.