Dengue fever : ಹೆಚ್ಚುತ್ತಿದೆ ಡೆಂಗ್ಯೂ ಅಬ್ಬರ, ಕೇಂದ್ರದಿಂದ 9 ರಾಜ್ಯಗಳಿಗೆ ತಜ್ಞರ ತಂಡ ನಿಯೋಜನೆ

ನವದೆಹಲಿ : ಕೊರೊನಾ ಸೋಂಕು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವಾಗಲೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮನೆ ಮಾಡಿದೆ. ಡೆಂಗ್ಯೂ ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಮಹತ್ವದ ನಿರ್ಧಾರ ಕೈಗೊಂಡಿದ್ದು, 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ತಜ್ಞರ ತಂಡಗಳನ್ನು ನಿಯೋಜಿಸಿದೆ.

ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ಕೇರಳ, ರಾಜಸ್ಥಾನ, ದೆಹಲಿ ಹಾಗೂ ಜಮ್ಮು, ಕಾಶ್ಮೀರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಇದರಿಂದ ಕೇಂದ್ರ ತಜ್ಞರ ತಂಡ ಈ ಎಲ್ಲಾ ರಾಜ್ಯಗಳಿಗೆ ಬೇಟಿ ನೀಡಿ ಜನರಿಗೆ ಸಾರ್ವಜನಿಕ ಆರೋಗ್ಯ ಕ್ರಮಗಳು ಸೇರಿದಂತೆ ತಾಂತ್ರಿಕ ಮಾರ್ಗದರ್ಶನವನ್ನು ನೀಡುತ್ತವೆ.

ಇದನ್ನೂ ಓದಿ: Kedaranath – Modi : ಕೇದಾರನಾಥ ದೇವಾಲಯಕ್ಕೆ ಭೇಟಿ : 250 ಕೋಟಿ ರೂ.ಗಳ ಪುನರ್ ನಿರ್ಮಾಣ ಕಾರ್ಯ ಉದ್ಘಾಟಿಸಲಿರುವ ಮೋದಿ

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ನ್ಯಾಷನಲ್ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂ ಅಧಿಕಾರಿಗಳು ತಜ್ಞ ತಂಡಗಳ ಭಾಗವಾಗಿದ್ದಾರೆ.’ಡೆಂಗ್ಯೂ ಹರಡುವಿಕೆಯನ್ನು ನಿಯಂತ್ರಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳು ಸೇರಿದಂತೆ ತಾಂತ್ರಿಕ ಮಾರ್ಗದರ್ಶನವನ್ನು ನೀಡುವ ಮೂಲಕ ರಾಜ್ಯ ಸರ್ಕಾರಗಳಿಗೆ ಸಹಕರಿಸಲು ಕೇಂದ್ರ ನಿರ್ಧರಿಸಿ ಈ ತಜ್ಞರ ತಂಡವನ್ನು ನಿಯೋಜಿಸಿದೆ.

ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಹಾಗೂ ರಾಜ್ಯಗಳಿಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು ಈ ತಜ್ಞರ ತಂಡಗಳನ್ನು ನಿಯೋಜಿಸಲಾಗಿದೆ. ವೆಕ್ಟರ್ ನಿಯಂತ್ರಣದ ಸ್ಥಿತಿ, ಕಿಟ್‌ಗಳು ಮತ್ತು ಔಷಧಿಗಳ ಲಭ್ಯತೆ, ಆರಂಭಿಕ ಪತ್ತೆ ಕುರಿತು ವರದಿ ಮಾಡಲು ತಂಡಗಳಗೆ ತಿಳಿಸಲಾಗಿದೆ. ಕೀಟನಾಶಕಗಳ ಲಭ್ಯತೆ ಮತ್ತು ಬಳಕೆ, ಲಾರ್ವಾ- ವಿರೋಧಿ ಮತ್ತು ವಯಸ್ಕ ವಾಹಕಗಳ ನಿಯಂತ್ರಣ ಕ್ರಮಗಳ ಸ್ಥಿತಿ ಇತ್ಯಾದಿಗಳ ಬಗ್ಗೆ ಅವರು ತಮ್ಮ ಅವಲೋಕನಗಳ ಬಗ್ಗೆ ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ತಿಳಿಸುತ್ತಾರೆ ಎಂದು ಕೇಂದ್ರ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: World Record : ಅಯೋಧ್ಯೆಯಲ್ಲಿ ಬೆಳಗಲಿದೆ 12 ಲಕ್ಷ ದೀಪ : ದಾಖಲೆ ಬರೆಯಲು ಸಿದ್ದವಾಗುತ್ತಿದೆ ಯೋಗಿ ಅಯೋಧ್ಯೆ ದೀಪೋತ್ಸವ

ಈ 9 ರಾಜ್ಯಗಳಲ್ಲಿ ಅಕ್ಟೋಬರ್ 31 ರವರೆಗೆ ದೇಶದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ 86% ರಷ್ಟು ವರದಿಯಾಗಿವೆ. ಈ ಕಾರಣದಿಂದ ತಜ್ಞರ ತಂಡವನ್ನು ನಿಯೋಜಿಸಲಾಗಿದೆ. ದೆಹಲಿಯಲ್ಲಿ ಡೆಂಗ್ಯೂ ಪರಿಸ್ಥಿತಿಯ ಅವಲೋಕನದ ಸಂದರ್ಭದಲ್ಲಿ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಸೂಚಿಸಿದ್ದು, ಹೆಚ್ಚಿನ ಸಕ್ರಿಯ ಡೆಂಗ್ಯೂ ಪ್ರಕರಣಗಳಿರುವ ರಾಜ್ಯಗಳಿಗೆ ತಜ್ಞರ ತಂಡಗಳನ್ನು ಗುರುತಿಸಿ ಕಳುಹಿಸಲು ಸೂಚಿಸಿದರು.

(Dengue boom on the rise, expert team deployed from Centre to 9 states)

Comments are closed.