Whatsapp Crime : ಮಗನ ಶಾಲಾ ವಾಟ್ಸಾಪ್ ಗ್ರೂಪ್‌ಗೆ ಅಶ್ಲೀಲ ಚಿತ್ರ, ವಿಡಿಯೋ ಕಳುಹಿಸಿದ ವ್ಯಕ್ತಿ ಅರೆಸ್ಟ್‌

ಪಾಟ್ನಾ : ಆನ್‌ಲೈನ್‌ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆಗಳಲ್ಲಿ ವಾಟ್ಸಾಪ್‌ ಗ್ರೂಫ್‌ ಮಾಡೋದು ಮಾಮೂಲು. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗನ ಶಾಲಾ ವಾಟ್ಸಾಪ್ ಗುಂಪಿನಲ್ಲಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡ ಆರೋಪದಲ್ಲಿ ಪೊಲೀಸರ ಕೈಲಿ ಅರೆಸ್ಟ್‌ ಆಗಿದ್ದಾನೆ.

ಬಿಹಾರದಲ್ಲಿ ಈ ಘಟನೆ ನಡೆದಿದ್ದು, 44 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ವ್ಯಕ್ತಿಯ ಮಗ ಆರನೇ ತರಗತಿಯಲ್ಲಿ ಓದುತ್ತಿದ್ದು, ತಂದೆ ಮಗನ ಶಾಲಾ ಗ್ರೂಪ್‌ಗೆ ಅಶ್ಲೀಲ ಪೋಟೋ ಹಾಗೂ ವಿಡಿಯೋವನ್ನು ಕಳುಹಿಸಿದ್ದಾನೆ. ಈ ಕುರಿತು ಶಾಲಾ ಮುಖ್ಯೋಪಾಧ್ಯಾಯರು ದೂರು ನೀಡಿದ್ದು. ಈ ಹಿನ್ನೆಲೆಯಲ್ಲೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದೀಗ ಪೊಲೀಸರ ವಿಚಾರಣೆಯ ವೇಳೆಯಲ್ಲಿ ವ್ಯಕ್ತಿ ವಿಡಿಯೋ ಕಳುಹಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಂಧಿಸಿದ್ದು, ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ನಾಲ್ಕು ವರ್ಷದ ಮಗುವೊಂದನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಕೆಲವೇ ಗಂಟೆಗಳಲ್ಲಿ ಪೊಲೀಸರು ಮಗುವನ್ನು ಪತ್ತೆ ಹಚ್ಚಿರುವ ಘಟನೆ ನಾಗ್ಪರದಲ್ಲಿ ನಡೆದಿದೆ.

ಇದನ್ನೂ ಓದಿ : ನನ್ನಪ್ಪ ಕಾಮುಕ, ಕುಡುಕ, ಸಹೋದರಿಯರ ಬಾಳು ಹಾಳು ಮಾಡಿದ : ಮಧುಸಾಗರ್‌ ಗಂಭೀರ ಆರೋಪ

ಬಿಹಾರದ ದಂಪತಿಯ ಮಗು ಇಲ್ಲಿ ಕೆಲಸ ಮಾಡುತ್ತಿದ್ದು, ಕಾಣೆಯಾಗಿದೆ ಮತ್ತು ಭಾನುವಾರ ಬೆಳಿಗ್ಗೆ ದೂರು ನೀಡಲು ಆದ್ಯತೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಮಧ್ಯಪ್ರದೇಶದ ಇಬ್ಬರು ಅಕ್ಕಪಕ್ಕದ ಮನೆಯಲ್ಲಿಯೇ ವಾಸವಾಗಿದ್ದು, ಹುಡುಗನನ್ನು ಅಪಹರಿಸಿದ್ದಾರೆ. ಆದರೆ ರೈಲಿನಲ್ಲಿ ಪ್ರಯಾಣಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ನಾಗ್ಪುರದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ ಇಬ್ಬರನ್ನು ಹಿಡಿದು ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಯುವತಿ ಹೆಸರಲ್ಲಿ ಯುವಕರಿಗೆ ಪಾಕ್ ISI ಗಾಳ : ಫೇಸ್‌ಬುಕ್‌ನಲ್ಲಿ ಮಿಲಿಟರಿ ಮಾಹಿತಿ ಲೀಕ್ ಮಾಡಿದ್ದಾತ ಅರೆಸ್ಟ್‌

( Man arrested for sharing obscene images in son’s school WhatsApp group )

Comments are closed.