ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು ಗೊತ್ತಾ ?

ನವದೆಹಲಿ : ನಿರುದ್ಯೋಗ ಈಗ ಹೆಚ್ಚಿನ ಜನರನ್ನು ಕಾಡುತ್ತಿರುವ ಸಮಸ್ಯೆ. ಇಂತ ಸಮಯದಲ್ಲೇ ಒಟ್ಟು 1.9 ಲಕ್ಷಕ್ಕೂ ಅಧಿಕ ಮಂದಿ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಗ್ರಾಮೀಣ ಹಾಗೂ ನಗರಾದ್ಯಂತ ನಿರುದ್ಯೋಗದ ಪ್ರಮಾಣ ಮಿತಿಮೀರಿದೆ ಎಂದು ತಿಳಿದುಬಂದಿದೆ.

ಜುಲೈ ತಿಂಗಳಲ್ಲಿ 7 ಪ್ರತಿಶತ ಇದ್ದ ನಿರುದ್ಯೋಗ ಪ್ರಮಾಣವು ಆಗಸ್ಟ್ ತಿಂಗಳ ವೇಳೆಗೆ 8.3 ಪ್ರತಿಶತಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಈ ಮೂಲಕ ಜುಲೈವರೆಗೆ 37.5 ಪ್ರತಿಶತ ಇದ್ದ ಉದ್ಯೋಗ ದರವು ಆಗಸ್ಟ್​ ತಿಂಗಳ ವೇಳೆಗೆ 37.2 ಪ್ರತಿಶತಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: TAX PAYERS ಗೆ ಸಿಹಿ ಸುದ್ಧಿ: ʼತೆರಿಗೆ ರಿಟರ್ನ್ಸ್ʼ ಸಲ್ಲಿಸಲು ಅವಧಿ ವಿಸ್ತರಿಸಿದ ಕೇಂದ್ರ ಸರಕಾರ

ಮುಖ್ಯವಾಗಿ ಕೃಷಿ ವಲಯದಲ್ಲಿ ಉದ್ಯೋಗಗಳಲ್ಲಿ ಅನಿಶ್ಚಿತತೆ ಕಂಡು ಬಂದಿದೆ. ಆಗಸ್ಟ್​ನಲ್ಲಿ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣವು 8.7 ದಶಲಕ್ಷಕ್ಕೆ ಕುಸಿದಿದೆ. ವ್ಯಾಪಾರಿ ಕ್ಷೇತ್ರದಲ್ಲಿ ಉದ್ಯೋಗವು ಸುಮಾರು 4 ಮಿಲಿಯನ್​ಗೆ ಏರಿಕೆ ಕಂಡಿದೆ. ಸಣ್ಣ ವ್ಯಾಪಾರಿ ಮತ್ತು ದಿನಗೂಲಿ ಕಾರ್ಮಿಕರ ಸಂಖ್ಯೆಯು 2.1 ಮಿಲಿಯನ್ ಆಗಿದೆ. ವೇತನ ಉದ್ಯೋಗವು 0.7 ಮಿಲಿಯನ್​ನಷ್ಟು ಹೆಚ್ಚಾಗಿದೆ ಎಂದು ಸಿಎಂಐಇ ಹೇಳಿದೆ.

ಇದನ್ನೂ ಓದಿ: ಭಾರತದಲ್ಲಿ ಕ್ರೂಸ್ ಲೈನರ್ ಸೇವೆ ಆರಂಭಿಸಲಿದೆ IRCTC

ಕೃಷಿ ವಲಯಗಳಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿಗಳು ಸೇವಾ ವಲಯದತ್ತ ಮುಖ ಮಾಡಿದ್ದಾರೆ. ಕೈಗಾರಿಕಾ ವಲಯದಲ್ಲೂ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್​ ತಿಂಗಳಲ್ಲಿ ಉದ್ಯೋಗಿಗಳ ಸಂಖ್ಯೆಯು ಕ್ಷೀಣಿಸಿದ್ದು 2.5 ಮಿಲಿಯನ್​ ಆಗಿದೆ. ಇದನ್ನು ನೋಡಿದರೆ ಕಾರ್ಖಾನೆಗಳು ಉದ್ಯೋಗಿಗಳಿಗೆ ವಿಶ್ವಾಸಾರ್ಹ ಮೂಲವಲ್ಲ ಎಂದು ಸಿಎಂಐಇ ಅಭಿಪ್ರಾಯ ಪಟ್ಟಿದೆ.

(Do you know how many people lost their jobs in August?)

Comments are closed.