ತಿರುಪತಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದ್ರೀಗ ತಿರುಪತಿಯ ಬಾಲಾಜಿ ದರ್ಶನಕ್ಕೂ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್ ಮೂಲಕವೇ ಕಾಯ್ದಿರಿಸಬೇಕಾಗಿದೆ. ಹೀಗಾಗಿಯೇ ಟಿಟಿಡಿ ಇಂದು ವಿಶೇಷ ಟಿಕೆಟ್ ಕೋಟಾವನ್ನು ಬಿಡುಗಡೆಗೊಳಿಸಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯಕ್ಕಾಗಿ ಹಿಂದೆಲ್ಲಾ ದಿನಗಟ್ಟಲೆ ಕಾಯಬೇಕಾಗಿತ್ತು. ನಡೆದು ಕೊಂಡು ಹೋಗಿ ತಿಮ್ಮಪ್ಪನನ್ನು ನೋಡಬೇಕಾಗಿತ್ತು ಅಂತ ಮನೆಯ ಅಜ್ಜ,ಅಜ್ಜಿ ಹೇಳುವುದನ್ನು ಕೇಳಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಆ ರೀತಿಯ ಕಷ್ಟವೇನು ಇಲ್ಲಾ ಆದರೆ ಈ ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲ್ಲೇ ಯಲ್ಲಿ ತಿರುಪತಿಯಲ್ಲಿಯೂ ಕೂಡ ಹಲವು ನಿಭಂದನೆಗಳನ್ನು ಹೇರಲಾಗಿದೆ.
ಇದನ್ನೂ ಓದಿ: ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ
ಕೋವಿಡ್ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೊರೊನಾ ನೆಗೆಟಿವ್ ರಿಪೋರ್ಟ್ ಅಥವಾ ಎರಡು ಡೋಸ್ ಕೊರೊನಾ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದ್ದು, ಆನ್‌ಲೈನ್ ಮೂಲಕ ಪ್ರವೇಶದ ಟಿಕೆಟ್ ಖರೀದಿ ಮಾಡಿದ್ರೆ ತಿಮ್ಮಪ್ಪನ ದರ್ಶನ ಭಾಗ್ಯ ನಿಮಗೆ ದೊರಕುತ್ತದೆ. ಆದರೆ ದೇವಸ್ಥಾನದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಇದೀಗ ಟಿಟಿಡಿ ತಿಮ್ಮಪ್ಪನ ದರ್ಶನಕ್ಕೆ ವಿಶೇಷ ಟಿಕೆಟ್ ಕೊಟಾವನ್ನು ಆನ್ ಲೈನ್ ಅಲ್ಲಿ ಬಿಡುಗಡೆ ಗೊಳಿಸಿದೆ. ನವೆಂಬರ್ ಮತ್ತು ಡಿಸೆಂಬರ್ ನಲ್ಲಿ 300. ರೂ ವಿಶೇಷ ಪ್ರವೇಶ ದರ್ಶನ (ಎಸ್.ಇ.ಡಿ) ಟಿಕೆಟ್ ಗಳ ಆನ್ ಲೈನ್ ಕೋಟಾವನ್ನು ಇಂದು ಟಿಟಿಡಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: DA HIKE : ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಿಸಿದ ಕೇಂದ್ರ ಸರಕಾರ
(ಎಸ್ಇಡಿ) ನಲ್ಲಿ ಟಿಕೆಟ್ ಕಾಯ್ದಿರಿಸಲು ಬಯಸುವವರು ಶುಕ್ರವಾರ (ಅಕ್ಟೋಬರ್ 22) ಬೆಳಿಗ್ಗೆ 9 ಗಂಟೆಗೆ ಟಿಟಿಡಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಟಿಕೆಟ್ ಅನ್ನು ಕಾಯ್ದಿರಿಸಬಹುದು. ನವೆಂಬರ್ ನಲ್ಲಿ ಸ್ಲಾಟೆಡ್ ಸರ್ವ ದರ್ಶನ್ (ಎಸ್ಎಸ್ ಡಿ) ಟಿಕೆಟ್ ಕೋಟಾವನ್ನು ಅಕ್ಟೋಬರ್ 23 ರಂದು ಬೆಳಿಗ್ಗೆ 9 ಗಂಟೆಗೆ ಆನ್ ಲೈನ್ ಬುಕಿಂಗ್ ಗಾಗಿ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಅಧಿಕೃತ ಹೇಳಿಕೆಯನ್ನು ನೀಡಿದೆ.
(Online for Thimma’s darshan : TTD releases special ticket)