Encounter : ಕಾಶ್ಮೀರದಲ್ಲಿ ಎನ್ ಕೌಂಟರ್ ಗೆ ಭಯೋತ್ಪಾದಕ ಫಿನಿಶ್

ನವದೆಹಲಿ : ಜಮ್ಮು ಕಾಶ್ಮೀರದ ಶೋಪಿಯಾನ್ ನ ಕಾಶ್ವಾ ಗ್ರಾಮದಲ್ಲಿ ಭಯೋತ್ಪಾದಕನೋರ್ವ ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆಯಲ್ಲಿ ಪೊಲೀಸರು ಹಾಗೂ ಭಯೋತ್ಪಾದಕನ ನಡುವೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ. ಪೊಲೀಸರು ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಬಲಿಯಾಗಿದ್ದಾನೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಅನಾಯತ್ ಅಶ್ರಫ್ ದಾರ್ ಎಂಬಾತನೇ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತನಾದ ಉಗ್ರ. ಗ್ರಾಮದಲ್ಲಿ ಉಗ್ರನ ದಾಳಿಯ ಕುರಿತು ಮಾಹಿತಿ ಬಂದ ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಉಗ್ರರು ಪ್ರತೀಕಾರ ತೀರಿಸಿಕೊಳ್ಳುವ ಮೂಲಕ ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಗಿದೆ. ಭಯೋತ್ಪಾದಕನಿಗೆ ಶರಣಾಗಲು ಅವಕಾಶ ನೀಡಲಾಗಿತ್ತು. ಆದರೆ, ಆತ ಒಪ್ಪಲಿಲ್ಲ ಈ ಹಿನ್ನೆಲೆಯಲ್ಲಿ ಎನ್‌ಕೌಂಟರ್‌ ನಡೆಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂಓದಿ: PM Modi to US : ಸೆ.23ಕ್ಕೆ ಮೋದಿ ಅಮೇರಿಕಾ ಭೇಟಿ : ಜೋ ಬೈಡನ್‌ ಜೊತೆ ಮಹತ್ವದ ಮಾತುಕತೆ

ಉಗ್ರ ಅನಾಯತ್ ಅಶ್ರಫ್ ದಾರ್ ಭೂಗತನಾಗಿದ್ದು, ಡ್ರಗ್ಸ್‌ ವ್ಯವಹಾರದಲ್ಲಿ ತನ್ನನ್ನ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿರುವ ಕುರಿತು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ಹತ ಭಯೋತ್ಪಾದಕನ ಬಳಿಯಲ್ಲಿದ್ದ ಒಂದು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಯಗೊಂಡ ನಾಗರಿಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ಭಯೋತ್ಪಾದಕ ಯಾವ ಸಂಘಟನೆಗೆ ಸೇರಿದವ ಎಂಬುದು ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಹಳಿತಪ್ಪಿದ ಪಾರಂಪರಿಕ ಆಟಿಕೆ ರೈಲು : 3 ಸಾವು, 20 ಮಂದಿ ಗಾಯ

(Terror finish to Encounter in Kashmir)

Comments are closed.