ಕೌಟುಂಬಿಕ ಕಲಹಕ್ಕೆ 2 ಬಲಿ : ಪುಟ್ಟ ಕಂದಮ್ಮನನ್ನು ಕೊಂದ ಪಾಪಿ ತಂದೆ

ಕಲಬುರಗಿ : ಪತಿ ಹಾಗೂ ಪತ್ನಿ ನಡುವಿನ ಕಲಹಕ್ಕೆ ಎರಡು ಜೀವಗಳು ಬಲಿಯಾಗಿವೆ. ತಂದೆಯೇ ತನ್ನ ಪುಟ್ಟ ಮಗಳು ಹಾಗೂ ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂನ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ.

ಪ್ರಿಯಾಂಕ (11 ವರ್ಷ), ಜಗದೇವಿ (35 ವರ್ಷ) ಎಂಬವರೇ ಮೃತ ತಾಯಿ, ಮಗಳು. ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ಪಾನಿಪುರಿ ವ್ಯಾಪಾರಿ ಯಾಗಿದ್ದ ಕಲಬುರ್ಗಿಯ ನಿವಾಸಿ ದಿಗಂಬರ ಹಣಮಂತಪ್ಪ ಗಾಂಜಲಿ ಎಂಬಾತನೇ ಪತ್ನಿ ಹಾಗೂ ಮಗನನ್ನು ಕೊಲೆ ಮಾಡಿರುವ ಆರೋಪಿ.

ಕೆಲವು ದಿನಗಳ ಹಿಂದೆಯಷ್ಟೇ ಕುಟುಂಬ ಸೇಡಂಗೆ ಬಂದು ನೆಲೆಸಿತ್ತು. ಹಣಮಂತಪ್ಪ ಹಾಗೂ ಪತ್ನಿ ಜಗದೇವಿ ನಡುವೆ ನಿತ್ಯವೂ ಜಗಳವಾಗುತ್ತಿತ್ತು. ಜಗಳ ವಿಕೋಪಕ್ಕೆ ತೆರಳಿ ಆರೋಪಿ ಕಟ್ಟಿಗೆಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ ಮಗಳನ್ನೂ ಕೂಡ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ಆರೋಪಿ ಸೇಡಂ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಕುರಿತು ಸೇಡಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

( Two victims of family strife: father who killed little child and wife )

Comments are closed.