LPG Cylinder Blast : ಅಡುಗೆ ಮಾಡುವ ವೇಳೆ ಗ್ಯಾಸ್‌ ಸಿಲಿಂಡರ್‌ ಸ್ಪೋಟ : 9 ಮಂದಿ ಗಂಭೀರ

ಆನೇಕಲ್‌ : ಅಡುಗೆ ಮಾಡುತ್ತಿದ್ದ ವೇಳೆಯಲ್ಲಿ ಸಿಲಿಂಡರ್‌ ಸ್ಪೋಟಗೊಂಡು ಒಂದೇ ಮನೆಯ 7 ಮಂದಿ ಸೇರಿದಂತೆ ಒಟ್ಟು 9 ಮಂದಿ ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಕರ್ನಾಟಕದ ಗಡಿಭಾಗವಾಗಿರುವ ಹೊಸೂರು ಪಟ್ಟಣದ ರಾಮನಗರದ ಮನೆಯೊಂದರಲ್ಲಿ ನಡೆದಿದೆ.

ಹೊಸೂರಿನ ರಾಮನಗರದ ನಿವಾಸಿಗಳಾಗಿರುವ ಭೀಮಸಿಂಗ್‌, ಅರವಿಂದ್, ರೂಬಿ, ಚಂದ್ರಾದೇವಿ, ಭೀಮ್ಸಿಂಗ್, ಹೃತಿಕ್, ಸಬೀರ್ ಮತ್ತು ಸಾಧಿಕ್ ಎಂಬವರೇ ಗಂಭೀರವಾಗಿ ಗಾಯಗೊಂಡವರು. ಉತ್ತರ ಪ್ರದೇಶದಿಂದ ಹೊಸೂರಿಗೆ ಬಂದಿದ್ದ ಈ ಕುಟುಂಬ ಪಾನಿಪೂರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು.

ಇದನ್ನೂ ಓದಿ : ವಾಮಾಚಾರದ ಹೆಸರಲ್ಲಿ ದಂಪತಿಗೆ 4.41 ಕೋಟಿ !

ಸಿಲಿಂಡರ್ ಸ್ಪೋಟದ ರಭಸಕ್ಕೆ ಇಡೀ ಮನೆಯಲ್ಲಿನ ವಸ್ತುಗಳು ಛಿದ್ರ ಛಿದ್ರವಾಗಿದೆ. ಮನೆಯ ಮೇಲ್ಛಾವಣಿಯ ಶೀಟ್ ತುಂಡು ತುಂಡಾಗಿ ಬಿದ್ದಿದೆ. ಇನ್ನು ಮನೆ ಯಲ್ಲಿನ ಎಲೆಕ್ಟ್ರಿಕ್ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದು, ಅವರನ್ನು ಹೊಸೂರಿನ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಹೊಸೂರು ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯೋ ಮುನ್ನ ಹುಷಾರ್‌ !

ಇದನ್ನೂ ಓದಿ : ಮುಂಬೈ ಕ್ರೂಸ್‌ ಡ್ರಗ್ಸ್‌ ಪಾರ್ಟಿಗೆ ಬೆಂಗಳೂರಿನ ಲಿಂಕ್‌ ?

( LPG cylinder blast injures nine people Ramanagar in Hosur town near Karnataka Border )

Comments are closed.