ವೈದ್ಯಲೋಕಕ್ಕೆ ಸವಾಲಾದ 14 ವರ್ಷದ ಬಾಲಕ : ಈತ ಮೊಬೈಲ್‌ ಮುಟ್ಟಿದ್ರೆ ಖಾಲಿಯಾಗುತ್ತೆ ಡೇಟಾ !

ಉತ್ತರ ಪ್ರದೇಶ : ತಂತ್ರಜ್ಞಾನ ಬದಲಾಗುತ್ತಿದ್ದಂತೆಯೇ ೪ಜಿ ಮೊಬೈಲ್‌ ಯುಗದಲ್ಲಿ ಮೊಬೈಲ್‌ ಡೇಟಾ ಬೇಗ ಖಾಲಿಯಾಗೋದು ಮಾಮೂಲು. ಆದ್ರೆ ಇಲ್ಲೊಬ್ಬ ಬಾಲಕ ಮೊಬೈಲ್‌ ಮುಟ್ಟಿದ್ರೆ ಸಾಕು ಮೊಬೈಲ್‌ ಡೇಟಾ ಖಾಲಿಯಾಗಿ ಬಿಡುತ್ತದೆ. ಈ ಬಾಲಕನೀಗ ವೈದ್ಯಲೋಕಕ್ಕೆ ಮಾತ್ರವಲ್ಲ, ವಿಜ್ಞಾನ ಲೋಕಕ್ಕೂ ಅಚ್ಚರಿಯನ್ನು ಮೂಡಿಸಿದ್ದಾನೆ.

ಹೌದು, ಈ ಬಾಲಕನ ಹೆಸರು ಅಸ್ತಿತ್ವಾ ಅಗರ್‌ವಾಲ್.‌ ಉತ್ತರ ಪ್ರದೇಶದ ಅಲಿಗಢದ ಬಟ್ಟೆ ವ್ಯಾಪಾರಿಯಾಗಿರುವ ಗೌರವ್‌ ಅಗರ್‌ವಾಲ್‌ ಅವರ ಮಗ. ಶಾಲೆ ರಜೆ ಇದ್ದ ಕಾರಣಕ್ಕೆ ಅಸ್ತಿತ್ವಾ ಮೊಬೈಲ್‌ ಬಳಕೆ ಮಾಡುತ್ತಿದ್ದ. ಆದ್ರೆ ಮೇ 2ನೇ ತಾರೀಕು ಮನೆಯಲ್ಲಿ ಘಟನೆಯೊಂದು ನಡೆದಿತ್ತು. ಅಸ್ತಿತ್ವಾ ಕೈಯಲ್ಲಿ ಮೊಬೈಲ್‌ ಹಿಡಿಯುತ್ತಲೇ ಡೇಟಾ ಸಂಪೂರ್ಣವಾಗಿ ಖಾಲಿಯಾಗಿತ್ತು. ಮೊಬೈಲ್‌ ಸಮಸ್ಯೆ ಇರಬಹುದು ಅಂತಾ ಮನೆಯವರು ಸುಮ್ಮನಾಗಿದ್ದರು.

ಆದ್ರೆ ದಿನ ಕಳೆದಂತೆ ಸಮಸ್ಯೆ ಶುರುವಾಗಿದೆ. ಅಸ್ತಿತ್ವಾ ಯಾವುದೇ ಮೊಬೈಲ್‌ನ್ನು ಕೈಯಲ್ಲಿ ಹಿಡಿದ್ರೆ ಸಾಕು ಖಾಲಿಯಾಗಿ ಬಿಡ್ತಾ ಇತ್ತು. ಮನೆಯವರು, ನೆರೆ ಹೊರೆಯವರು ಕೂಡ ಮೊಬೈಲ್‌ ಕೊಟ್ಟು ಪರೀಕ್ಷೆ ಮಾಡಿಸಿದ್ದಾರೆ. ಎಲ್ಲರ ಮೊಬೈಲ್‌ ಡೇಟಾ ಕೂಡ ಖಾಲಿಯಾಗಿತ್ತು. ಹೀಗಾಗಿ ಗೌರವ್‌ ಅಗರ್‌ವಾಲ್‌ ವೈದ್ಯರ ಬಳಿಯಲ್ಲಿ ಮಗನನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ನಂತರದಲ್ಲಿ ನರ ವಿಜ್ಞಾನಿಯಾಗಿರುವ ಡಾ.ಸಂದೀಪ್‌ ಅವರ ಬಳಿಯಲ್ಲಿಯೂ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿಯೂ ಬಾಲಕನ ಹಿಡಿದ ಮೊಬೈಲ್‌ ನಲ್ಲಿ ಡೇಟಾ ಸಂಪೂರ್ಣವಾಗಿ ಖಾಲಿಯಾಗಿತ್ತು. ಇದನ್ನು ನೋಡಿದ ವೈದ್ಯರು ಹಾಗೂ ವಿಜ್ಞಾನಿಗಳು ಕೂಡ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಅಲಿಗಢ (ಉತ್ತರ ಪ್ರದೇಶ): ಇಲ್ಲೊಬ್ಬ ಬಾಲಕನ ಕೈಗೆ ನೀವು ಏನು ಆದ್ರೂ ಮೊಬೈಲ್‌ ಕೊಟ್ರೆ ಅದರಲ್ಲಿರುವ ಡಾಟಾ ಖಾಲಿ ಆಗೋದು ಫಿಕ್ಸ್‌, ಹೌದು, ಇಂತಹದೊಂದು ಅಚ್ಚರಿಯ ಘಟನೆ, ಉತ್ತರ ಪ್ರದೇಶ ರಾಜ್ಯದ ಅಲಿಗಢದಲ್ಲಿ ನಡೆದಿದೆ. 14 ವರ್ಷದ ಬಟ್ಟೆ ವ್ಯಾಪಾರಿ ಗೌರವ ಅಗರ್ವಾಲ್ ಅವರ ಮಗ ಅಸ್ತಿತ್ವಾ ಅಗರ್ವಾಲ್‌ ಈ ರೀತಿಯ ಅಚ್ಚರಿಯ ಘಟನೆಯನ್ನು ನಡೆಸುತ್ತಿದ್ದು, ಈತ ಕೈಯಲ್ಲಿ ಫೋನ್‌ ಕೊಟ್ಟಾಗ ಡೇಟಾ ಇದ್ದಕ್ಕಿದ್ದಂತೆಯೇ ಖಾಲಿಯಾಗುತ್ತಿದೆಯಂತೆ.

ಅಂದ ಹಾಗೇ ಈ ವಿಚಿತ್ರ ಘಟನೆ ಬಳಿಕ ಇದು ಯಾವುದಾದರೂ ಪವಾಡವೇ ಅಥವಾ ಅಸ್ತಿತ್ವದ ದೇಹದಲ್ಲಿ ಇರುವ ಕೆಲವು ವಿಕಿರಣದಿಂದಾಗಿ ಇದು ಸಂಭವಿಸುತ್ತಿದೆಯೇ ? ಅಂತ ವೈದ್ಯರು ಸೇರಿದಂತೆ ಇತರೆ ಮಂದಿ ಸಂಶೋಧನೆ ನಡೆಸುತ್ತಿದ್ದಾರೆ. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆಯಂತೆ.

ಇದನ್ನೂ ಓದಿ :  10 ವರ್ಷ ರಹಸ್ಯ ಕೋಣೆಯಲ್ಲಿದ್ದ ಪ್ರೇಮಿಗಳು : ರೆಹಮಾನ್‌ ಸಜಿತಾಗೆ ಕೊನೆಗೂ ಮದುವೆ ಭಾಗ್ಯ

ಇದನ್ನೂ ಓದಿ :  ಕರಾವಳಿಯಲ್ಲಿ ಹೈ ಅಲರ್ಟ್‌ : ಹಬ್ಬದ ಹೊತ್ತಲ್ಲೇ ಸ್ಪೋಟಕ್ಕೆ ಉಗ್ರರ ಟಾರ್ಗೇಟ್‌ !

ಇದನ್ನೂ ಓದಿ : ಶಾಸಕ ಪತ್ರಿಕೆಯ ಸಂಪಾದಕ ಶಂಕರ್‌ ಮನೆಯಲ್ಲಿ 15 ಲಕ್ಷ ರೂ. ನಗದು , 2 ಕೆ.ಜಿ ಚಿನ್ನಾಭರಣ ಪತ್ತೆ

( 14 year old boy in Palwal in discussion, internet data flies away as soon as he goes to mobile in his hand-up news) )

Comments are closed.