Crime News : ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಸಾಮೂಹಿಕ ಅತ್ಯಾಚಾರ

ಮಧ್ಯಪ್ರದೇಶ : ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದೆ. ಅಪ್ರಾಪ್ತ ಬಾಲಕಿಯರಿಂದ ಹಿಡಿದು ವೃದ್ದರನ್ನೂ ಕಾಮುಕರು ಬಿಡುತ್ತಿಲ್ಲ. ಇದೀಗ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ವೋರ್ವರ ಮೇಲೆ ಮಧ್ಯಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಮಧ್ಯಪ್ರದೇಶದ ನಿಮುಚ್‌ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಮೂವತ್ತು ವರ್ಷದ ಮಹಿಳಾ ಕಾನ್‌ಸ್ಟೇಬಲ್‌ ಒಬ್ಬರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಯುವಕ ನೋರ್ವನ ಜೊತೆಗೆ ಫೇಸ್‌ಬುಕ್‌ನಲ್ಲಿ ಮಹಿಳಾ ಕಾನ್‌ಸ್ಟೇಬಲ್‌ಗೆ ಪರಿಚಯವಾಗಿತ್ತು. ನಂತರ ವಾಟ್ಸಾಪ್‌ನಲ್ಲಿಯೂ ಇಬ್ಬರ ಮಾತುಕತೆ ಮುಂದುವರಿದಿತ್ತು. ಈ ನಡುವಲ್ಲೇ ಆರೋಪಿ ತಮ್ಮ ಬರ್ತಡೇ ಪಾರ್ಟಿಗೆ ಮಹಿಳಾ ಕಾನ್‌ಸ್ಟೇಬಲ್‌ನ್ನು ಮನೆಗೆ ಆಹ್ವಾನಿಸಿದ್ದ.

ಮನೆಗೆ ಹೋಗಿ ಬರ್ತಡೇ ಪಾರ್ಟಿ ಮುಗಿದ ನಂತರದಲ್ಲಿ ಆರೋಪಿ ತನ್ನ ತಮ್ಮ ಹಾಗೂ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ನೀಚ ಕೃತ್ಯದ ಬೆನ್ನಲ್ಲೇ ಆರೋಪಿಯ ತಾಯಿ ಹಾಗೂ ಮತ್ತೋರ್ವ ಸಂಬಂಧಿ ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳಾ ಕಾನ್‌ಸ್ಟೇಬಲ್‌ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಇದೀಗ ನಾಗರೀಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ನಿಮುಚ್‌ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಾನಲ್ಲೇ ಮಧುಚಂದ್ರಕೆ, ಯುಗಪುರುಷ ಸಿನಿಮಾ ಶೈಲಿಯಲ್ಲಿ ಪತ್ನಿಯ ಕೊಲೆ ಯತ್ನ ! ಕೊನೆಗೆ ಚಾಕುವಿನಿಂದ ಇರಿದು ಕೊಲೆ

ಇದನ್ನೂ ಓದಿ : ಮಸಾಜ್‌ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ : ಮಾಲೀಕ ಅರೆಸ್ಟ್‌

( woman constable gang raped in Madhya Pradesh neemuch district )

Comments are closed.