Petrol Tanker Accident : ಚಾರ್ಮಾಡಿ ಘಾಟಿಯಲ್ಲಿ ಪಲ್ಟಿ : ತಪ್ಪಿದ ಭಾರೀ ದುರಂತ

ಮೂಡಿಗೆರೆ (ಚಿಕ್ಕಮಗಳೂರು): ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಅಲೇಖಾನ್‌ ಎಂಬಲ್ಲಿ ನಡೆದಿದ್ದಿ, ಘಟನೆಯಿಂದಾಗಿ ಟ್ಯಾಂಕರ್‌ನಿಂದ ಪೆಟ್ರೋಲ್‌ ಸೋರಿಕೆಯಾಗಿದೆ.

ಮಂಗಳೂರಿನಲ್ಲಿ ಪೆಟ್ರೋಲ್‌ ತುಂಬಿಸಿಕೊಂಡಿದ್ದ ಟ್ಯಾಂಕರ್‌ ಮಾಗುಂಡಿಗೆ ತೆರಳುತ್ತಿತ್ತು. ಟ್ಯಾಂಕರ್‌ ಚಾರ್ಮಾಡಿ ಘಾಟಿಯ ಅಲೇಖಾನ್‌ ಬಳಿಗೆ ಬರುತ್ತಿದ್ದಂತೆಯೇ ಪಲ್ಟಿಯಾಗಿದೆ. ಘಟನೆಯಾಗುತ್ತಲೇ ಪೆಟ್ರೋಲ್‌ ಸೋರಿಯಾಗೂವುದಕ್ಕೆ ಆರಂಭವಾಗಿದೆ. ಟ್ಯಾಂಕರ್‌ನಲ್ಲಿ ಸುಮಾರು 8000 ಲೀಟರ್ ಪೆಟ್ರೋಲ್ ಹಾಗೂ 4000 ಲೀಟರ್ ಡಿಸೇಲ್ ಸಂಗ್ರಹವಿತ್ತು.

ಪೆಟ್ರೋಲ್‌ ಟ್ಯಾಂಕರ್‌ ಮತ್ತೊಂದು ಬದಿಗೆ ಪಲ್ಟಿಯಾಗಿದ್ರೆ ಪ್ರಪಾತಕ್ಕೆ ಉರುಳುವ ಸಾಧ್ಯತೆಯಿತ್ತು. ಆದರೆ ಅದೃಷ್ಟವಶಾತ್‌ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಣಕಲ್‌ ಠಾಣೆಯ ಪೊಲೀಸರು ಆಗಮಿಸಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಚಾರ್ಮಾಡಿ ಘಾಟ್‌ ಕುಸಿತದಿಂದ ವಾಹನ ಸಂಚಾರಕ್ಕೆ ಬ್ರೇಕ್‌ ಬಿದ್ದಿತ್ತು. ಅಲ್ಲದೇ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ಸಂಚಾರ ಆರಂಭವಾಗುತ್ತಲೇ ಟ್ಯಾಂಕರ್‌ ಪಲ್ಟಿಯಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಬಣಕಲ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : ಬೈಕಿನಲ್ಲಿ ಚಲಿಸುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ : ಐವರು ದುಷ್ಕರ್ಮಿಗಳಿಂದ ಕೃತ್ಯ

( Petrol Tanker Accident Charmadi Ghat Near Moodigere Taluk Chikkamgaluru )

Comments are closed.