ಭಾನುವಾರ, ಏಪ್ರಿಲ್ 27, 2025
HomeNational4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ...

4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

- Advertisement -

Indian Government bans anti-cold drug combination : ಸಣ್ಣ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಎಚ್ಚರವಾಗಿರಬೇಕು. ಅನಾರೋಗ್ಯ ಸಮಸ್ಯೆ ಎದುರಾದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಅದ್ರಲ್ಲೂ ಕೆಲವೊಂದು ಶೀತದ ಔಷಧದ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿದೆ.  ಇಂಡಿಯನ್ ಡ್ರಗ್ ರೆಗ್ಯುಲೇಟರ್ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಶಿಶು ಹಾಗೂ 4 ವರ್ಷದ ಒಳಗಿನ ಮಕ್ಕಳಿಗೆ ನೀಡಲಾಗುತ್ತಿರುವ ಶೀತ ವಿರೋಧಿ ಕಾಕ್ಟೈಲ್ ಔಷಧ ಸಂಯೋಜನೆಯ ಮೇಲೆ ನಿಷೇಧ ಹೇರಿದೆ. ಅಲ್ಲದೇ ಅದಕ್ಕೆ ಅನುಗುಣವಾಗಿ ಔಷಧಿಗಳನ್ನು ಲೇಬಲ್‌ ಮಾಡಬೇಕು ಎಂದು ಆದೇಶಿಸಿದೆ.

ಇಂಡಿಯನ್ ಡ್ರಗ್ ರೆಗ್ಯುಲೇಟರ್ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಇಂತಹ ಔಷಧಗಳನ್ನು ನೀಡಬಾರದು ಎಂದಿದೆ. ಅಲ್ಲದೇ ತಜ್ಞರ ಸಮಿತಿ ಕೂಡ ಈ ನಿರ್ಧಾರವನ್ನು ಶಿಫಾರಸು ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

Indian Government bans anti-cold drug combination for kids aged under 4
Image Credit to Original Source

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ : ನಿಮಗೂ ಬಂದಿದ್ಯಾ ಒಮ್ಮೆ ಚೆಕ್‌ ಮಾಡಿ

ಪ್ರಸ್ತುತ ಮಕ್ಕಳಿಗೆ ನೀಡಲಾಗುತ್ತಿರುವ ಔಷಧ ಕ್ಲೋರ್‌ಫೆನಿರಮೈನ್ ಮೆಲೇಟ್ ಮತ್ತು ಫಿನೈಲ್‌ಫ್ರಿನ್ ಎಂಬ ಎರಡು ಔಷಧಿಗಳ ಸಮ್ಮಿಶ್ರಣವಾಗಿದೆ. ಇದನ್ನು ನಾಲ್ಕು ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ನೀಡಬಾರದು. ಜೂನ್ 6, 2023 ರಂದು SEC ನ ಶಿಫಾರಸಿನ ನಂತರ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಮುಖ್ಯಸ್ಥ ರಾಜೀವ್ ಸಿಂಗ್ ರಘುವಂಶಿ ಅವರು ಈ ಕುರಿತು ಡಿಸೆಂಬರ್ 18 ರಂದು ಆದೇಶ ಹೊರಡಿಸಿದ್ದಾರೆ.

ಕ್ಲೋರ್ಫೆನಿರಮೈನ್ ಮೆಲೇಟ್ IP 2mg ಹೊಂದಿರುವ ಸಾಮಾನ್ಯ ಶೀತದ ಸ್ಥಿರ-ಡೋಸ್ ಸಂಯೋಜನೆಯ (FDC), ಫೀನೈಲ್ಫ್ರಿನ್ HCL IP 5 mg ಪ್ರತಿ ಮಿಲಿ ಹನಿಗಳು ಲೇಬಲ್‌ ಹಾಗೂ ಪ್ಯಾಕೇಟ್‌ ಮೇಲೆ ಎಚ್ಚರಿಕೆಯನ್ನು ನಮೂದಿಸುವಂತೆ ಸೂಚಿಸಿವೆ. ಎಫ್‌ಡಿಸಿ ಆಫ್‌ Chlorpheniramine Maleate IP 2mg Phenylephrine HCI IP 5mg ಡ್ರಾಪ್/ml ಬಳಕೆ ಮಾಡದಂತೆ ಪ್ರೊ. ಕೊಕಾಟೆ ಸಮಿತಿ ಸೂಚಿಸಿದೆ.

ಇದನ್ನೂ ಓದಿ : ಭಾರತದಲ್ಲಿ ಕೊರೊನಾ ಭೀತಿ, ಜಾರಿಯಾಗುತ್ತಾ ಲಾಕ್‌ಡೌನ್‌ ? ಸರಕಾರ ಮಾರ್ಗಸೂಚಿಯಲ್ಲೇನಿದೆ ?

ಮಕ್ಕಳಿಗೆ ಅನುಮೋದನೆಗೆ ಒಳಪಟ್ಟಿರದ ಶೀತ ವಿರೋಧಿ ಔಷಧಗಳನ್ನು ನೀಡುವುದು ಕಳವಳಕಾರಿ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ. ಕ್ಲೋರ್‌ಫೆನಿರಮೈನ್ ಮಲೇಟ್ IP 2mg ಫೀನೈಲ್‌ಫ್ರಿನ್ HCL IP 5mg ಡ್ರಾಪ್/ml ನ FDC ಬಳಕೆಯನ್ನು ಸಮಿತಿಯ ಮುಂದೆ ಚರ್ಚಿಸಲಾಗಿದೆ. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಎಫ್‌ಡಿಸಿಯನ್ನು ಬಳಸಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.

Indian Government bans anti-cold drug combination for kids aged under 4
Image Credit to Original Source

ಇದನ್ನೂ ಓದಿ : ಕರ್ನಾಟಕದಲ್ಲಿ ಕೋವಿಡ್‌ -19 ಪ್ರಕರಣ ಹೆಚ್ಚಳ, 24 ಗಂಟೆಯಲ್ಲಿ 2 ಸಾವು

Indian Government bans anti-cold drug combination for kids aged under 4

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular