IPL 2024 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರೋಹಿತ್‌ ಶರ್ಮಾ : CSK ಸಿಇಓ ಮಹತ್ವದ ಹೇಳಿಕೆ

Rohit Sharma IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian premier league) ಮಿನಿ ಹರಾಜು (IPL 2024 Auction) ಪ್ರಕ್ರಿಯೆ ಈಗಾಗಲೇ ಮುಕ್ತಾಯವನ್ನು ಕಂಡಿದೆ. ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡ್ತಾರೆ ಅನ್ನೋ ಮಾತುಗಳು ಕೇಳಿಬಂದಿದೆ.

Rohit Sharma IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian premier league) ಮಿನಿ ಹರಾಜು (IPL 2024 Auction) ಪ್ರಕ್ರಿಯೆ ಈಗಾಗಲೇ ಮುಕ್ತಾಯವನ್ನು ಕಂಡಿದೆ. ಈಗಾಗಲೇ ಎಲ್ಲಾ ಹತ್ತು ತಂಡಗಳು ಆಟಗಾರರನ್ನು ಖರೀದಿ ಮಾಡಿವೆ. ಈ ನಡುವಲ್ಲೇ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡ್ತಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದಕ್ಕೆ ಸಿಎಸ್‌ಕೆ (CSK )ತಂಡ ಸಿಇಓ ಸ್ಪಷ್ಟನೆ ಕೊಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಮಿನಿ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆದಿದೆ. ಮುಂದಿನ ಐಪಿಎಲ್‌ಗಾಗಿ ಎಲ್ಲಾ ತಂಡಗಳು ಬಲಾಢ್ಯ ಆಟಗಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಮುಂಬೈ ಇಂಡಿಯನ್ಸ್‌ ತಂಡಕ್ಕೆ ಐದು ಬಾರಿ ಐಪಿಎಲ್‌ ಟ್ರೋಫಿಯನ್ನು ಗೆಲ್ಲಿಸಿಕೊಟ್ಟ ರೋಹಿತ್‌ ಶರ್ಮಾ ಇದೀಗ ಸುದ್ದಿಯಲ್ಲಿದ್ದಾರೆ.

Rohit Sharma for IPL 2024 Chennai Super Kings CSK CEO Important Statement
Image Credit to Original Source

ಟೀಂ ಇಂಡಿಯಾದ ನಾಯಕನಾಗಿರುವ ರೋಹಿತ್‌ ಶರ್ಮಾ ವಿಶ್ವಕಪ್‌ ಗೆಲ್ಲುವಲ್ಲಿ ವಿಫಲರಾಗಿದ್ದರು. ಜೊತೆಗೆ ಕಳೆದ ಎರಡು ವರ್ಷಗಳಿಂದಲೂ ಐಪಿಎಲ್‌ ಪಂದ್ಯಾವಳಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಮುಂಬೈ ತಂಡ ಹೀನಾಯ ಪ್ರದರ್ಶನ ನೀಡಿದ ಬೆನ್ನಲ್ಲೇ ಈ ಬಾರಿ ಮುಂಬೈ ಇಂಡಿಯನ್ಸ್‌ ತಂಡ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡಕ್ಕ ಕರೆತಂದು ನಾಯಕತ್ವವನ್ನು ನೀಡಿದೆ.

ಇದನ್ನೂ ಓದಿ : IPL 2024 : ಐಪಿಎಲ್‌ನಲ್ಲಿ ಈ ಬಾರಿ ಯಾವ ತಂಡ ಬೆಸ್ಟ್‌ : ಇಲ್ಲಿದೆ ಎಲ್ಲಾ 10 ತಂಡಗಳ ಆಟಗಾರರ ಸಂಪೂರ್ಣ ವಿವರ

ಇದರ ಬೆನ್ನಲ್ಲೇ ರೋಹಿತ್‌ ಶರ್ಮಾ ಮುಂಬೈ ತೊರೆಯುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ರೋಹಿತ್‌ ಶರ್ಮಾ ಪ್ರತಿನಿಧಿಸುತ್ತಾರೆಂದು ಹೇಳಲಾಗಿತ್ತು. ನಂತರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗ್ತಾರೆ ಎನ್ನಲಾಗಿತ್ತು. ಆದ್ರೀಗ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಾರೆ ಎಂಬ ಮಾತು ಸೋಶಿಯಲ್‌ ಮೀಡಿಯಾದಲ್ಲಿ ಕೇಳಿಬರುತ್ತಿದೆ.

Rohit Sharma for IPL 2024 Chennai Super Kings CSK CEO Important Statement
Image Credit to Original Source

ರೋಹಿತ್‌ ಶರ್ಮಾ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುವ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ರೋಹಿತ್‌ ಶರ್ಮಾ ಚೆನ್ನೈ ಪರ ಆಡುವುದು ಕೇವಲ ವದಂತಿ ಅಷ್ಟೇ, ರೋಹಿತ್‌ ಶರ್ಮಾ ಅವರನ್ನು ಆಯ್ಕೆ ಮಾಡುವ ಉದ್ದೇಶ ನಮ್ಮ ತಂಡಕ್ಕೆ ಇಲ್ಲ. ಮುಖ್ಯವಾಗಿ ನಾವು ಯಾವುದೇ ಆಟಗಾರರನ್ನು ವ್ಯಾಪಾರ ಮಾಡುವುದಿಲ್ಲ. ಮುಂಬೈ ಇಂಡಿಯನ್ಸ್‌ ತಂಡದ ಜೊತೆಗೆ ವ್ಯಾಪಾರ ಮಾಡಲು ನಮ್ಮಲ್ಲಿ ಯಾವುದೇ ಆಟಗಾರರು ಇಲ್ಲ ಎಂದಿದ್ದಾರೆ.

ಇದನ್ನೂ ಓದಿ : IPL ಹರಾಜು 2024 : ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪ್ರತಿನಿಧಿಸಿದ ರಿಷಬ್‌ ಪಂತ್‌

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಹೇಂದ್ರ ಸಿಂಗ್‌ ಧೋನಿ ಈ ಬಾರಿಯೂ ಮುನ್ನೆಡೆಸಲಿದ್ದಾರೆ. ಚೆನ್ನೈ ತಂಡ ಕಳೆದ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು, ಈ ಬಾರಿಯೂ ಕೂಡ ಅತ್ಯಂತ ಬಲಿಷ್ಟವಾಗಿದೆ. ಯುವ ಹಾಗೂ ಅನುಭವಿ ಆಟಗಾರರನ್ನು ಹೊಂದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಈ ಬಾರಿಯೂ ಐಪಿಎಲ್‌ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ.

ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ಆಯ್ಕೆಯಾದ ನಂತರದಲ್ಲಿ ರೋಹಿತ್‌ ಶರ್ಮಾ, ಸೂರ್ಯ ಕುಮಾರ್‌ ಯಾದವ್‌ ಹಾಗೂ ಜಸ್ಪ್ರಿತ್‌ ಬೂಮ್ರಾ ಅವರು ತಂಡವನ್ನು ತೊರೆಯುತ್ತಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಆದರೆ ಹಾರ್ದಿಕ್‌ ಪಾಂಡ್ಯ ಅವರನ್ನು ನಾಯಕನಾಗಿ ನೇಮಕ ಮಾಡುವ ಮೊದಲು ಎಲ್ಲಾ ಆಟಗಾರರ ಒಪ್ಪಿಗೆಯನ್ನು ಪಡೆಯಲಾಗಿತ್ತು ಎಂದು ಮುಂಬೈ ಇಂಡಿಯನ್ಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಪ್ಯಾಟ್‌ ಕಮಿನ್ಸ್‌ ಐಪಿಎಲ್‌ನ ದುಬಾರಿ ಆಟಗಾರ : ಐಪಿಎಲ್‌ನಲ್ಲೇ ದಾಖಲೆಯ 20.50 ಕೋಟಿಗೆ ಖರೀದಿಸಿದ ಹೈದ್ರಾಬಾದ್‌

Rohit Sharma for IPL 2024 Chennai Super Kings : CSK CEO Important Statement
.

Comments are closed.