Instagram server down:ಜಗತ್ತಿನಾದ್ಯಂತ Instagram ಸರ್ವರ್‌ ಡೌನ್‌ : ಕ್ಷಮೆಯಾಚಿಸಿದ ಇನ್ಟಾಗ್ರಾಂ

ನವದೆಹಲಿ : (Instagram server down) ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆಯಾಗಿರುವ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿದೆ. ಇದರಿಂದಾಗಿ ಕೋಟ್ಯಾಂತರ ಬಳಕೆದಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್‌ಸ್ಟಾಗ್ರಾಂ ಖಾತೆ ಓಪನ್‌ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೋಟೋ, ವಿಡಿಯೋ ಅಪ್‌ಲೋಡ್‌ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಇನ್‌ಸ್ಟಾಗ್ರಾಂ ತನ್ನ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.

(Instagram server down) ನಿನ್ನೆ ರಾತ್ರಿಯಿಂದಲೇ ಇನ್‌ಸ್ಟಾಗ್ರಾಂನಲ್ಲಿ ಈ ತೊಂದರೆ ಕಾಣಿಸಿಕೊಂಡಿದೆ. ಎಲ್ಲಾ ಇನ್ಟಾಗ್ರಾಂ ಬಳಕೆದಾರರಿಗೆ ಸಮಸ್ಯೆ ಉಂಟಾಗಿಲ್ಲ ಕೆಲವರಿಗೆ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ. ಇನ್ಟಾಗ್ರಾಂ ಪುಟವನ್ನು ಪ್ರವೇಶಿಸುವಾಗ ವಿಳಂಬ, ಇಲ್ಲವಾದಲ್ಲಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರಿಗೆ ಸ್ಟೋರಿ ನೊಡಲು ಆಗುತ್ತಿಲ್ಲ.
Down detectore ನ ಪ್ರಕಾರ ಇಂದು ಬೆಳಗ್ಗೆ 9.30 ರವರೆಗೂ ಸುಮಾರು 20,000 ಅಧಿಕ ಮಂದಿ ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.

ಬಳಕೆದಾರರು ಇಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದರು ಇನ್ಟಾಗ್ರಾಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಬಳಕೆದಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ ನಲ್ಲಿ ಇನ್ಟಾಗ್ರಾಂ ನಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಇನ್ಟಾಗ್ರಾಂ ಡೌನ್‌ ಹ್ಯಾಶ್‌ ಟ್ಯಾಗ್‌ನೊಂದಿಗೆ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಮೀಮ್ಸ, ಟ್ರೋಲ್‌ ಮಾಡುವ ಮೂಲಕ ಸಮಸ್ಯೆಯನ್ನ ವ್ಯಕ್ತಪಡಿಸಿದ್ದರು. ಇದಕ್ಕೆಲ್ಲ ಇನ್ಟಾಗ್ರಾಂ ನವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ ನಟ ಕಿಚ್ಚ ಸುದೀಪ್

ಇದನ್ನೂ ಓದಿ:ಶಾಲಾ ಬ್ಯಾಗ್ ತೂಕ ಕಡಿಮೆ ಮಾಡಿ : ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಇನ್‌ಸ್ಟಾಗ್ರಾಂ ಸರ್ವರ್‌ ಯಾವ ಕಾರಣಕ್ಕೆ ಸಮಸ್ಯೆ ಉಂಟಾಗಿದೆ ಅನ್ನೋದು ತಿಳಿದು ಬಂದಿಲ್ಲ. ಆದರೆ ತಾಂಕ್ರಿಕ ಸಮಸ್ಯೆಯ ಪರಿಹಾರಕ್ಕೆ ತಜ್ಞರು ಪ್ರಯತ್ನಿಸುತ್ತಿದ್ದಾರೆ ಎಂದು ಇನ್ಟಾಗ್ರಾಂ ಹೇಳಿಕೊಂಡಿದೆ. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಕಾರ್ಯನಿರ್ವಹಿಸುತ್ತೇವೆ ಎಂದು ಖಚಿತಪಡಿಸಿದೆ.

ಕೇಲವರು ಇನ್ಟಾಗ್ರಾಂ ಪ್ರವೇಶಿಸಲು ಸಮಸ್ಯೆ ಎದುರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಇನ್‌ಸ್ಟಾಗ್ರಾಂ ಕ್ಷಮೆ ಯಾಚಿಸಿದೆ. ಆದಷ್ಟು ಶೀಘ್ರದಲ್ಲಿ ಎಲ್ಲಾ ಸಮಸ್ಯೆಯನ್ನು ಪರಿಹಾರ ಮಾಡುವುದಾಗಿ ಇನ್‌ಸ್ಟಾಗ್ರಾಂ ಟ್ವೀಟ್‌ ಮಾಡಿದೆ.

Instagram servers down around the world : Instagram apologizes

Comments are closed.