Rohit Sharma World No1 : T20 Cricket ನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕವೇ 2328 ರನ್ ; ಹಿಟ್‌ಮ್ಯಾನ್ ರೋಹಿತ್ ಜಗತ್ತಿಗೇ ನಂ.1

ಬೆಂಗಳೂರು:Rohit Sharma World No1 : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಿಕೆಟ್ ಜಗತ್ತಿನಲ್ಲಿ ಹಿಟ್ ಮ್ಯಾನ್ ಎಂದೇ ಫೇಮಸ್. ಲೀಲಾಜಾಲವಾಗಿ ಬೌಂಡರಿ, ಸಿಕ್ಸರ್’ಗಳನ್ನು ಬಾರಿಸುವ ಕಾರಣಕ್ಕೆ ರೋಹಿತ್ ಅವರನ್ನು ಹಿಟ್’ಮ್ಯಾನ್ ಎಂದು ಕರೆಯಲಾಗುತ್ತದೆ.

ಟಿ20 ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಹಿಟ್’ಮ್ಯಾನ್ ಎಂಬ ಹೆಸರಿಗೆ ತಕ್ಕಂತೆ ಆಡುತ್ತಾರೆ. ಕೇವಲ ಬೌಂಡರಿ ಸಿಕ್ಸರ್’ಗಳ ಮೂಲಕವೇ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 2328 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್ ಅಂದ್ರೆ ಬೌಂಡರಿ ಸಿಕ್ಸರ್’ಗಳ ಹಬ್ಬ. ಮೊದಲೇ ಹೆಸರು ಹಿಟ್’ಮ್ಯಾನ್.. ಆ ಹೆಸರಿಗೆ ತಕ್ಕಂತೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಬೌಂಡರಿ-ಸಿಕ್ಸರ್’ಗಳ ಸುರಿಮಳೆ ಸುರಿಸಿದ್ದಾರೆ. ಆಡಿರುವ 137 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 324 ಬೌಂಡರಿಗಳು ಹಾಗೂ 172 ಸಿಕ್ಸರ್’ಗಳನ್ನು ಬಾರಿಸಿರುವ ರೋಹಿತ್ ಶರ್ಮಾ, ತಾವು ಗಳಿಸಿರುವ 3,631 ರನ್’ಗಳಲ್ಲಿ ಸಿಂಹಪಾಲನ್ನು ಬೌಂಡರಿ-ಸಿಕ್ಸರ್’ಗಳ ಮೂಲಕವೇ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಬೌಂಡರಿ-ಸಿಕ್ಸರ್’ಗಳ ಮೂಲಕವೇ ಅತೀ ಹೆಚ್ಚು ರನ್ ಗಳಿಸಿರುವವರ ಸಾಲಿನಲ್ಲಿ ನ್ಯೂಜಿಲೆಂಡ್’ನ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ (2256 ರನ್) 2ನೇ ಸ್ಥಾನದಲ್ಲಿದ್ದಾರೆ. ಐರ್ಲೆಂಡ್ ಆಟಗಾರ ಪಾಲ್ ಸ್ಟಿರ್ಲಿಂಗ್ (2024 ರನ್) 3ನೇ ಸ್ಥಾನದಲ್ಲಿದ್ರೆ, ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ 1900 ರನ್’ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 105 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಇದುವರೆಗೆ 319 ಬೌಂಡರಿ ಹಾಗೂ 104 ಸಿಕ್ಸರ್’ಗಳನ್ನು ಬಾರಿಸಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ : (Rohit Sharma World No1) ಬೌಂಡರಿ-ಸಿಕ್ಸರ್’ಗಳ ಮೂಲಕ ಅತೀ ಹೆಚ್ಚು ರನ್ (ಟಾಪ್-5)

  1. ರೋಹಿತ್ ಶರ್ಮಾ (ಭಾರತ): 324 ಬೌಂಡರಿ, 172 ಸಿಕ್ಸರ್, 2328 ರನ್
  2. ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) : 306 ಬೌಂಡರಿ, 172 ಸಿಕ್ಸರ್, 2256 ರನ್
  3. ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್) : 344 ಬೌಂಡರಿ, 111 ಸಿಕ್ಸರ್, 2042 ರನ್
  4. ವಿರಾಟ್ ಕೊಹ್ಲಿ (ಭಾರತ) : 319 ಬೌಂಡರಿ, 104 ಸಿಕ್ಸರ್, 1900 ರನ್
  5. ಆರೋನ್ ಫಿಂಚ್ (ಆಸ್ಟ್ರೇಲಿಯಾ) : 289 ಬೌಂಡರಿ, 118 ಸಿಕ್ಸರ್, 1864 ರನ್

ಇದನ್ನೂ ಓದಿ : India vs Australia 2nd T20: ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯ; ತಂಡದಲ್ಲಿ ಇದೊಂದು ಬದಲಾವಣೆ ಮಾಡದಿದ್ದರೆ ಗೆಲುವು ಕಷ್ಟ.. ಕಷ್ಟ

ಇದನ್ನೂ ಓದಿ : KL Rahul Athiya Shetty: ಪ್ರಿಯಕರನ ಫಿಫ್ಟಿಗೆ ಪ್ರೇಯಸಿಯ ಹೃದಯ ಮುದ್ರೆ; ರಾಹುಲ್ ಅರ್ಧಶತಕವನ್ನುಆಥಿಯಾ ಶೆಟ್ಟಿ ಸಂಭ್ರಮಿಸಿದ್ದು ಹೀಗೆ

Rohit Sharma Record T20 Cricket 2328 runs in boundaries and Sixes

Comments are closed.