ಸೋಮವಾರ, ಏಪ್ರಿಲ್ 28, 2025
HomeNationalಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ : ಮ್ಯೂಸಿಕ್ ಫೆಸ್ಟ್‌ನಲ್ಲಿ 260 ಮೃತದೇಹಗಳು ಪತ್ತೆ, ಸಾವಿನ ಸಂಖ್ಯೆ 1,100ಕ್ಕೆ ಏರಿಕೆ

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ : ಮ್ಯೂಸಿಕ್ ಫೆಸ್ಟ್‌ನಲ್ಲಿ 260 ಮೃತದೇಹಗಳು ಪತ್ತೆ, ಸಾವಿನ ಸಂಖ್ಯೆ 1,100ಕ್ಕೆ ಏರಿಕೆ

- Advertisement -

ನವದೆಹಲಿ : israel-palestine conflict : ಪ್ಯಾಲಿಸ್ಥೈನ್‌ ಮೂಲದ ಉಗ್ರರ ದಾಳಿಗೆ ಇಸ್ರೇಲ್‌ ನಲುಗಿದೆ. ಮ್ಯೂಸಿಕ್‌ ಫೆಸ್ಟ್‌ನಲ್ಲಿ (music fest ) ಪಾಲ್ಗೊಂಡಿದ್ದವರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 260 ಮೃತದೇಹಗಳು ಪತ್ತೆಯಾಗಿದ್ದು, ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 1,100ಕ್ಕೆ ಏರಿಕೆ ಕಂಡಿದೆ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಿಂದಾಗಿ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಜರುಸಲೇಂನ ಗಾಜಾಪಟ್ಟಿಯ ಬಳಿಯಲ್ಲಿ ರಾತ್ರಿಯಿಡಿ ಪ್ರಕೃತಿ ಸಂಗೀತ ಉತ್ಸವದ ಸಂಭ್ರಮದಲ್ಲಿದ್ದರು. ಈ ವೇಳೆಯಲ್ಲಿ ಉಗ್ರರು ಏಕಾಏಕಿ ದಾಳಿ ನಡೆಸಿದ್ದು, ಮ್ಯೂಸಿಕ್‌ ಫೆಸ್ಟ್‌ನಲ್ಲಿ ಪಾಲ್ಗೊಂಡಿದ್ದ 260 ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

israel-palestine conflict 260 Death bodies found at music fest America support israel
Image Credit to Original Source

ಇಸ್ರೇಲ್‌ ಕೂಡ ಉಗ್ರರ ದಾಳಿಯನ್ನು ಹಿಮ್ಮೆಟಿಸಲು ಸಕಲ ಪ್ರಯತ್ನಗಳನ್ನೂ ನಡೆಸುತ್ತಿದೆ ಎಂದು ಇಸ್ರೇಲಿ ರಕ್ಷಣಾ ಸೇವೆ ಝಕಾ ವರದಿಯನ್ನು ಆಧರಿಸಿ ಇಂಡಿಯಾ ಡಾಟ್‌ ಕಾಂ ವರದಿ ಮಾಡಿದೆ. ಅಲ್ಲದೇ ಸಾವಿನ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಅಮೇರಿಕಾದ US ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ 1,000 ಹಮಾಸ್ ಉಗ್ರರು ಇಸ್ರೇಲ್‌ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಪ್ಯಾಲಿಸ್ತೈನ್‌ ದಾಳಿಯ ಬೆನ್ನಲ್ಲೇ ಇಸ್ರೇಲ್‌ ಸರಕಾರ ಕೂಡ ಅಧಿಕೃತವಾಗಿ ಯುದ್ದವನ್ನು ಘೋಷಣೆ ಮಾಡಿದೆ.

ಇಸ್ರೇಲ್‌ ಮಿಲಿಟರಿ ಪಡೆ ಈಗಾಗಲೇ ಇಸ್ರೇಲ್‌ನ ದಕ್ಷಿಣ ಪಟ್ಟಣಗಳಲ್ಲಿ ಉಳಿದಿರುವ ಉಗ್ರರನ್ನು ಹೊಡೆದು ಉರುಳಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಇನ್ನೊಂದೆಡೆಯಲ್ಲಿ ಉಗ್ರರು ಗಾಜಾಪಟ್ಟಿಯ ಮೇಲೆ ತನ್ನ ಬಾಂಬ್‌ ದಾಳಿಯನ್ನು ಹೆಚ್ಚಳ ಮಾಡಿದೆ. ಈಗಾಗಲೇ ಎರಡೂ ಕಡೆಗಳಿಂದ ಸುಮಾರು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಇದನ್ನೂ ಓದಿ : ಹೊಸ ಕಾರ್ಮಿಕ ನೀತಿ : ವಾರಕ್ಕೆ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ

ಇಸ್ರೇಲಿ ರಕ್ಷಣಾ ಸೇವೆ ಝಾಕಾ ಪ್ರಕಾರ, ಪ್ಯಾಲೆಸ್ಟೈನ್ ಮೂಲದ ಹಮಾಸ್ ಉಗ್ರಗಾಮಿಗಳ ದಾಳಿಗೆ ಒಳಗಾದ ಸಾವಿರಾರು ಜನರು ಭಾಗವಹಿಸಿದ್ದ ಗಾಜಾ ಪಟ್ಟಿಯ ಬಳಿ ರಾತ್ರಿಯಿಡೀ ನಡೆದ ಪ್ರಕೃತಿ ಸಂಗೀತ ಉತ್ಸವದಿಂದ ರಕ್ಷಣಾ ತಂಡವು ಸುಮಾರು 260 ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ 24 ಗಂಟೆಗಳ ನಂತರ ಇಸ್ರೇಲ್‌ ಪಡೆಗಳು ದೇಶದೊಳಗೆ ತಂಗಿದ್ದ ಉಗ್ರರನ್ನು ಹೊಡೆದು ಉರುಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಸ್ರೇಲ್‌ನಲ್ಲಿ ಐದು ದಶಕಗಳ ಬಳಿಕ ಇದೀಗ ಅತೀ ಹೆಚ್ಚು ಸಾವಿನ ಪ್ರಕರಣ ಸಂಘವಿಸಿದೆ. ಅಲ್ಲದೇ ಮ್ಯೂಸಿಕ್‌ ಫೆಸ್ಟ್‌ನಲ್ಲಿ ಸುಮಾರು 400 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

israel-palestine conflict 260 Death bodies found at music fest America support israel
Image Credit to Original Source

ಇನ್ನು ಉಗ್ರರ ದಾಳಿಯಿಂದ ಸಾವಿರಾರ ಮಂದಿ ಸಾವ್ನಪ್ಪಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ ಸೇನೆಯು ಗಾಜಾದಲ್ಲಿ ಪ್ರತಿದಾಳಿ ನಡೆಸಿದೆ. ಇನ್ನು ಗಾಜಾದಲ್ಲಿ ಕನಿಷ್ಠ 70,000 ಪ್ಯಾಲೆಸ್ಟೀನಿಯಾದವರು ಯುಎನ್ ನಿರ್ವಹಿಸುವ ಶಾಲೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ಆರಂಭದಲ್ಲಿ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದ್ದಾರೆ. ನಂತರದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಇಸ್ರೇಲ್‌ ದಾಳಿಯ ಭೀಕರತೆಯನ್ನು ಇಸ್ರೇಲ್‌ ವಾಹಿನಿಗಳು ಬಿತ್ತರಿಸುತ್ತಿದ್ದು, ದೃಶ್ಯಗಳು ಮನಕಲಕುವಂತಿದೆ. ದಾಳಿಯ ಬೆನ್ನಲ್ಲೇ ಇದೀಗ ಅಮೇರಿಕಾ ಇಸ್ರೇಲ್‌ ಬೆಂಬಲಕ್ಕೆ ನಿಂತಿದ್ದು, ಯುದ್ದಯಂತ್ರಗಳನ್ನು ಕಳುಹಿಸಿಕೊಟ್ಟಿದೆ.

ಇದನ್ನೂ ಓದಿ : ಬಿಜೆಪಿಗೆ ಮತ್ತೊಂದು ಶಾಕ್: ಕೈಪಾಳಯ ಸೇರಿದ ಬಿಜೆಪಿ ಮಾಜಿಶಾಸಕಿ ಪೂರ್ಣಿಮಾ ಶ್ರೀನಿವಾಸ್

ಇನ್ನು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್‌ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು, ಮಾತುಕತೆ ನಡೆಸಿದ್ದಾರೆ. ಅಲ್ಲದೇ ಹಮಾಸ್‌ ಭಯಾತ್ಪದಕರ ದಾಳಿಗೆ ಒಳಗಾಗಿರುವ ಇಸ್ರೇಲ್‌ ಜನರಿಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಹಲವು ಮಿಲಿಟರಿ ಹಡಗು ಹಾಗೂ ವಿಮಾನಗಳನ್ನು ಈಗಾಗಲೇ ಅಮೇರಿಕಾ ಇಸ್ರೇಲ್‌ಗೆ ಕಳುಹಿಸಿಕೊಟ್ಟಿದೆ. ಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು F-35, F-15, F-16, ಮತ್ತು A-10 ವಿಮಾನಗಳು ಸೇರಿದಂತೆ US ಏರ್ ಫೋರ್ಸ್ ಯುದ್ಧ ವಿಮಾನ ಸ್ಕ್ವಾಡ್ರನ್‌ಗಳನ್ನು ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್‌ ಕೂಡ ಉಗ್ರರ ದಾಳಿಯನ್ನು ಎದುರಿಸಲು ಸರ್ವ ಸಜ್ಜಾಗಿದೆ. ಈಗಾಗಲೇ 100,000 ಕ್ಕೂ ಸೈನಿಕರನ್ನು ಭದ್ರತೆಗಾಗಿ ಸಜ್ಜುಗೊಳಿಸಲಾಗಿದೆ. ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್‌ನ ಮುಖ್ಯಸ್ಥ ಜಿಯಾದ್ ಅಲ್-ನಖಾಲಾ, ಇಸ್ರೇಲ್‌ನ ಮೇಲೆ ಹಮಾಸ್‌ನ ದಾಳಿಯ ಸಮಯದಲ್ಲಿ ಅಪಹರಿಸಿ ಗಾಜಾ ಪಟ್ಟಿಗೆ ಕೊಂಡೊಯ್ಯಲ್ಪಟ್ಟ 30 ಕ್ಕೂ ಹೆಚ್ಚು ಇಸ್ರೇಲಿಗಳನ್ನು ತನ್ನ ಬಣ ಹಿಡಿದಿದೆ ಎಂದು ತಿಳಿಸಿದ್ದಾರೆ ಎಂದು ಇಂಡಿಯಾ ಡಾಟ್‌ ಕಾಂ ವರದಿ ಮಾಡಿದೆ.

ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ

ಇಸ್ರೇಲ್‌ ಜೈಲಿನಲ್ಲಿ ಇರುವ ಎಲ್ಲಾ ಪ್ಯಾಲಿಸ್ತೀನ್‌ ಕೈದಿಗಳನ್ನು ಬಿಡುಗಡೆ ಮಾಡುವವರೆಗೂ ಬಂಧಿತರನ್ನು ಬಿಡುಗಡೆ ಮಾಡುವುದಿಲ್ಲ ಎಂದು ಉಗ್ರರು ಘೋಷಿಸಿದ್ದಾರೆ. ಇನ್ನು ಹಮಾಸ್‌ ಉಗ್ರರ ದಾಳಿಯ ಬೆನ್ನಲ್ಲೇ ಏರ್‌ ಇಂಡಿಯಾ ಸೇರಿದಂತೆ ಹಲವು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಟೆಲ್‌ ಅವೀವ್‌ಗೆ ವಿಮಾನಯಾನ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿವೆ.

ಇನ್ನು ಅಮೇರಿಕಾದ ಯುನೈಟೆಡ್ ಏರ್‌ಲೈನ್ಸ್, ಡೆಲ್ಟಾ ಏರ್ ಲೈನ್ಸ್ ಮತ್ತು ಅಮೇರಿಕನ್ ಏರ್‌ಲೈನ್ಸ್ ಕೂಡ ಏರ್ ಫ್ರಾನ್ಸ್‌ನಂತೆಯೇ ನೇರ ವಿಮಾನಗಳನ್ನು ಸ್ಥಗಿತಗೊಳಿಸಿದ್ದವು. ಇಸ್ರೇಲ್‌ ಬೆಂಬಲಕ್ಕೆ ಈಗಾಗಲೇ ಅಮೇರಿಕಾ ಬೆಂಬಲಿಸಿದ್ದು, ಇನ್ನಷ್ಟು ದೇಶಗಳು ಕೂಡ ಬೆಂಬಲ ಸೂಚಿಸುವ ಸಾಧ್ಯತೆಯಿದೆ.

Israel Palestine conflic 260 Death bodies found at music fest America support israel

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular