ಬಿಜೆಪಿಗೆ ಮತ್ತೊಂದು ಶಾಕ್: ಕೈಪಾಳಯ ಸೇರಿದ ಬಿಜೆಪಿ ಮಾಜಿಶಾಸಕಿ ಪೂರ್ಣಿಮಾ ಶ್ರೀನಿವಾಸ್

ಮೊನ್ನೆ ಮೊನ್ನೆ ಇಬ್ಬರು ಮಾಜಿಶಾಸಕರು ಕೈಪಾಳಯ ಸೇರಿದ ಬೆನ್ನಲ್ಲೇ ಈಗ ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ (Poornima Srinivas) ಕಮಲಪಾಳಯದಿಂದ ಹೊರಬಂದು ಕೈ ಜೊತೆ ಕೈ ಮಿಲಾಯಿಸಿದ್ದಾರೆ.

ಬೆಂಗಳೂರು : ನಾಯಕತ್ವದ ಕೊರತೆ, ಕಾಂಗ್ರೆಸ್ ನ ಗ್ಯಾರಂಟಿ ಅಬ್ಬರದಲ್ಲಿ ಕೊಚ್ಚಿಹೋಗಿರೋ ರಾಜ್ಯ ಬಿಜೆಪಿಗೆ (karnataka BJP) ಒಂದೊಂದೆ ಶಾಕ್ ಎದುರಾಗುತ್ತಿದೆ. ಕ್ರಿಕೆಟ್ ಆಟದಲ್ಲಿ ಒಂದೊಂದೆ ವಿಕೆಟ್ ಪತನವಾಗಿ ಪೆವಿಲಿಯನ್ ಸೇರುವಂತೆ ಬಿಜೆಪಿಯ ಒಂದೊಂದೆ ವಿಕೆಟ್ ಗಳು ಕಾಂಗ್ರೆಸ್ಎಂ (Congress) ಬ ಪೆವಿಲಿಯನ್ ಸೇರುತ್ತಿವೆ. ಮೊನ್ನೆ ಮೊನ್ನೆ ಇಬ್ಬರು ಮಾಜಿಶಾಸಕರು ಕೈಪಾಳಯ ಸೇರಿದ ಬೆನ್ನಲ್ಲೇ ಈಗ ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ (Poornima Srinivas) ಕಮಲಪಾಳಯದಿಂದ ಹೊರಬಂದು ಕೈ ಜೊತೆ ಕೈ ಮಿಲಾಯಿಸಿದ್ದಾರೆ.

Hiriyur BJP EX MLA Poornima Srinivas Joined Congress
Image Credit : Poornima Srinivas/FB

ಈಗಾಗಲೇ ಹಲವು ಭಾರಿ ಬಿಜೆಪಿಯಲ್ಲಿ ಸಿಗದ ಪ್ರಾಧಾನ್ಯತೆಯ ಬಗ್ಗೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಸಮಧಾನ ವ್ಯಕ್ತಪಡಿಸುತ್ತಲೇ ಬಂದಿದ್ದರು. ನಿಗಮ ಮಂಡಳಿ, ಸಚಿವ ಸ್ಥಾನ ಸೇರಿದಂತೆ ಯಾವುದೇ ಸಂದರ್ಭದಲ್ಲೂ ತಮ್ಮ ಜಾತಿಗೆ ಸಿಗದ ಪ್ರಾಧಾನ್ಯತೆ ಬಗ್ಗೆ ಪೂರ್ಣಿಮಾ ಹಲವು ಭಾರಿ ಬಹಿರಂಗವಾಗಿಯೇ ಅಸಮಧಾನ ತೋಡಿಕೊಂಡಿದ್ದರು. ಕೊನೆಗೆ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೇಟ್ ಪಡೆಯಲು ಪೂರ್ಣಿಮಾ ಶ್ರೀನಿವಾಸ ಹರಸಾಹಸ ಪಟ್ಟಿದ್ದರು.

ಇದನ್ನೂ ಓದಿ : ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಮುಳುವಾಗುತ್ತಾ ಬಿಎಂಎಸ್ ಪರಭಾರೆ ಹಗರಣ : ತನಿಖೆ ಆದೇಶಿಸಲು ಸಿಎಂ ಸಿದ್ದರಾಮಯ್ಯ ಸಿದ್ಧತೆ

ದುರಾದೃಷ್ಟ ಎಂಬಂತೆ ವಿಧಾನಸಭಾ ಚುನಾವಣೆಯಲ್ಲಿ ಹಿರಿಯೂರಿನಿಂದ ಸ್ಪರ್ಧಿಸಿದ್ದ ಪೂರ್ಣಿಮಾ ಸೋಲನ್ನು ಕಂಡಿದ್ದರು. ಇದಾದ ಬಳಿಕ ಪಕ್ಷದ ನಾಯಕರು ಪೂರ್ಣಿಮಾರನ್ನು ಮರೆತಿದ್ದರು. ಮಾತ್ರವಲ್ಲ ಸ್ವತಃ ಪೂರ್ಣಿಮಾ ಕೂಡ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ತಟಸ್ಥವಾಗಿ ಉಳಿದಿದ್ದರು.

ಈ ಮಧ್ಯೆ ಖಾಸಗಿ ಕಾರ್ಯಕ್ರಮದ ನೆಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪೂರ್ಣಿಮಾ ಶ್ರೀನಿವಾಸ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

Hiriyur BJP EX MLA Poornima Srinivas Joined Congress
Image Credit : Poornima Srinivas/FB

ಆದರೆ ಇದು ಖಾಸಗಿ ಭೇಟಿ ರಾಜಕೀಯ ಚರ್ಚೆಯಾಗಿಲ್ಲ ಎಂದು ಪೂರ್ಣಿಮಾ ಹೇಳಿಕೊಂಡಿದ್ದರು. ಆದರೆ ಈಗ ಪೂರ್ಣಿಮಾ ಶ್ರೀನಿವಾಸ ಬೇಷರತ್ತಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳೋದು ಖಚಿತವಾಗಿದೆ. ಇದೇ ಬರುವ ಅಕ್ಟೋಬರ್ 20 ರಂದು ಪೂರ್ಣಿಮಾ ಡಿಕೆಶಿ ಹಾಗೂ ಸಿಎಂ ಸಮ್ಮುಖದಲ್ಲಿ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರಂತೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಶಿರಹಟ್ಟಿಯ ಮಾಜಿ ಶಾಸಕ ರಾಮಣ್ಣ ಲಮಾಣಿ ಹಾಗೂ ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಯನ್ನು ಕಾಂಗ್ರೆಸ್ ಗೆ ಆಪರೇಷನ್ ಮಾಡಿದ್ದ ಡಿಸಿಎಂ ಡಿಕೆಶಿ ಆ ವೇಳೆ ಇನ್ನಷ್ಟು ಬಿಜೆಪಿ ನಾಯಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದಿದ್ದರು. ಈಗ ಆ ಮಾತು ನಿಜವಾಗಿದ್ದೂ ಒಬ್ಬೊಬ್ಬರು ಬಿಜೆಪಿಯ ಸೋತ ಹಾಗೂ ಉಪೇಕ್ಷಿತ ನಾಯಕರು ಕಾಂಗ್ರೆಸ್ ಹಾದಿ ತುಳಿಯಲು ಆರಂಭಿಸಿದ್ದಾರೆ.

Hiriyur BJP EX MLA Poornima Srinivas Joined Congress
Image Credit : Poornima Srinivas/FB

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜಕೀಯ ರಣಾಂಗಣಕ್ಕೆ ಇಳಿದಿರೋ ಡಿಕೆಶಿ ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಹೊಂದಿದ್ದಾರೆ. ಅದಕ್ಕಾಗಿಯೇ ಡಿಕೆಶಿ ತಳಮಟ್ಟದಿಂದ ಕೆಲಸ ಆರಂಭಿಸಿದ್ದಾರೆ.

ಮುಖ್ಯವಾಗಿ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿರೋ ಡಿಕೆಶಿ,ಜಾತಿವಾರು ಮತ ಸೆಳೆಯೋ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಪ್ರಭಾವ ಹೊಂದಿರೋ ಬಿಜೆಪಿಯ ಅತೃಪ್ತ ಹಾಗೂ ಅಸಮಧಾನಿತ ನಾಯಕರನ್ನು ಟಾರ್ಗೆಟ್ ಮಾಡಿದ್ದು, ಒಬ್ಬೊಬ್ಬರನ್ನೇ ಮನವೊಲಿಸಿ ಕಾಂಗ್ರೆಸ್ ಗೆ ಕರೆ ತರುತ್ತಿದ್ದಾರೆ.

ಎಐಸಿಸಿ ಮೀಟಿಂಗ್ ಹಿನ್ನೆಲೆಯಲ್ಲಿ ರವಿವಾರ ಸಿಎಂ ಸಿದ್ಧರಾಮಯ್ಯ ದೆಹಲಿಗೆ ತೆರಳಲು ಸಿದ್ಧವಾಗಿದ್ದರು. ಇದಕ್ಕೂ ಮುನ್ನವೇ ಡಿಸಿಎಂ ಡಿಕೆಶಿ ಪೂರ್ಣಿಮಾ ಶ್ರೀನಿವಾಸರನ್ನು ಸಿದ್ಧರಾಮಯ್ಯನವರಿಗೆ ಭೇಟಿ ಮಾಡಿಸಿದ್ದು, ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ : ಸಿಎಂ ಇಬ್ರಾಹಿಂ ಪಾಲಿಗೆ ಬಿಸಿತುಪ್ಪವಾದ ಮೈತ್ರಿ: ಜೆಡಿಎಸ್ ಬಿಡೋಕಾಗಲ್ಲ,ಕಾಂಗ್ರೆಸ್ ಸೇರೋಕಾಗಲ್ಲ !

ಪೂರ್ಣಿಮಾ ಶ್ರೀನಿವಾಸ್ ತಂದೆ ಕೃಷ್ಣಪ್ಪ ಕಾಂಗ್ರೆಸ್ ನಲ್ಲಿ ಸಚಿವರಾಗಿದ್ದರು. ಹೀಗಾಗಿ ಪೂರ್ಣಿಮಾಗೆ ಈ ಹಿಂದಿನಿಂದಲೂ ಕಾಂಗ್ರೆಸ್ ನೊಂದಿಗೆ ನಂಟಿದೆ. ಸದ್ಯ ಅಧಿಕೃತವಾಗಿ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆಗೊಳ್ಳೋದಾಗಿ ಘೋಷಿಸಿದ್ದಾರೆ. ಇದರಿಂದ ಕೆ.ಆರ್.ಪುರ ಸೇರಿದಂತೆ ಹಲವು ಕ್ಷೇತ್ರ ಗೆಲ್ಲಲು ಸಹಕಾರಿಯಾಗಲಿದೆ ಅನ್ನೋದು ಡಿಕೆಶಿ ಚಿಂತನೆ‌. ಒಟ್ಟಿನಲ್ಲಿ ಮೈತ್ರಿಗೆ ಆಫರೇಶನ್ ಮೂಲಕ ಸೆಡ್ಡು ಹೊಡೆಯಲು ಡಿಕೆಶಿ ಕಣಕ್ಕಿಳಿದಿದ್ದಾರೆ.

Hiriyur BJP EX MLA Poornima Srinivas Joined Congress

Comments are closed.