ಹೊಸ ಕಾರ್ಮಿಕ ನೀತಿ : ವಾರಕ್ಕೆ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ (AI) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೀಗ ಮುಂದಿನ ಪೀಳಿಗೆಯ ಉದ್ಯೋಗಿಗಳಿಗೆ ಮೂರುವರೆ ದಿನ ರಜೆ (Three And Half Day Holiday), ಮೂರುವರೆ ದಿನ ಕೆಲಸ (3 And Half Day Work ) ಸಿಗುವ ಸಾಧ್ಯತೆಯಿದೆ.

ನವದೆಹಲಿ : ಮಾಹಿತಿ ತಂತ್ರಜ್ಞಾನ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಅದ್ರಲ್ಲೂ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ (AI) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೀಗ ಮುಂದಿನ ಪೀಳಿಗೆಯ ಉದ್ಯೋಗಿಗಳಿಗೆ ಹೊಸ ಕಾರ್ಮಿಕ ನೀತಿಯ ಪ್ರಕಾರ ಮೂರುವರೆ ದಿನ ರಜೆ (Three And Half Day Holiday), ಮೂರುವರೆ ದಿನ ಕೆಲಸ (3 And Half Day Work ) ಸಿಗುವ ಸಾಧ್ಯತೆಯಿದೆ.

ಕೊರೊನಾ ವೈರಸ್‌ ಸೋಂಕಿನ ( Corona Virus) ಆಗಮನದ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳು ಕಂಡಿವೆ. ಬಹುತೇಕ ಸೇವೆ ನೀಡುವ ಕ್ಷೇತ್ರದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯೂ ಜಾರಿಯಾಗಿತ್ತು.

ಇದೀಗ ಐಟಿ ಉದ್ಯೋಗಿಗಳು ವಾರದಲ್ಲಿ ಐದು ದಿನ ಕೆಲಸ ಮಾಡಿ ಎರಡು ದಿನ ರಜೆ ಪಡೆಯುತ್ತಿದ್ದಾರೆ. ಆದರೆ ವರ್ಕ್‌ ಫ್ರಮ್‌ ಹೋಮ್‌ (Work From Home) ವ್ಯವಸ್ಥೆಯಿಂದಾಗಿ ಕೆಲವು ಕಂಪೆನಿಗಳು ಉದ್ಯೋಗಿಗಳನ್ನು ವಾರದಲ್ಲಿ ಒಮ್ಮೆ, ತಿಂಗಳಲ್ಲಿ ಒಮ್ಮೆ ಕಚೇರಿಗೆ ಕರೆಯಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ರಜೆಯ ವಿಚಾರದಲ್ಲಿ ಹಲವು ಬದಲಾವಣೆಗಳು ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : ವಿಶ್ವಕಪ್‌ 2023: ಜಿಯೋ ಹೊಸ 6 ಪ್ರಿಪೇಯ್ಡ್‌ ಫ್ಲಾನ್‌ : ಡಿಸ್ನಿ+ಹಾಟ್‌ಸ್ಟಾರ್ ಉಚಿತ ಜೊತೆ ಅನ್‌ಲಿಮಿಟೆಡ್‌ ಡೇಟಾ

ಮೂರು ದಿನಗಳ ಕಾಲ ಕಚೇರಿಯಿಂದ ಕೆಲಸ ಮೂರು ದಿನಗಳ ಕಾಲ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯು ಸದ್ಯ ಕೆಲವು ಕಂಪೆನಿಗಳಲ್ಲಿ ಜಾರಿಯಲ್ಲಿ ಆದರೆ ಇದೀಗ ಅಚ್ಚರಿಯ ಮಾಹಿತಿಯೊಂದು ಬಯಲಾಗಿದ್ದು, ಮೂರುವರೆ ದಿನಗಳ ಕಾಲ ಕೆಲಸ, ಮೂರುವರೆ ದಿನಗಳ ರಜೆ ಪಡೆಯುವ ದಿನಗಳು ದೂರವಿಲ್ಲ ಎನ್ನಲಾಗುತ್ತಿದೆ.

New Labour Rule in india 3 And Half Day Work And Three And Half Day Holiday Per Week
Image Credit : Economic Times

ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟಿರುವ AI (Artificial Intelligence ) ಮುಂದಿನ ಪೀಳಿಗೆಯ ಉದ್ಯೋಗಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ಸಾಧ್ಯತೆಯಿದೆ. AI – ಕೃತಕ ಬುದ್ಧಿಮತ್ತೆಯ ಆಗಮನದ ಹೆಚ್ಚು ಪರಿಣಾಮಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮೂರೂವರೆ ದಿನಗಳ ಕೆಲಸ ಕಾರ್ಯರೂಪಕ್ಕೆ ಬರಲಿದೆ ಎಂದು ಅಮೆರಿಕ ಮೂಲದ ಜೆಪಿ ಮೋರ್ಗಾನ್ ಚೇಸ್ & ಕಂ ಸಿಇಒ ಜೇಮೀ ಡಿಮನ್ ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದಲ್ಲಿ ಹೊಸ ಕಾರ್ಮಿಕ ನೀತಿ ಕೂಡ ಜಾರಿಯಾಗಬಹುದು. ಕೃತಕ ಬುದ್ದಿ ಮತ್ತೆಯ ಪರಿಣಾಮದಿಂದ ಕೆಲಸ ಮಾಡುವ ವಿಧಾನ ಬದಲಾಗಲಿದೆ. ಅಲ್ಲದೇ ಕಚೇರಿಯಲ್ಲಿ ಉದ್ಯೋಗಿಗಳ ಕರ್ತವ್ಯದ ಅವಧಿಯಲ್ಲಿಯೂ ಗಣನೀಯವಾಗಿ ಕಡಿಮೆಯಾಗಲಿದೆ. ಜೊತೆಗೆ ಕೆಲವೊಂದು ಕೆಲಸವು ಕಣ್ಮರೆ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಹೊಸ ರೇಷನ್‌ ಕಾರ್ಡ್‌ : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ

ಮುಂದಿನ ದಿನಗಳಲ್ಲಿ ಸಂಶೋಧನೆ, ವ್ಯಾಪಾರ, ಡೇಟಾ, ವಾಣಿಜ್ಯ, ಪ್ರತಿ ಅಪ್ಲಿಕೇಶನ್‌ ಸೇರಿ ಎಲ್ಲದ್ದಕ್ಕೂ AI ತಂತ್ರಜ್ಞಾನವನ್ನು ಅವಲಂಬಿಸಿದ್ರೆ ಮಾನವ ಕೇಂದ್ರಿತ ಉದ್ಯೋಗ ಕಡಿತವಾಗಲಿದೆ. ಸದ್ಯ ಕಾರ್ಪೋರೇಟ್‌ ಕಂಪೆನಿಗಳು ವಾರದಲ್ಲಿ ಐದು ದಿನಗಳ ಕಾಲ ಮಾತ್ರವೇ ಕೆಲಸದ ಅವಧಿಯನ್ನು ಅಳವಡಿಸಿವೆ.

ಅಷ್ಟೇ ಅಲ್ಲದೇ ಜಪಾನ್‌, ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿ ಕೆಲಸದ ಅವಧಿಯನ್ನು 4 ದಿನಗಳಿಗೆ ಇಳಿಸುವ ಪ್ರಯೋಗಗಳು ಆರಂಭವಾಗಿದೆ. ಕೆಲಸದ ಅವಧಿಯನ್ನು ಕಡಿಮೆ ಮಾಡುವುದರಿಂದ ಉತ್ಪಾದಕತೆ ಹೆಚ್ಚಳವಾಗಲಿದೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ

ಶೀಘ್ರದಲ್ಲಿಯೇ ಕೆಲವು ಕಂಪೆನಿಗಳು ಮೂರುವರೆ ದಿನಗಳ ಕಾಲ ಕೆಲಸದ ನಿಯಮವನ್ನು ಜಾರಿಗೆ ತಂದ್ರೆ ಯಾವುದೇ ಅಚ್ಚರಿಯಿಲ್ಲ. ಸರಕಾರಿ ಕಚೇರಿ ಗಳಲ್ಲಿಯೂ ವಾರದಲ್ಲಿ ಎರಡು ದಿನ ರಜೆ ನೀಡಬೇಕು ಅನ್ನೋ ಚರ್ಚೆ ಶುರುವಾಗಿದೆ. ಐಎ ತಂತ್ರಜ್ಞಾನದ ಪರಿಣಾಮ ಐಟಿ ಕಂಪೆನಿಯಲ್ಲಿ ಹಲವು ಬದಲಾವಣೆಗಳು ನಡೆಯುವ ಸಾಧ್ಯತೆಯಿದೆ.

New Labour Rule in india 3 And Half Day Work And Three And Half Day Holiday Per Week
Image Credit : Mint

ಸದ್ಯ ವರ್ಕ್‌ಫ್ರಂ ಹೋಮ್‌ ಅನ್ನೋ ಪದ್ದತಿ ಆರಂಭವಾದ ನಂತರದಲ್ಲಿ ಹಲವು ಉದ್ಯೋಗಿಗಳು ಈಗಾಗಲೇ ಮನೆಯಲ್ಲಿ ಕೆಲಸ ಮಾಡಿಕೊಂಡು, ತಮ್ಮ ಬಿಡುವಿನ ವೇಳೆಯಲ್ಲಿ ಕೃಷಿ, ಹೈನುಗಾರಿಕೆ, ತೋಟಗಾರಿಕೆಯತ್ತ ಗಮನ ಹರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೂರುವರೆ ದಿನಗಳ ಕಾಲ ಕೆಲಸ ನಿಯಮ ಜಾರಿಯಾದ್ರೆ ವಿದ್ಯಾವಂತರ ಕೃಷಿಯತ್ತ ವಾಲುವುದು ಬಹುತೇಕ ಖಚಿತ.

New Labour Rule in india 3 And Half Day Work And Three And Half Day Holiday Per Week

Comments are closed.