Jama Masjid: ಒಂಟಿ ಮಹಿಳೆಯರಿಗೆ ಜಾಮಾ ಮಸೀದಿ ಪ್ರವೇಶ ನಿಷೇಧ

ದೆಹಲಿ: (Jama Masjid) ಜಾಮಾ ಮಸೀದಿ ಸಂಕೀರ್ಣಕ್ಕೆ ಪ್ರವೇಶ ಪಡೆಯಲು ಮಹಿಳೆಯರು ಅವರ ಕುಟುಂಬದ ಪುರುಷ ಸದಸ್ಯರು ಜೊತೆಯಲ್ಲಿ ಇರಬೇಕು. ಒಂಟಿ ಮಹಿಳೆಯರು ಮಸೀದಿ ಸಂಕೀರ್ಣಕ್ಕೆ ಬರುವಂತಿಲ್ಲ ಎಂದು ದೆಹಲಿಯ ಜಾಮಾ ಮಸೀದಿ ಆಡಳಿತ ಸಮಿತಿ ಘೋಷಿಸಿದೆ. ಆದರೆ ಆಡಳಿತ ಮಂಡಳಿಯ ನಿರ್ಧಾರದ ವಿರುದ್ದ ಇದೀಗ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಜಾಮಾ ಮಸೀದಿ(Jama Masjid)ಯ ಪ್ರವೇಶ ದ್ವಾರದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು.ಒಂಟಿ ಮಹಿಳೆಗೆ ಮಸೀದಿಯ ಒಳಗೆ ಪ್ರವೇಶವಿಲ್ಲ ಪುರುಷರ ಜೊತೆ ಬಂದರೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ನಿಷೇಧಾಜ್ಞೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ನಿಷೇಧಾಜ್ಞೆಯ ವಿರುದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಉಲ್ಲೇಖದ ಕುರಿತಾಗಿ ಪ್ರತಿಕ್ರಿಯಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು, ಈ ವಿಷಯದ ಬಗ್ಗೆ ಜಾಮಾ ಮಸೀದಿ ಆಡಳಿತಕ್ಕೆ ನೋಟಿಸ್ ನೀಡುವುದಾಗಿ ಹೇಳಿದ್ದಾರೆ ಮತ್ತು ಅಂತಹ ನಿಷೇಧವನ್ನು ಹೊರಡಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ : PM Kisan Samman Nidhi Yojana : ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ‌ : 13 ನೇ ಕಂತಿಗೆ ಅರ್ಜಿ ಸಲ್ಲಿವುದು ಹೇಗೆ ? ಇಲ್ಲಿದೆ ಮಾಹಿತಿ

ಖಾನ್‌ ಅವರು “ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದನ್ನು ತಡೆಯಲು ನಿಷೇಧ ಹೇರಲಾಗಿದ್ದು, ನಮಾಜ್ ಮಾಡಲು ಬರುವವರಿಗೆ ತೊಂದರೆಯಾಗುತ್ತಿದೆ. ಮಸೀದಿಗೆ ಬರಲು ಕುಟುಂಬಗಳಿಗೆ ಮತ್ತು ವಿವಾಹಿತ ದಂಪತಿಗಳಿಗೆ ಯಾವುದೇ ನಿರ್ಬಂಧಗಳಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ : Provident Fund : ಪಿಎಫ್ ಖಾತೆಯ ಬ್ಯಾಲೆನ್ಸ್‌ನ್ನು ಚೆಕ್‌ ಮಾಡುವುದು ಹೇಗೆ : ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : Tata Consumer Products : ಬಿಸ್ಲೇರಿ ಕಂಪೆನಿಯನ್ನು 7,000 ಕೋಟಿಗೆ ಖರೀದಿಸಿದ ಟಾಟಾ ಗ್ರೂಪ್

Women must be accompanied by a male member of their family to enter the Jama Masjid complex. Delhi’s Jama Masjid Management Committee has announced that single women will not be allowed to enter the mosque complex. But now the women have expressed outrage against the decision of the management board.

Comments are closed.