ಹೈದರಾಬಾದ್ : 100 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಘನಶಾಮದಾಸ್ ಜ್ಯುವೆಲ್ಲರಿ ಮುಖ್ಯಸ್ಥ ಹಾಗೂ ಚಿನ್ನದ ವರ್ತಕ ಸಂಜಯಕುಮಾರ್ ಅಗರ್‌ವಾಲ್ ಅವರ ಪುತ್ರ ಪ್ರೀತ್‌ಕುಮಾರ್ ಅಗರ್‌ವಾಲ್‌ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಹೈದರಾಬಾದ್‌ನ 5 ಚಿನ್ನಾಭರಣ ವರ್ತಕರಿಗೆ ಸೇರಿದ ಜಾಗಗಳ ಮೇಲೆ ಕೋಲ್ಕತಾ ಹಾಗೂ ಇ.ಡಿ. ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದರು. ಈ ವೇಳೆ ಚಿನ್ನದ ಹವಾಲಾ ದಂಧೆಯ ಸ್ಪಷ್ಟಕುರುಹುಗಳು ಲಭಿಸಿದ್ದವು.ದುಬೈಗೆ ಕಳಿಸಬೇಕಿದ್ದ 16 ಕೋಟಿ ರು. ಮೌಲ್ಯದ 1194 ಚಿನ್ನದ ಬಳೆಗಳನ್ನು ಪ್ರೀತ್‌ಕುಮಾರ್, ತನ್ನ ತಂದೆಗೆ ಕೋಲ್ಕತಾ ಏರ್‌ಪೋರ್ಟಲ್ಲಿ ಅಕ್ರಮವಾಗಿ ಹಸ್ತಾಂತರಿಸಿರುವುದು ಬಯಲಾಗಿತ್ತು.
ಸುಮಾರು 250 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಕಳ್ಳ ಸಾಗಾಣಿ ಮಾಡಿರೋದು ಪತ್ತೆಯಾಗಿದೆ. ಇದೇ ಕಾರಣಕ್ಕೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.