ಮದುವೆಗಾಗಿ ಪೊಲೀಸರ ಮೊರೆ ಹೋದ ಯುವಕ…! ವಿವಾಹಾಕಾಂಕ್ಷಿಯ ಬೇಡಿಕೆಗೆ ಕಂಗಾಲಾದ ಖಾಕಿ ಪಡೆ…!

ಮದುವೆ ಮನೆ ಜಗಳ ಅಥವಾ ಗಂಡ-ಹೆಂಡತಿ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನ್ನು ನೀವು ನೋಡಿರ್ತೀರಾ. ಆದರೆ ಮದುವೆಗಾಗಿಯೇ ಯುವಕನೊರ್ವ ಪೊಲೀಸರ ಮೊರೆ ಹೋದ ವಿಚಿತ್ರ ಘಟನೆ  ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಲಕ್ನೋದ  ಶಾಮ್ಲಿ ಜಿಲ್ಲೆಯ ಯುವಕ ಅಜೀಮ್ ಇಂತಹದೊಂದು ವಿಲಕ್ಷಣ ಬೇಡಿಕೆಯೊಂದಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರೋ ಮೂಲಕ ಖಾಕಿ ಪಡೆಯನ್ನು ಕಂಗಾಲು ಮಾಡಿದ್ದಾನೆ. ನನ್ನ ಕುಟುಂಬ ನನ್ನ ಮದುವೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ನನಗಾಗಿ ಸೂಕ್ತ ವಧು ಹುಡುಕುತ್ತಿಲ್ಲ. ಹೀಗಾಗಿ ನೀವು ಸಹಾಯ ಮಾಡಿ ಎಂದು ಅಜೀಮ್ ಪೊಲೀಸರಿಗೆ ಮನವಿ ಮಾಡಿದ್ದಾನೆ.

ಇಷ್ಟಕ್ಕೂ ಮದುವೆಗಾಗಿ ಇಷ್ಟೆಲ್ಲ ಪರಿತಪಿಸುತ್ತಿರುವ ಅಜೀಂ ಇರೋದು ಬರೋಬ್ಬರಿ 2 ಅಡಿ ಉದ್ದ. ಅಲ್ಲದೇ ಕುಬ್ಜತೆಯ ಜೊತೆಗೆ ಅಜೀಂಗೆ ಹಲವು ದೈಹಿಕ ಸಮಸ್ಯೆಗಳಿವೆ. ಈ ಕಾರಣಕ್ಕೆ ಆತನಿಗೆ ಎಲ್ಲೂ ವಧು ಸಿಗುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಕುಟುಂಬದ ವಿರುದ್ಧ ಮುನಿಸಿಕೊಂಡ ಅಜೀಂ ಮದುವೆ ಮಾಡಿಸಿ ಅಂತ ಪೊಲೀಸರಿಗೆ ದುಂಬಾಲು ಬಿದ್ದಿದ್ದಾನೆ.

ಅಜೀಂ ಕುಟುಂಬ ಶಾಮ್ಲಿ ಜಿಲ್ಲೆಯ ಕೈರಾನಾ ಗ್ರಾಮದಲ್ಲಿ ವಾಸಿಸುತ್ತಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ಅಜೀಂಗಾಗಿ ಮನೆಯವರು ವಧು ಹುಡುಕಿದ್ದಾರೆ. ಆದರೆ ಎಲ್ಲೂ ಸಿಗುತ್ತಿಲ್ಲ. ಹೀಗಾಗಿ ಆತನ ಕುಟುಂಬವೂ ಕಂಗಾಲಾಗಿದೆ. ಹೀಗಿರುವಾಗಲೇ ಅಜೀಂ ಪೊಲೀಸರ ಮೊರೆ ಹೋಗೋ ಮೂಲಕ ಮನೆಯವರ ನಿದ್ದೆಗೆಡಿಸಿದ್ದಾನೆ.

ಕೊನೆಗೆ ಅಜೀಂಗೆ  ಕೌನ್ಸಲಿಂಗ್ ಮಾಡಿದ ಪೊಲೀಸರು ನಾವು ಜಗಳದಲ್ಲಿ ಅಥವಾ ಮನೆಯ ಸಮಸ್ಯೆಗಳಲ್ಲಿ ನೆರವಾಗುತ್ತೇವೆ. ಆದರೆ  ಮದುವೆ ಮಾಡಿಸೋದೆಲ್ಲ ನಮ್ಮ ಕೆಲಸ ಎಂದು ಮನವರಿಕೆ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

Comments are closed.