ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಹೆಚ್ಚಳವಾಗಿದೆ. ರಾಜ್ಯದಲ್ಲಿಂದು ಕೂಡ 6,570 ಹೊಸ ಪ್ರಕರಣಗಳು ವರದಿಯಾಗಿದ್ದು, 36 ಜನರು ಬಲಿ ಪಡೆದಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 4,422, ಕಲಬುರಗಿ 240, ಮೈಸೂರು 216, ತುಮಕೂರು 183, ದಕ್ಷಿಣ ಕನ್ನಡ 145, ಉತ್ತರ ಕನ್ನಡ 142, ಬೀದರ್ 129, ಬಳ್ಳಾರಿ 126, ಬಾಗಲಕೋಟೆ 21, ಬೆಳಗಾವಿ 92, ಬೆಂಗಳೂರು ಗ್ರಾಮಾಂತರ 54, ಚಾಮರಾಜನಗರ 56, ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 40, ಚಿತ್ರದುರ್ಗ 24, ದಾವಣಗೆರೆ 28, ಧಾರವಾಡ 96, ಗದಗ 14, ಹಾಸನ 94, ಹಾವೇರಿ 15, ಕೊಡಗು 19, ಕೋಲಾರ 66, ಕೊಪ್ಪಳ 27, ಮಂಡ್ಯ 29, ರಾಯಚೂರು 40, ರಾಮನಗರ 10, ಶಿವಮೊಗ್ಗ 70, ಉಡುಪಿ 63, , ವಿಜಯಪುರ 60 ಮತ್ತು ಯಾದಗಿರಿ ಯಲ್ಲಿ 26 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಟಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಳೆದ ಕೆಲ ದಿನಗಳಿಂದಲೂ 4 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತರಯಾಗುತ್ತಿದ್ದಾರೆ. ಇಂದೂ ಕೂಡ ಬೆಂಗಳೂರಿನಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು 4,422 ಜನಕ್ಕೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ 53,395 ಸಕ್ರಿಯ ಪ್ರಕರಣಗಳಿದ್ದು, 357 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿ ದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ 10,40,130 ಕ್ಕೆ ಏರಿಕೆಯಾಗಿದ್ದರೆ. ಹೆಮ್ಮಾರಿ 12,767 ಜನರನ್ನ ಬಲಿ ಪಡೆದುಕೊಂಡಿದೆ.