ರಾಜ್ಯದಲ್ಲಿ ‌ಜೂ.5ರಿಂದ ಮೂರು ದಿನ ಬಾರೀ ಮಳೆ : ಹವಾಮಾನ ಇಲಾಖೆ

ಬೆಂಗಳೂರು : ರಾಜ್ಯದಲ್ಲಿ ಜೂನ್ 5 ರಿಂದ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ. ಕರಾವಳಿ ಸೇರಿದಂತೆ ರಾಜ್ಯದ‌ ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್.ಪಾಟೀಲ್ ಅವರು‌ ತಿಳಿಸಿದ್ದಾರೆ.

ಜೂನ್ 4 ಹಾಗೂ 5 ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ನಂತರದ ದಿನಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಾದ‌ ಉಡುಪಿ, ದಕ್ಷಿಣ‌ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 4 ರಿಂದ 6 ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದಿದ್ದಾರೆ.

ಮಲೆನಾಡಿನ ಚಿಕ್ಕಮಂಗಳೂರು, ಹಾಸನ, ಅಲ್ಲದೇ ಧಾರವಾಡ, ಹಾವೇರಿ, ಬಿಜಾಪುರ , ಬಾಗಲಕೋಟೆ , ಬೆಳಗಾವಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಚಾಮರಾಜನಗರದಲ್ಲಿ ಎರಡು ದಿನ‌ ಮಳೆಯಾಗಲಿದೆ.

Comments are closed.