ಕೆಜಿಎಫ್ ಸಾರಥಿಗೆ ಹುಟ್ಟುಹಬ್ಬದ ಸಂಭ್ರಮ….! ಪ್ರಶಾಂತ್ ಬಗ್ಗೆ ತಮ್ಮ ಕನಸು ಹಂಚಿಕೊಂಡ ಯಶ್….!!

ಕನ್ನಡ ಸಿನಿಮಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟುವಂತೆ ಮಾಡಿದ ಸಿನಿಮಾ ಮಾಂತ್ರಿಕ ಪ್ರಶಾಂತ್ ನೀಲ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೆಜಿಎಫ್ ಸಾರಥಿಯಾಗಿ ನಿಂತ ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ನಟ ಯಶ್ ವಿಭಿನ್ನವಾಗಿ ಯಶ್ ಮಾಡಿದ್ದು, ನೀಲ್ ಹಾಲಿವುಡ್ ಸಿನಿಮಾವೊಂದನ್ನು ನಿರ್ಮಿಸಬೇಕೆಂಬುದು ನಮ್ಮ ಕನಸು ಎಂದಿದ್ದಾರೆ.

ಕೆಜಿಎಫ್ ಮತ್ತು ಕೆಜಿಎಫ್-2 ಸಿನಿಮಾದ ಮೂಲಕ ಕನ್ನಡದ ಸಿನಿಮಾದ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಬರೆದ ನಿರ್ದೇಶಕ ಪ್ರಶಾಂತ್ ನೀಲ್. ನಿರ್ದೇಶಕನ ಸಾಮರ್ಥ್ಯ ಏನೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ನೀಲ್ ಕೆಜಿಎಫ್-2 ವನ್ನು ವಿಶ್ವದ ಗಮನ ಸೆಳೆಯುವಂತೆ ನಿರ್ದೇಶಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

https://kannada.newsnext.live/sslc-exams-hdkumaraswami-tweet-war/

ಜುಲೈ 16 ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಮುಂದೂಡಲ್ಪಟ್ಟಿದೆ. ಈ ಮಧ್ಯೆ ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ವಿಶ್ ಮಾಡಿರುವ ಹೊಂಬಾಳೆ ಫಿಲ್ಸಮ್ ಸುಂದರವಾದ ವಿಡಿಯೋವೊಂದನ್ನು ರಿಲೀಸ್ ಮಾಡಿದೆ.

https://kannada.newsnext.live/mysore-rohini-sinduri-shilpa-nag-war/

ವಿಡಿಯೋದಲ್ಲಿ ಪ್ರಶಾಂತ್ ನೀಲ್ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿರುವ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ಹಾಲಿವುಡ್ ಸಿನಿಮಾವೊಂದನ್ನು ನಿರ್ದೇಶಿಸಬೇಕೆಂಬುದು ನನ್ನ ಕನಸು. ಆ ಶಕ್ತಿ ಪ್ರಶಾಂತ್ ನೀಲ್ ಅವರಲ್ಲಿದೆ. ಕೆಜಿಎಫ್ ಒಂದು ಆರಂಭವಷ್ಟೇ ಸ್ನೇಹಿತರೇ ಎಂದಿದ್ದಾರೆ.

https://youtu.be/V_KT7Bu4Nmo

https://kannada.newsnext.live/karnataka-school-start-july-1st/

ಅಲ್ಲದೇ ಕೆಜಿಎಫ್ ಹಾಗೂ ಕೆಜಿಎಫ್-2 ಶೂಟಿಂಗ್ ಸಮಯದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ತೊಡಗಿಕೊಂಡ ದೃಶ್ಯಗಳ ವಿಡಿಯೋ,ಪೋಟೋಗಳನ್ನು ವಿಡಿಯೊಳಗೊಂಡಿದೆ.

ಕೆಜಿಎಫ್ ಬಳಿಕ ಬಹುಬೇಡಿಕೆಯ ನಿರ್ದೇಶಕ ಎನ್ನಿಸಿರುವ ಪ್ರಶಾಂತ್ ನೀಲ್, ಈಗಾಗಲೇ ಪ್ರಭಾಸ್ ಜೊತೆ ಸಲಾರ್ ಮೂವಿ ನಿರ್ಮಾಣಕ್ಕೆ ಧುಮುಕಿದ್ದಾರೆ.

Comments are closed.