karwa chauth 2023 : ಗಂಡನ ದೀರ್ಘಾಯುಷ್ಯಕ್ಕಾಗಿ ಪತ್ನಿಯರ ಕೈಗೆ ಮೆಹಂದಿ : ಕರ್ವಾ ಚೌತ್‌ ಹಬ್ಬ ಆಚರಣೆ ಹೇಗಿರುತ್ತೇ ಗೊತ್ತಾ ?

karwa chauth 2023 : ಕರ್ವಾಚೌತ್‌ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ದವಾಗಿರುವ ಸಾಂಪ್ರದಾಯಕ ಆಚರಣೆ. ಈ ಕರ್ವಾ ಚೌತ್‌ ಹಬ್ಬವನ್ನು ಗಂಡನಿಗೆ ದೀರ್ಘಾಯುಷ್ಯ ಕರುಣಿಸುವಂತೆ ಗೃಹಿಣಿಯರು ಆಚರಿಸುವ ವಿಶಿಷ್ಟವಾಗಿರುವ ಹಬ್ಬ. ಈ ದಿನದಂದು ಮಹಿಳೆಯರು ಉಪವಾಸವನ್ನು ಮಾಡುತ್ತಾ ಚಂದ್ರನನ್ನು ನೋಡಿದ ನಂತರ ಗಂಡನ ಮುಖ ನೋಡುತ್ತಾರೆ.

karwa chauth 2023 : ಕರ್ವಾಚೌತ್‌ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ದವಾಗಿರುವ ಸಾಂಪ್ರದಾಯಕ ಆಚರಣೆ. ಈ ಕರ್ವಾ ಚೌತ್‌ ಹಬ್ಬವನ್ನು ಗಂಡನಿಗೆ ದೀರ್ಘಾಯುಷ್ಯ ಕರುಣಿಸುವಂತೆ ಗೃಹಿಣಿಯರು ಆಚರಿಸುವ ವಿಶಿಷ್ಟವಾಗಿರುವ ಹಬ್ಬ. ಈ ದಿನದಂದು ಮಹಿಳೆಯರು ಉಪವಾಸವನ್ನು ಮಾಡುತ್ತಾ ಚಂದ್ರನನ್ನು ನೋಡಿದ ನಂತರ ಗಂಡನ ಮುಖ ನೋಡುತ್ತಾರೆ. ನಂತರ ಪತಿಯ ಕೈಯಿಂದ ನೀರು ಕುಡಿದು ಉಪವಾಸವನ್ನು ಕೈಬಿಡುತ್ತಾರೆ.

karwa chauth 2023 Mehndi on hands of wives for husbands long life Do you know how Karva Chauth festival is celebrated
Image credit to Original Source

ಕರ್ವಾಚೌತ್‌ ಹಬ್ಬದ ಮತ್ತೊಂದು ವಿಶೇಷ ಮೆಹಂದಿ (karwa chauth mehndi). ಮೆಹಂದಿ ಇಲ್ಲದೇ ಇದ್ರೆ ಈ ಹಬ್ಬ ಅಪೂರ್ಣ. ಅದ್ರಲ್ಲೂ ವಿವಾಹಿತ ಮಹಿಳೆಯರು ತಮ್ಮ ಕೈಗಳಿಗೆ ಸುಂದರವಾಗಿರುವ ಮೆಹಂದಿಯನ್ನು ಹಚ್ಚಿಸಿಕೊಳ್ಳುತ್ತಾರೆ. ಮಹಿಳೆಯರು ತಮ್ಮ ಕೈಯಲ್ಲಿ ಗಂಡನ ಹೆಸರಿನ ಮೆಹಂದಿ ಯನ್ನು ಹಚ್ಚುವುದು ವಿಶೇಷ. ಒಬ್ಬರಿಗಿಂತ ಮತ್ತೊಬ್ಬರು ಸುಂದರವಾದ ರಂಗೋಲಿ ಇರಿಸುವುದು ಮಾಮೂಲಿ.

ದೆಹಲಿ, ಹರಿಯಾಣ, ರಾಜಸ್ಥಾನ, ಪಂಜಾಬ್‌, ಜಮ್ಮು, ಮಧ್ಯಪ್ರದೇಶ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಈ ಕರ್ವಾ ಚೌತ್‌ ಉಪವಾಸ ವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಇನ್ನು ಆಂಧ್ರಪ್ರದೇಶದಲ್ಲಿ ಅಟ್ಲಾ ತದ್ದೆ ಎಂದು ಕರೆಯಲಾಗುತ್ತದೆ. ಕರ್ವಾ ಎಂದರೆ ನೀರಿನ ಸಣ್ಣ ಮಡಿಕೆ ಚೌತ್‌ ಎಂದರೆ ಹಿಂದಿಯಲ್ಲಿ ನಾಲ್ಕನೇ ಎಂದರ್ಥ. ಸಂಸ್ಕೃತದಲ್ಲಿ ಈ ಹಬ್ಬವನ್ನು ಕಾರಕ ಚತುರ್ಥಿ ಎಂದೂ ಕರೆಯುತ್ತಾರೆ.

ಇದನ್ನೂ ಓದಿ : ಸರಕಾರಿ ಉದ್ಯೋಗಿಗಳ ವಿವಾಹಕ್ಕೆ ಸರಕಾರ ಅನುಮತಿ ಕಡ್ಡಾಯ : ವಿಚ್ಚೇಧನ ನೀಡಿದ್ರೂ ಇಲ್ಲ 2ನೇ ಮದುವೆ ಅವಕಾಶ

ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸುವ ಈ ವಿಶಿಷ್ಟ ಹಬ್ಬದ ಕುರಿತು ಹಲವು ಕಥೆಗಳಿಗೆ. ಮಹಾಭಾರತ ಯುದ್ದದ ಸಂದರ್ಭದಲ್ಲಿ ದ್ರೌಪದಿ ಅರ್ಜುನನ ಯೋಗಕ್ಷೇಮಕ್ಕಾಗಿ ಉಪವಾಸವನ್ನು ಆಚರಿಸಿದ್ದಳು. ದಂತಕಥೆಗಳ ಪ್ರಕಾರ ಮಹಾಭಾರತದಲ್ಲಿ ತನ್ನ ಪತಿಯನ್ನು ಸುರಕ್ಷಿತವಾಗಿರಿಸಿದ್ದು ಮಾತ್ರವಲ್ಲ ಪಾಂಡವರು ಕೌರವರ ವಿರುದ್ದ ಯುದ್ದ ಗೆಲ್ಲಲು ಸಹಾಯಕವಾಯಿತು ಎಂದು ನಂಬಲಾಗಿದೆ.

karwa chauth 2023 Mehndi on hands of wives for husbands long life Do you know how Karva Chauth festival is celebrated
Image credit to Original Source

ಇನ್ನೊಂದು ಕತೆಯ ಪ್ರಕಾರ ಕರ್ವಾಚೌತ್‌ನ ಮೂಲದ ಮತ್ತೊಂದು ಕಥೆಯ ಪ್ರಕಾರ ದಂತಕಥೆ ಕರ್ವಾದೇವಿ ಮತ್ತು ಸಾವಿತ್ರಿ. ಸಾವಿತ್ರಿಯು ತನ್ನ ಗಂಡಂದಿರನ್ನು ಕೊಂದ ನಂತರ ಅವರ ಆತ್ಮಗಳಿಗೆ ಮರಳಲು ಸಾವಿನ ದೇವರಾಗಿರುವ ಯವನನ್ನು ಪ್ರಾರ್ಥನೆ ಮಾಡಿದ್ದಳು. ಕರ್ವಾ ದೇವಿಯು ಅವಳ ಸತ್ಯತೆಯಿಂದ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಳು ಎನ್ನಲಾಗುತ್ತಿದೆ.

ಇದನ್ನೂ ಓದಿ : ಸರಕಾರದ ಹೊಸ ರೂಲ್ಸ್‌ : ನವೆಂಬರ್ 1 ರಿಂದ ಬದಲಾಗಲಿದೆ ಈ ನಾಲ್ಕು ನಿಯಮ

ಇನ್ನು ಈ ಹಬ್ಬದ ಕುರಿತು ಮತ್ತೊಂದು ಕಥೆಯಿದೆ. ಭಾರತದಲ್ಲಿ ಅರೇಂಜ್‌ ಮ್ಯಾರೇಜ್‌ ಪದ್ದತಿಯು ಚಾಲ್ತಿಯಲ್ಲಿದೆ. ನವವಿವಾಹಿತರು ತನ್ನ ಪತಿ ಹಾಗೂ ಅತ್ತೆಯೊಂದಿಗೆ ವಾಸ ಮಾಡಬೇಕು. ಕುಟುಂಬಕ್ಕೆ ಹೊಸದಾಗಿ ಬಂದಿರುವ ಕಾರಣಕ್ಕೆ ತನ್ನ ಸ್ನೇಹಿತೆ ಅಥವಾ ಸಹೋದರಿಯಾಗಿ ಜೀವನಕ್ಕಾಗಿ ಸ್ನೇಹ ಬೆಳೆಸುವ ಪದ್ದತಿ ಹುಟ್ಟಿಕೊಂಡಿದೆ. ಹಿಂದೂ ಪದ್ದತಿಯಂತೆ ಸ್ನೇಹವನ್ನು ಪವಿತ್ರಗೊಳಿಸಲಾಗುತ್ತದೆ.

ಕರ್ವಾಚೌತ್‌ ಕುರಿತು ಸಾಕಷ್ಟು ದಂತಕತೆಗಳನ್ನು ಹೇಳಲಾಗುತ್ತಿದೆ. ಆದ್ರೆ ಈ ಬಾರಿಯ ಕರ್ವಾಚೌತ್‌ ಹಬ್ಬವನ್ನು ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ವರ್ಷಂಪ್ರತಿ ಆಚರಿಸಲಾಗುತ್ತದೆ. ಹುಣ್ಣಿಮೆಯ ನಂತರದ ನಾಲ್ಕನೇ ದಿನದಂದು ಈ ಹಬ್ಬದ ಆಚರಣೆ ನಡೆಯುತ್ತಿದ್ದು, ಈ ಬಾರಿ ನವೆಂಬರ್‌ 1 ರಂದು ಕರ್ವಾಚೌತ್‌ ಆಚರಿಸಲಾಗುತ್ತದೆ.

ಇದನ್ನೂ ಓದಿ : ಯುವತಿಯರ ಮದುವೆಗೆ 10 ಗ್ರಾಂ ಚಿನ್ನ, 1 ಲಕ್ಷ ರೂಪಾಯಿ ಉಚಿತ : ಗೃಹಲಕ್ಷ್ಮೀ ಬೆನ್ನಲ್ಲೇ ಮಹಾಲಕ್ಷ್ಮೀ ಯೋಜನೆ ಘೋಷಣೆ

ಕರ್ವಾ ಚೌತ್‌ ಹಬ್ಬಕ್ಕಾಗಿ ಈಗಾಗಲೇ ಮೆಹಂದಿ ಹಾಕಿಸಿಕೊಳ್ಳುವುದು, ದೀಪಾಲಂಕಾರ, ಆಭರಣ, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ. ಅದ್ರಲ್ಲೂ ಬಜಾರ್‌ಗಳಲ್ಲಿ ಈಗಾಗಲೇ ಕರ್ವಾಚೌತ್‌ ಉತ್ಪನ್ನಗಳ ಮಾರಾಟದ ಭರಾಟೆಯೂ ಜೋರಾಗಿಯೇ ನಡೆಯುತ್ತಿದೆ.

karwa chauth 2023 Mehndi on hands of wives for husband’s long life, Do you know how Karva Chauth festival is celebrated ?

Comments are closed.