ansi kabeer : ಕೇರಳ ಸುಂದರಿ ಅನ್ಸಿ ಕಬೀರ್‌ ಸಾವು : ತನಿಖೆಯ ವಿವರ ಸೋರಿಕೆಗೆ ಎಡಿಜಿಪಿ ಅಸಮಾಧಾನ

ಕೊಚ್ಚಿ: ಕೇರಳದ ಮಾಜಿ ಸುಂದರಿ ಅನ್ಸಿ ಕಬೀರ್ (ansi kabeer) ಸೇರಿದಂತೆ ಮೂವರು ಆಡಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ತನಿಖೆಯನ್ನು ನಡೆಸುತ್ತಿರುವ ಕೇರಳ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ನಡುವಲ್ಲೇ ಸಾವಿಗೆ ಕಾರಣವಾಗಿರುವ ಘಟನೆಯ ಮಾಹಿತಿ ಸೋರಿಕೆಯಾಗಿದೆ ಎಂದು ಎಡಿಜಿಪಿ ಹೇಳಿದ್ದಾರೆ. ಈ ಕುರಿತು ಎಡಿಜಿಪಿ ಅವರು ಕೊಚ್ಚಿ ನಗರ ಪೊಲೀಸ್‌ ಆಯುಕ್ತರಿಗೆ ಪತ್ರವನ್ನು ಬರೆದಿದ್ದು, ತನಿಖಾಧಿಕಾರಿಯೇ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನವೆಂಬರ್ 1 ರಂದು ಕೊಚ್ಚಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸುಂದರಿ ಆನ್ಸಿ ಕಬೀರ್ ಮತ್ತು ಮಿಸ್ ಕೇರಳ ರನ್ನರ್ ಅಪ್ ಅಂಜನಾ ಶಾಜನ್ ಸೇರಿದಂತೆ ಮೂವರು ಸಾವನ್ನಪಿದ್ದರು. ಎಲ್ಲರೂ ಕೂಡ ಫೋರ್ಟ್ ಕೊಚ್ಚಿಯ ಹೋಟೆಲ್ ನಂ.18ರಲ್ಲಿ ಆಯೋಜಿಸಿದ್ದ ಪಾರ್ಟಿಯನ್ನು ಮುಗಿಸಿ ರಾತ್ರಿ ಹಿಂತಿರುಗುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿತ್ತು. ಘಟನೆಯ ಬೆನ್ನಲ್ಲೇ ಮದ್ಯಪಾನ ಮಾಡಿ ಕಾರು ಚಲಾಯಿಸಿರುವ ಆರೋಪ ಕೇಳಿಬಂದಿತ್ತು. ಈ ನಡುವಲ್ಲೇ ಎಡಿಜಿಪಿ ಅವರು ಪ್ರಕರಣದ ವರದಿ ಸೋರಿಕೆಯಾಗಿದೆ ಅನ್ನೋ ಮಾಹಿತಿಯನ್ನು ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ಪೊಲೀಸರು ಮಾಡೆಲ್‌ಗಳ ಸಾವು ಆಕಸ್ಮಿಕ, ಅನುಮಾನಾಸ್ಪದವಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಎಡಿಜಿಪಿ ಅವರ ಸೂಚನೆಯ ಬೆನ್ನಲ್ಲೇ ಜಿಲ್ಲಾ ಅಪರಾಧ ವಿಬಾಗದ ಮುಖ್ಯಸ್ಥ ಬಿ.ಜಿ.ಜಾರ್ಜ್‌ ನೇತೃತ್ವದಲ್ಲಿ ಪ್ರಕರಣ ತನಿಖೆಯನ್ನು ಆರಂಭಿಸಲಾಗಿದೆ. ಇನ್ನು ಅಪಘಾತದಲ್ಲಿ ಶಂಕೆ ಇದ್ದು, ತನಿಖೆ ಮಂದಗತಿಯಲ್ಲಿ ಸಾಗಿದೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದರು. ಬಳಿಕ ಹೋಟೆಲ್ ಮಾಲೀಕ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡುವಂತೆ ಹೈಕೋರ್ಟ್ ಮೊರೆ ಹೋಗಲು ತನಿಖಾ ತಂಡ ಸಿದ್ಧತೆ ನಡೆಸಿದೆ.

ಅಪಘಾತಕ್ಕೂ ಮುನ್ನ ನಡೆದಿತ್ತಾ ಪಾರ್ಟಿ !

ಕೇರಳದ ಮಾಜಿ ಸುಂದರಿ ಅನ್ಸಿ ಕಬೀರ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ಡಿಜೆ ಪಾರ್ಟಿಯಲ್ಲಿ ಭಾಗವಹಿಸಿದ್ದವರ ವಿಚಾರಣೆ ಮುಂದುವರಿದಿದೆ. ನಿನ್ನೆ ಪಲರಿವಟ್ಟಂ ಠಾಣೆಯಲ್ಲಿ ಮಹಿಳೆಯರು ಸೇರಿದಂತೆ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. 150ಕ್ಕೂ ಹೆಚ್ಚು ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆದರೆ ಕೆಲವರು ಹೋಟೆಲ್‌ನಲ್ಲಿ ನೋಂದಾಯಿಸಿಕೊಳ್ಳದೆ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪೊಲೀಸರು ಸಿದ್ದಪಡಿಸಿರುವ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

Miss Kerala Ansi Kabir and runner-up Anjana Shajan
ಭೀಕರ ಅಪಘಾತಕ್ಕೆ ಮಿಸ್‌ ಕೇರಳ ಅನ್ಸಿ ಕಬೀರ್‌ ಮತ್ತು ರನ್ನರ್‌ ಅಪ್‌ ಅಂಜಾನಾ ಶಾಜನ್‌ ಬಲಿ

ಮಾಡೆಲ್‌ಗಳು ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಫೋರ್ಟ್ ಕೊಚ್ಚಿ ನಂ.18 ಹೋಟೆಲ್ ನ ದೃಶ್ಯಾವಳಿಗಳಿದ್ದ ಡಿವಿಆರ್ ಅನ್ನು ಗೌಪ್ಯ ಮಾಹಿತಿ ಮರೆಮಾಚಲು ನಾಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೋಟೆಲ್ ನಲ್ಲಿ ಡ್ರಗ್ಸ್ ದಂಧೆಯ ಬಗ್ಗೆ ತನಿಖೆಯಾಗಬೇಕು. ಯಾರೊಬ್ಬರ ಖಾಸಗಿ ದೃಶ್ಯಾವಳಿಗಳನ್ನು ನಕಲು ಮಾಡಲಾಗಿದೆಯೇ ಎಂಬ ಅನುಮಾನ ಮೂಡಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : 2 Models death : ಭೀಕರ ಅಪಘಾತಕ್ಕೆ ಮಿಸ್‌ ಕೇರಳ ಅನ್ಸಿ ಕಬೀರ್‌ ಮತ್ತು ರನ್ನರ್‌ ಅಪ್‌ ಅಂಜಾನಾ ಶಾಜನ್‌ ಬಲಿ

ಇದನ್ನೂ ಓದಿ : Ansi Kabeer – Anjana Shajan : ಮಿಸ್‌ ಕೇರಳ ಸಾವಿನ ರಹಸ್ಯ ಬಯಲು : ಆಡಿ ಕಾರು ಅಪಘಾತಕ್ಕೆ ಕಾರಣವಾಗಿದ್ದೇನು ?

ಕೊರೊನಾ ಮಾರ್ಗಸೂಚಿಯ ಪ್ರಕಾರ ಯಾವುದೇ ಪಾರ್ಟಿಯನ್ನು ಆಯೋಜಿಸುವಂತಿಲ್ಲ. ಆದರೂ ಕೂಡ ಹೋಟೆಲ್‌ನಲ್ಲಿ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪಾರ್ಟಿ ನಡೆಸಿರೋದು ಬೆಳಕಿಗೆ ಬಂದಿದೆ. ಇನ್ನು ಪಾರ್ಟಿಯ ಆಯೋಜಕರು ಮಾಡೆಲ್‌ಗಳ ಬಳಿಯಲ್ಲಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವಂತೆ ಒತ್ತಾಯಿಸಿದ್ದರು. ಆದರೂ ಕೂಡ ಮಾಡೆಲ್‌ಗಳು ಸಲಹೆಯನ್ನು ಧಿಕ್ಕರಿಸಿ ಮನೆಗೆ ತೆರಳಿದ್ದರು. ಈ ವೇಳೆಯಲ್ಲಿ ಉದ್ಯಮಿ ಸೈಜು ಆಡಿ ಕಾರು ಓಡಿಸಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲಾ ಅಪರಾಧ ದಳದ ಪೊಲೀಸರು ಈ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

( ADGP unhappy over leakage of investigation into miss Kerala ansi kabeer death )

Comments are closed.