CM Bommai : ಮಳೆ- ಪ್ರವಾಹದಲ್ಲಿ ಜನರ ಪರದಾಟ : ಮುಖ್ಯಮಂತ್ರಿಗಳದ್ದು ಮದುವೆ, ಗೃಹಪ್ರವೇಶಕ್ಕೆ ಓಡಾಟ

ಬೆಂಗಳೂರು : ಅಕಾಲಿಕವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಜನ ಜಾನುವಾರುಗಳು ಮರಣ‌ಮಳೆಗೆ ನೀರು ಪಾಲಾಗುತ್ತಿದ್ದಾರೆ. ಬೆಳೆಗಳು, ದವಸ ಧಾನ್ಯ ಕೊಚ್ಚಿ ಹೋಗಿ ಜನರು, ರೈತರು ಬೀದಿಗೆ ಬರೋ ಆತಂಕದಲ್ಲಿ ಇದ್ದಾರೆ. ಆದರೆ ಇದಕ್ಕೆಲ್ಲ ಸ್ಪಂದಿಸಬೇಕಾದ ಮುಖ್ಯಮಂತ್ರಿಗಳು (CM Bommai) ಮದುವೆ, ಗೃಹಪ್ರವೇಶ ಓಡಾಟದಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್ ಅಂತ್ಯವಾಗುತ್ತಿದ್ದರೂ ರಾಜ್ಯದಲ್ಲಿ ವರುಣ ದೇವನ ಅಬ್ಬರ ನಿಂತಿಲ್ಲ. ಕರುನಾಡು ಅಕ್ಷರಷಃ ಜಲಪ್ರಳಯದ ಭೀತಿಯಲ್ಲಿದೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ತಮಿಳುನಾಡು,ಆಂಧ್ರಪ್ರದೇಶದಲ್ಲೂ ವರುಣ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

ರಾಜ್ಯದಲ್ಲಿ ಜನರು ದಿನಸಿ,ತರಕಾರಿ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಪರದಾಡುವ ಸ್ಥಿತಿ ಇದೆ. ಹಲವೆಡೆ ಜನರು ಹೊರಜಗತ್ತಿನಿಂದ ಸಂಪರ್ಕ ಕಳೆದುಕೊಂಡು ದ್ವೀಪ ವಾಸಿಗಳಾಗಿ ದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ತಲುಪಿರುವ ಜನರು ನೀರಿನಲ್ಲೇ ನಿಂತು ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ‌. ಚಿಕ್ಕಬಳ್ಳಾಪುರ, ಕೋಲಾರ, ದಾವಣೆಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯುವ ಸ್ಥಿತಿ ಇದೆ. ಆದರೆ ಇದಕ್ಕೆಲ್ಲ ತಕ್ಷಣ ಸ್ಪಂದಿಸಿ ಜನರಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿ ಕೆಲಸ ಮಾಡಿಸಬೇಕಿದ್ದ ಸಿಎಂ ವರ್ತನೆ ಮಾತ್ರ ತೀವ್ರ ಟೀಕೆಗೆ ಗುರಿಯಾಗಿದೆ.

ಸಿಎಂ ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದನ್ನು ಬಿಟ್ಟರೇ ಮತ್ತೆ ಮಳೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಸಿಎಂ ಭಾನುವಾರದ ಕಾರ್ಯಕ್ರಮ ಪಟ್ಟಿ ನೋಡಿದ ಮೇಲೆ ಜನರಿಗೆ ಸಿಎಂ‌ಮಳೆ ಹಾಗೂ ಅದರಿಂದಾದ ಹಾನಿ, ಅವಾಂತರಗಳ ಬಗ್ಗೆ ಕೊಂಚವೂ ಕಾಳಜಿ ಇಲ್ಲ ಎಂಬುದು ಸಾಬೀತಂತಾಗಿದೆ‌. ಸಿಎಂ‌ ಕಾರ್ಯಕ್ರಮಗಳನ್ನು ತಿಳಿಸುವ ಟಿಪಿ ಬಿಡುಗಡೆಗೊಂಡಿದ್ದು ಅದರಲ್ಲಿ ಸಿಎಂ ಮುಂಜಾರ್ನೆ ಗಂಟೆಗೆ ಸಿಎಂ ಅರಮನೆ ಮೈದಾನದಲ್ಲಿ ನಡೆಯಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ದ್ವಿತೀಯ ಪುತ್ರಿ ಅನುಷಾ ಮದುವೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ 9.30 ರಿಂದ 10.15 ರವರೆಗೆ ಸಿಎಂ ತಾಜ್ ವೆಸ್ಟೆಂಡ್ ನಲ್ಲಿ ನಡೆಯುವ ಟಿ.ವಿ.ಮೋಹನ್ ದಾಸ್ ಪೈಯವರ ಪುತ್ರನ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 6 ಗಂಟೆಯವರೆಗಿನ ಸಿಎಂ ಸಮಯವನ್ನು ಕಾಯ್ದಿರಿಸಲಾಗಿದ್ದು, ಸಂಜೆ 6 ಗಂಟೆಗೆ ಸಿಎಂ ವಿಧಾನಸಭೆಯ ಸಚೇತಕ ಸತೀಶ್ ರೆಡ್ಡಿ ಎಚ್.ಎಸ್.ಆರ್.ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಗೃಹದ ಪ್ರವೇಶ ಸಮಾರಂಭಕ್ಕೆ ತೆರಳಲಿದ್ದಾರೆ.

ಇದು ಸಿಎಂ ಕಾರ್ಯಕ್ರಮ ಪಟ್ಟಿ. ಇದನ್ನು ಹೊರತು ಪಡಿಸಿದರೇ ಸಿಎಂ ಕಾರ್ಯಕ್ರಮಗಳಲ್ಲಿ ಎಲ್ಲಿಯೂ ಜಿಲ್ಲಾಧಿಕಾರಿಗಳ ಜೊತೆ ಸಭೆಯಾಗಲಿ, ಅಧಿಕಾರಿಗಳ ಜೊತೆ ಚರ್ಚೆಯಾಗಲಿ, ಸಚಿವರ ಸಭೆಯಾಗಲಿ ಅಥವಾ ಮಳೆಹಾನಿ‌ ಪೀಡಿತ ಪ್ರದೇಶಗಳ ವೀಕ್ಷಣೆಯಾಗಲಿ ಸಿಎಂ‌ಕಾರ್ಯಕ್ರಮ ಪಟ್ಟಿಯಲ್ಲಿ ಇಲ್ಲ. ಸಿಎಂ ಭಾನುವಾರದಂದು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ವಿಕೇಂಡ್ ಮೂಡ್ ನಲ್ಲಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರೋದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು ಕೆಲ ಬಿಜೆಪಿ ಕಾರ್ಯಕರ್ತರು ಕೂಡ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Puneeth – Bommai : ಸಾವಿಗೂ ಎರಡು ದಿನ ಮೊದಲು ಸಿಎಂಗೆ ಅಪ್ಪು ಕಾಲ್ : ಕರೆ ಮಾಡಿ ಕೇಳಿದ್ದೇನು ಗೊತ್ತಾ?

ಇದನ್ನೂ ಓದಿ : Kamala Harris US President : ಅಮೇರಿಕಾದ ಮೊದಲ ಮಹಿಳಾ ಅಧ್ಯಕ್ಷೆಯಾದ ಕಮಲಾ ಹ್ಯಾರಿಸ್‌

(Flooding of people in the rain-floods, CM Basavaraj Bommai only busy with marriage and home access )

Comments are closed.