ಸೋಮವಾರ, ಏಪ್ರಿಲ್ 28, 2025
HomeNationalKerala Hospital : ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ಕೇರಳದ ಆಸ್ಪತ್ರೆಗಳಲ್ಲಿ ಜಾರಿಯಾಯ್ತು ಕೋಡ್‌ ಗ್ರೇ ಪ್ರೋಟೋಕಾಲ್‌...

Kerala Hospital : ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ಕೇರಳದ ಆಸ್ಪತ್ರೆಗಳಲ್ಲಿ ಜಾರಿಯಾಯ್ತು ಕೋಡ್‌ ಗ್ರೇ ಪ್ರೋಟೋಕಾಲ್‌ ಜಾರಿ

- Advertisement -

ತಿರುವನಂತಪುರ: (Kerala Hospital) ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳ ಸುರಕ್ಷತೆಗಾಗಿ ರಾಜ್ಯದ ಆಸ್ಪತ್ರೆಗಳಲ್ಲಿ ಕೋಡ್ ಗ್ರೇ ಪ್ರೋಟೋಕಾಲ್ ಜಾರಿಗೊಳಿಸಲಾಗುತ್ತಿದೆ. ಕೋಡ್ ಗ್ರೇ ಪ್ರೋಟೋಕಾಲ್ ಆರೋಗ್ಯ ಕಾರ್ಯಕರ್ತರ ವಿರುದ್ಧ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಹಿಂಸಾಚಾರದ ಸಂದರ್ಭದಲ್ಲಿ ಅನುಸರಿಸುವ ಕಾರ್ಯವಿಧಾನವಾಗಿದೆ. ಅಭಿವೃದ್ದಿ ಹೊಂದಿರುವ ದೇಶಗಳಲ್ಲಿ ಈಗಾಗಲೇ ಕೋಡ್‌ ಗ್ರೇ ಪೋಟೋಕಾಲ್‌ (Code Gray Protocol) ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಕೋಡ್ ಗ್ರೇ ಪ್ರೋಟೋಕಾಲ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಹಿಂಸಾಚಾರವನ್ನು ಎದುರಿಸಲು ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಅನ್ವಯವಾಗುವಂತೆ ಪ್ರೋಟೋಕಾಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕುರಿತು ಕರಡು ಪ್ರತಿ ಸಿದ್ಧಪಡಿಸಲಾಗಿದೆ. ಕರಡು ಪ್ರತಿಯನ್ನು ಆರೋಗ್ಯ ಇಲಾಖೆ ಮತ್ತು ಪೊಲೀಸರೊಂದಿಗೆ ಚರ್ಚಿಸಲು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಆರೋಗ್ಯ ಕಾರ್ಯಕರ್ತರ ಮೇಲಿನ ದೌರ್ಜನ್ಯ ತಡೆ ಭಾಗವಾಗಿ ಹಲವು ಚಟುವಟಿಕೆಗಳನ್ನು ಜಾರಿಗೊಳಿಸಲಾಗುತ್ತಿದೆ. ದೌರ್ಜನ್ಯವನ್ನು ಎದುರಿಸುವ ಭಾಗವಾಗಿ 2012 ರ ಕಾಯಿದೆಯನ್ನು ಬಲಪಡಿಸಲು ಸುಗ್ರೀವಾಜ್ಞೆಯನ್ನು ಅಂಗೀಕರಿಸಲಾಯಿತು. ಇದರ ಹೊರತಾಗಿ ಕೋಡ್ ಗ್ರೇ ಪ್ರೋಟೋಕಾಲ್ ಆಗಿದೆ. ಇದರಿಂದ ಹಿಂಸಾಚಾರವನ್ನು ದೊಡ್ಡ ರೀತಿಯಲ್ಲಿ ತಡೆಗಟ್ಟಲು ಹಾಗೂ ಆರೋಗ್ಯ ಕಾರ್ಯಕರ್ತರು ಧೈರ್ಯದಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ವೀಣಾ ಜಾರ್ಜ್ ವಿವರಿಸಿದರು.

ಆರೋಗ್ಯ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದು ಗುರಿಯಾಗಿದೆ. ಇದರ ಅಂಗವಾಗಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯಾ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಸುರಕ್ಷತಾ ಲೆಕ್ಕ ಪರಿಶೋಧನೆ ನಡೆಸಲಾಗುತ್ತಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಸುರಕ್ಷತಾ ಲೆಕ್ಕಪರಿಶೋಧನೆ ಪೂರ್ಣಗೊಂಡಿದೆ. ಪ್ರತಿ ಆಸ್ಪತ್ರೆಯ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಸಾಂಸ್ಥಿಕ ಮಟ್ಟದ ವಿಶೇಷತೆಗಳು ಸೇರಿದಂತೆ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು ಎಂದಿದ್ದಾರೆ.

ಇದನ್ನೂ ಓದಿ : Vedika Thakur : ವೇದಿಕಾ ಠಾಕೂರ್‌ ಹತ್ಯೆ ಪ್ರಕರಣ : ಶವದ ಜೊತೆ 7 ಗಂಟೆ ಸುತ್ತಾಡಿದ್ದ ಆರೋಪಿ ಬಿಜೆಪಿ ನಾಯಕ

ಇದನ್ನೂ ಓದಿ : Vande Bharat trains : ವಂದೇ ಭಾರತ್ 5 ಹೊಸ ರೈಲುಗಳಿಗೆ ಚಾಲನೆ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಐಜಿ ಹರ್ಷಿತಾ ಅಟ್ಟಲೂರಿ, ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ.ರತನ್ ಖೇಲ್ಕರ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಕೆ.ಜೆ.ರೀನಾ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಥಾಮಸ್ ಮ್ಯಾಥ್ಯೂ ಮುಂತಾದವರು ಉಪಸ್ಥಿತರಿದ್ದರು.

Kerala Hospital: Code Gray protocol has been implemented in Kerala hospitals for the safety of health workers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular