Nikhil Siddhartha : ‘ಸ್ಪೈ’ ಬೆಂಗಳೂರಲ್ಲಿ ಅದ್ಧೂರಿ ಪ್ರಮೋಷನ್ : ಇದೇ 29ಕ್ಕೆ ನಿಖಿಲ್ ಸಿದ್ಧಾರ್ಥ್ ಸಿನಿಮಾ ರಿಲೀಸ್

ಕಾರ್ತಿಕೇಯ, ಕಾರ್ತಿಕೇಯ-2 ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿಖಿಲ್ ಸಿದ್ಧಾರ್ಥ್ (Nikhil Siddhartha) ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಸ್ಪೈ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ 29ಕ್ಕೆ ವಿಶ್ವಾದ್ಯಂತ ರಿಲೀಸ್ ಆಗ್ತಿರುವ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಮುಂಬೈನಲ್ಲಿ ಪ್ರಮೋಷನ್ ಮುಗಿಸಿ ನೇರವಾಗಿ ಬೆಂಗಳೂರಿಗೆ ಬಂದಿಳಿದ ಚಿತ್ರತಂಡವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ,ಹರೀಶ್ ಸ್ವಾಗತಿಸಿ ಶುಭಕೋರಿದರು. ಬಳಿಕ ಚಿತ್ರತಂಡ ಮಾಧ್ಯಮದವರೊಂದಿಗೆ ತಮ್ಮ ಬಹುನಿರೀಕ್ಷಿತ ಸ್ಪೈ ಬಗ್ಗೆ ಸಾಕಷ್ಟು ವಿಷಯವನ್ನು ಹಂಚಿಕೊಂಡರು.

ನಟ ನಿಖಿಲ್ ಸಿದ್ಧಾರ್ಥ್ ಮಾತನಾಡಿ, ಕಾರ್ತಿಕೇಯ ಸಿನಿಮಾಗೆ ಕರ್ನಾಟದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡ ಪ್ರೆಕ್ಷಕರಿಗೆ ನನ್ನ ಧನ್ಯವಾದ. ಅದೇ ರೀತಿ ಜೂನ್ 29ಕ್ಕೆ ಬರ್ತಿರುವ ಸ್ಪೈ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಸಿನಿಮಾ ಮಾಡಿರೋದು ನನಗೆ ಹೆಮ್ಮೆ ಇದೆ. ಅವರ ಸಾವಿನ ಬಗ್ಗೆ ಈ ಚಿತ್ರದ ಮೂಲಕ ಒಂದು ಕ್ಲಾರಿಟಿ ಸಿಗಲಿದೆ. ಆಕ್ಷನ್, ಎಂಟರ್ ಟೈನರ್ ಎಲ್ಲವೂ ಚಿತ್ರದಲ್ಲಿದೆ. ಪ್ರತಿಯೊಬ್ಬ ಭಾರತೀಯ ಈ ಸಿನಿಮಾ ನೋಡಲೇಬೇಕು.

ನಟಿ ಐಶ್ವರ್ಯ ಮೆನನ್ ಮಾತನಾಡಿ, ಇದೇ 29ಕ್ಕೆ ಸ್ಪೈ ಸಿನಿಮಾ ರಿಲೀಸ್ ಆಗ್ತಿದೆ. ಪ್ರತಿಯೊಬ್ಬರೂ ಚಿತ್ರಕ್ಕೆ ಬೆಂಬಲ ನೀಡಿ. ನಾನು ವೈಷ್ಣವಿ ಎಂಬ ಪಾತ್ರದಲ್ಲಿ ನಟಿಸಿದ್ದು, ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದೇನೆ. ದಾಸವಾಳ ಹಾಗೂ ನಮೋ ಭೂತಾತ್ಮ ಕನ್ನಡ ಸಿನಿಮಾಗಳಲ್ಲಿ ನನ್ನ ಜರ್ನಿ ಶುರುವಾಗಿದೆ. ಕನ್ನಡ ಇಂಡಸ್ಟ್ರೀ ನನಗೆ ಬಹಳ ವಿಶೇಷ. ಸ್ಪೈ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ. ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗಲಿದೆ ಎಂದರು.

CTR ದೋಸೆ ಚಪ್ಪರಿಸಿ ತಿಂದ ನಿಖಿಲ್
ಬೆಂಗಳೂರಿ ಸಿಟಿಆರ್ ಹೋಟೆಲ್ ದೋಸೆ ಇಂಡಿಯಾಗೆ ಫೇಮಸ್. ಈ ಹೋಟೆಲ್ ನಲ್ಲಿ ಬಂದ ಸೆಲೆಬ್ರಿಟಿಗಳೆಲ್ಲಾ ದೋಸೆ ರುಚಿ ಸವಿಯುತ್ತಾರೆ. ಅದರಂತೆ ನಿಖಿಲ್ ಸಿದ್ಧಾರ್ಥ್ ಸಿಟಿಆರ್ ಹೋಟೆಲ್ ನಲ್ಲಿ ದೋಸೆಯನ್ನು ಚಪ್ಪರಿಸಿ ತಿಂದಿದ್ದಾರೆ. ಇದೇ ವೇಳೆ ಅಭಿಮಾನಿಗಳು ನಿಖಿಲ್ ಜೊತೆ ಫೋಟೋಗೆ ಮುಗಿಬಿದ್ದರು. ಬಳಿಕ ರಾಮೇಶ್ವರಂ ಕೆಫೆಯಲ್ಲಿ ಕಾಫಿ ಕುಡಿದರು.

ಇದನ್ನೂ ಓದಿ : Puneeth Rajkumar – Dheeren Ramkumar : ನಟ ಪುನೀತ್‌ ರಾಜ್‌ಕುಮಾರ್‌ ಹಾಡಿದ ಹಿಂದಿ ಟ್ರ್ಯಾಕ್‌ನ್ನು ಹಂಚಿಕೊಂಡ ನಟ ಧೀರೇನ್ ರಾಮ್‌ಕುಮಾರ್‌

ಇದನ್ನೂ ಓದಿ : Rishab shetty : ಮಗಳು ರಾಧ್ಯಾಳ ಕಿವಿ ಚುಚ್ಚುವ ವೀಡಿಯೋ ಹಂಚಿಕೊಂಡ ಕಾಂತಾರ ನಟ ರಿಷಬ್‌ ಶೆಟ್ಟಿ

ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸ್ಪೈ ಸಿನಿಮಾಗೆ ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್‌ ಸ್ಪೈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಎವರು ಮತ್ತು ಹಿಟ್‌ ಸಿನಿಮಾಗಳ ನಿರ್ಮಾಪಕ ಕೆ.ರಾಜಶೇಖರ್‌ ರೆಡ್ಡಿ, ಚರಣ್‌ ರಾಜ್‌ ಉಪ್ಪಲಪತಿ ಚಿತ್ರ ನಿರ್ಮಿಸಿದ್ದಾರೆ. ಸನ್ಯಾ ಠಾಕೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸ್ಪೆಷಲ್‌ ರೋಲ್‌ ನಲ್ಲಿ ಬಾಹುಬಲಿ ಬಲ್ಲಾಳದೇವ ರಾಣಾ ದಗ್ಗುಭಾಟಿ ಕೂಡ ಕಾಣಿಸಿಕೊಂಡಿದ್ದಾರೆ. ಅಭಿನವ್‌ ಗೋಮತಮ್, ಮಕರಂದ್‌ ದೇಶಪಾಂಡೆ, ನಿತಿನ್‌ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್‌, ಸೋನಿಯಾ ನರೇಶ್‌ ಮತ್ತು ಇತರರು ತಾರಾಬಳಗದಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ನಿಖಿಲ್ ಸಿದ್ಧಾರ್ಥ್ ಪ್ಯಾನ್ ಇಂಡಿಯಾ ಸ್ಪೈ 29ಕ್ಕೆ ಬಿಡುಗಡೆಯಾಗಲಿದೆ.

Nikhil Siddhartha : ‘Spy’ Big promotion in Bangalore : Nikhil Siddhartha movie release on 29th

Comments are closed.