ಕೇರಳ : ಕಣ್ಣೂರಿನಲ್ಲಿ (Kerala Kannur ) ಬಾಲಕರಿಬ್ಬರ ಮೇಲೆ ಸುಮಾರು 15 ಕ್ಕೂ ಅಧಿಕ ಬೀದಿನಾಯಿಗಳ ಗುಂಪು ದಾಳಿ ನಡೆಸಲು ಮುಂದಾಗಿತ್ತು. ನಾಯಿಗಳು ಬಾಲಕರಿಬ್ಬರನ್ನು ಅಟ್ಟಿಸಿಕೊಂಡು ಬಂದಾಗ ಮನೆಯೊಂದರ ಗೇಟ್ ಸಹಾಯದಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.
ಕೇರಳದಲ್ಲಿ ಬೀದಿ ನಾಯಿಗಳ ದಾಳಿ ಮತ್ತು ರೇಬಿಸ್ ಸಾವುಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ರಾಜ್ಯದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿಗೆ ಬೀದಿ ನಾಯಿಗಳು ಕಚ್ಚಿದ್ದವು. ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್‌ನಲ್ಲಿ ಈ ಘಟನೆ ನಡೆದಿದೆ. ಕೋಝಿಕ್ಕೋಡ್‌ನ ಅರಕ್ಕಿನಾರ್‌ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ನೂರಾಸ್ (12), ವೈಗಾ (12) ಮತ್ತು ಸಾಜುದ್ದೀನ್ (44) ಬಲಿಯಾಗಿದ್ದರು.
ಕಕೇರಳದ ಕಣ್ಣೂರಿನಲ್ಲಿ ಬೀದಿ ನಾಯಿಗಳ ಹಿಂಡಿನಿಂದ ಇಬ್ಬರು ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ವರದಿಯ ಪ್ರಕಾರ, ಸೆಪ್ಟೆಂಬರ್ 8 ರಂದು ಹುಡುಗರು ಕ್ಷೌರಿಕನ ಅಂಗಡಿಗೆ ಹೋಗುತ್ತಿದ್ದಾಗ ಪ್ಲಾಥೋಟ್ಟಂ ರಸ್ತೆಯಲ್ಲಿರುವ ಸೌದೆ ಕಾರ್ಖಾನೆಯ ಬಳಿ ಈ ಘಟನೆ ನಡೆದಿದೆ. ಸುಮಾರು 15 ನಾಯಿಗಳು ಅವರನ್ನು ಹಿಂಬಾಲಿಸುತ್ತಿದ್ದವು ಎಂದು ಸ್ವಲ್ಪದರಲ್ಲೇ ಪಾರಾದ ಬಾಲಕನೊಬ್ಬ ಹೇಳಿದ. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ಸಿಸಿಟಿವಿ ದೃಶ್ಯಗಳಲ್ಲಿ, ಹುಡುಗರು ನಾಯಿಗಳಿಂದ ರಕ್ಷಿಸಿಕೊಳ್ಳಲು ಸಮೀಪದ ಮನೆಯೊಂದಕ್ಕೆ ಓಡಿ ಗೇಟ್ ಮುಚ್ಚಿದ್ದಾರೆ. ನಂತರದಲ್ಲಿ ನಾಯಿಗಳು ಸ್ಥಳದಿಂದ ತೆರಳಿವೆ. ಈ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಹಂಚಿಕೊಂಡಿದೆ.
#WATCH | Kerala: Students in Kannur manage to escape unharmed as stray dogs chase them in the locality (12.09) pic.twitter.com/HPV27btmix
— ANI (@ANI) September 13, 2022
ಬಾಲಕರಿಬ್ಬರ ಮೇಲೆ ನಾಯಿಗಳು ದಾಳಿ ನಡೆಸಲು ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಕಣ್ಣೂರು ಸುತ್ತಮುತ್ತಿನ ಜನರು ಬೆಚ್ಚಿಬಿದ್ದಿದ್ದಾರೆ. ರಾತ್ರಿಯಷ್ಟೇ ಅಲ್ಲಾ, ಹಗಲಿನ ವೇಳೆಯಲ್ಲಿಯೂ ಜನರು ಮುಕ್ತವಾಗಿ ಸಂಚರಿಸಲು ಆಗದಂತಹ ಸ್ಥಿತಿ ತಲುಪಿದೆ. ಒಂದೆಡೆ ಬೀದಿನಾಯಿಗಳ ಹಾವಳಿ, ಇನ್ನೊಂದೆಡೆಯಲ್ಲಿ ನಾಯಿಗಳ ದಾಳಿಯಿಂದ ಜನರು ಸಾವನ್ನಪ್ಪಿರುವ ರಾಜ್ಯ ಸರಕಾರವನ್ನು ಸಂಕಷ್ಟಕ್ಕೆ ನೂಕಿದೆ.
ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಜನರು ಭಯಭೀತರಾಗಿಯೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೇರಳದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಸ್ವತಃ ಸಚಿವ ಎಂ.ಬಿ.ರಾಜೇಶ್ ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ ಬೀದಿನಾಯಿಗಳ ಹಾವಳಿಯನ್ನು ಕೊನೆಗೊಳಿಸಲು ಯೋಜನೆಯೊಂದನ್ನು ರೂಪಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಮನೋರಮಾ ವರದಿ ಮಾಡಿದೆ.
ಇದನ್ನೂ ಓದಿ : Ruby Lodge Fire accident : ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿದುರಂತ : 8 ಮಂದಿ ಸಾವು
ಇದನ್ನೂ ಓದಿ : Karnataka Dasara Holidays 2022 : ಸೆಪ್ಟೆಂಬರ್ 26 ರಿಂದ ದಸರಾ ರಜೆ ಘೋಷಣೆ : ಸಚಿವರಿಂದ ಮಹತ್ವದ ಆದೇಶ
Kerala Kannur Escape For Boys After Being Chased 15 Dogs