Mega Blood Donation: ಮೋದಿ ಹುಟ್ಟುಹಬ್ಬಕ್ಕೆ ಮೆಗಾ ರಕ್ತದಾನ ಅಭಿಯಾನ

ನವದೆಹಲಿ : Mega Blood Donation ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಕೇಂದ್ರ ಆರೋಗ್ಯ ಇಲಾಖೆ ಹೊಸ ಅಭಿಯಾನಕ್ಕೆ ಮುಂದಾಗಿದೆ. ಸ್ಪೆಪ್ಟೆಂಬರ್ 17 ರಿಂದ ಅಕ್ಟೋಬರ್ 1ರವರೆಗೆ 15 ದಿನಗಳವರೆಗೆ ದೇಶಾದ್ಯಂತ ಮೆಗಾ ರಕ್ತದಾನ ಅಭಿಯಾನ ನಡೆಸ್ತಿದೆ ಅಂತಾ ANI ವರದಿ ಮಾಡಿದೆ. ಇದು ಸ್ವಯಂ ಪ್ರೇರಿತ ರಕ್ತದಾನ ಅಭಿಯಾನ ವಾಗಿರಲಿದೆ ಅಂತಾ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಇದಕ್ಕಾಗಿ ‘ಇ-ರಕ್ತ್‌ ಕೋಶ್‌’ ಎಂಬ ಆನ್‌ಲೈನ್‌ ಪೋರ್ಟಲ್‌ ಲಾಂಚ್‌ ಮಾಡಲಿದೆ. ಸೆಪ್ಟೆಂಬರ್‌ 17ರಿಂದ ಜನರು ಇದರಲ್ಲಿ ತಮ್ಮ ಹೆಸರು ನೋಂದಾಯಿಸಿ ಸ್ವಯಂಪ್ರೇರಿತ ರಕ್ತದಾನದಲ್ಲಿ ಪಾಲ್ಗೊಳ್ಳಬಹುದು. ಈ ವೆಬ್‌ಸೈಟ್‌ ಮಾತ್ರವಲ್ಲದೆ ಆರೋಗ್ಯ ಸೇತು ಆಪ್‌ ಮೂಲಕವೂ ರಕ್ತದಾನಕ್ಕೆ ಹೆಸರು ನೋಂದಾಯಿಸಬಹುದಾಗಿದೆ.

‘ಭಾರತದಲ್ಲಿ ರಕ್ತ ಸಂಗ್ರಹ ಸಾಮರ್ಥ್ಯವು ಉತ್ತಮವಾಗಿದೆ. ಜನರ ಪ್ರತಿಕ್ರಿಯೆಯನ್ನು ನೋಡಿಕೊಂಡು ಸಾಧ್ಯವಿರುವಷ್ಟು ದಾನಿಗಳಿಂದ ರಕ್ತ ಸಂಗ್ರಹಿಸುವ ಯೋಜನೆಯಿದೆ. ಇದು ವಿಶ್ವ ದಾಖಲೆಯನ್ನೂ ನಿರ್ಮಿಸುವ ನಿರೀಕ್ಷೆಯಿದೆ’ ಎಂದು ಅಧಿಕೃತ ಮೂಲವನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

‘ಜನರಲ್ಲಿ ರಕ್ತದಾನದ ಕುರಿತು ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದೇ ಕಾರ್ಯಕ್ರಮವನ್ನು ಆರಂಭಿಸಿ ದೊಡ್ಡ ಪ್ರಮಾಣದಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಯೋಜಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮೋದಿ ಹುಟ್ಟಹುಬ್ಬಕ್ಕೆ 5 ರೈಲುಗಳಿಗೆ ಗ್ರೀನ್ ಸಿಗ್ನಲ್: ಮತ್ತೊಂದೆಡೆ ಮಧ್ಯ ಪ್ರದೇಶ ಸರ್ಕಾರ ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನವೇ 5 ಹೊಸ ರೈಲುಗಳನ್ನು ಪ್ರಾರಂಭಿಸಲು ಯೋಜಿಸಿದೆ. ಸೆಪ್ಟೆಂಬರ್‌ 17  ರಂದು ರೈಲುಗಳು ಸಂಚಾರ ಪ್ರಾರಂಭಿಸಲಿವೆ. ತೀರ್ಥ ದರ್ಶನ ಯಾತ್ರೆಯ ಅಡಿಯಲ್ಲಿ ಚಾಲನೆಗೊಳ್ಳುವ ಹೊಸ 5 ರೈಲುಗಳು ಸುಮಾರು 5000 ಹಿರಿಯ ನಾಗರಿಕರನ್ನು ವಿವಿಧ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುತ್ತೆ.

72ನೇ ವಸಂತಕ್ಕೆ ಕಾಲಿಡ್ತಿದ್ದಾರೆ ಮೋದಿ : ಪ್ರಧಾನಿ ನರೇಂದ್ರ ಮೋದಿಗೆ ಈ ವರ್ಷ 72ನೇ ವರ್ಷದ ಹುಟ್ಟುಹಬ್ಬ. ನರೇಂದ್ರ ಮೋದಿ ಸೆಪ್ಟೆಂಬರ್‌ 17, 1950ರಲ್ಲಿ ಜನಸಿದ್ದಾರೆ. ಪ್ರಧಾನಿ ಮೋದಿ ಮೂರು ದಶಕಗಳ ನಂತರ ಭಾರತದಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿರುವ ಹಾಗೂ ಸತತ ಎರಡು ಬಾರಿ ಪ್ರಧಾನಿ ಹುದ್ದೆಗೆ ಏರಿರುವ ಮೊದಲ ಕಾಂಗ್ರೆಸೇತರ ವ್ಯಕ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಮೋದಿಯವರನ್ನ ಬಿಜೆಪಿ 2014ರಲ್ಲಿ ದೇಶದ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಮೋದಿ ನೇತೃತ್ವದಲ್ಲಿ ಮೊದಲ ಬಾರಿಗೆ ಪ್ರಚಂಡ ಗೆಲುವು ಸಾಧಿಸುವ ಮೂಲಕ ಬಹುಮತ ಸರ್ಕಾರವನ್ನು ರಚನೆ ಮಾಡಿತ್ತು.  2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿತ್ತು. ನರೇಂದ್ರ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡಿದ್ದರು.  

Mega Blood Donation-Union Health Ministry to launch mega blood donations from Sept 17 onwards

Comments are closed.