Palakkad Love Story : 10 ವರ್ಷ ರಹಸ್ಯ ಕೋಣೆಯಲ್ಲಿದ್ದ ಪ್ರೇಮಿಗಳು : ರೆಹಮಾನ್‌ ಸಜಿತಾಗೆ ಕೊನೆಗೂ ಮದುವೆ ಭಾಗ್ಯ

ಪಾಲಕ್ಕಾಡ್ : ಅವರಿಬ್ಬರೂ ಸುಮಾರು ಹತ್ತು ವರ್ಷಗಳ ಕಾಲ ಸಮಾಜಕ್ಕೆ ಗೊತ್ತೆ ಆಗದಂತೆ ರಹಸ್ಯ ಕೋಣೆಯಲ್ಲಿ ವಾಸವಾಗಿದ್ದರು. ಆದರೆ ಇಬ್ಬರ ಅಪರೂಪದ ಪ್ರೇಮಕಥೆ ತೆರೆದುಕೊಂಡಿತ್ತು. ಕೇರಳದ ಪಾಲಕ್ಕಾಡಿನ ರೆಹಮಾನ್‌ ಸಜಿತಾ ದಂಪತಿ ಕೊನೆಗೂ ಮದುವೆಯಾಗಿದ್ದಾರೆ.

ಪಾಲಕ್ಕಾಡಿನ ರಹಮಾನ್ ಮತ್ತು ಸಜಿತಾ ದಂಪತಿಗಳು ಮನೆಯವರಿಗೆ ಗೊತ್ತೇ ಆಗದಂತೆ ಮನೆಯ ಕೋಣೆಯಲ್ಲಿಯೇ ವಾಸವಾಗಿದ್ದರು. ಕಳೆದ ಜೂನ್‌ ತಿಂಗಳಲ್ಲಿ ಇವರಿಬ್ಬರ ಪ್ರೇಮಕಥೆ ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. ಇದೀಗ ಇಬ್ಬರು ಕೂಡ ನೆಮ್ಮಾರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ.

ಅಯಿಲೂರು ಗ್ರಾಮದ 34 ವರ್ಷದ ರೆಹಮಾನ್ ತನ್ನ ಪಾಲುದಾರ ಸಜಿತಾಳನ್ನು 10 ವರ್ಷಗಳ ಕಾಲ ತನ್ನ ಮನೆಯಲ್ಲಿರುವ ಯಾರಿಗೂ ತಿಳಿಯದಂತೆ ತನ್ನ ಮನೆಯ ಒಂದು ಸಣ್ಣ ಕೋಣೆಯೊಳಗೆ ಅಡಗಿಸಿಟ್ಟಿದ್ದ. ಸಜಿತಾ ಸಲ್ವಾರ್‌ನಲ್ಲಿ ಮತ್ತು ಆಕೆಯ ಹಣೆಯ ಮೇಲೆ ಸಿಂಧೂರ ಮತ್ತು ರೆಹಮಾನ್ ಮುಂಡು ಮತ್ತು ಶರ್ಟ್ ಧರಿಸಿ ತಮ್ಮ ಮದುವೆಯನ್ನು ಅಧಿಕೃತವಾಗಿ ನೋಂದಾಯಿಸಿ ಕೊಂಡಿದ್ದಾರೆ. ಮದುವೆಗೆ ಬಂದ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಮದುವೆ ಇದೀಗ ಕಾನೂನು ಬದ್ದವಾಗಿದೆ. ನಾವೀಗ ಸುರಕ್ಷಿತವಾಗಿ ಹಾಗೂ ಸಂತೋಷವಾಗಿದ್ದೇವೆ. ಮುಂದಿನ ದಿನಗಳಲ್ಲಿ ಇಬ್ಬರೂ ಸಂತೋಷವಾಗಿರುತ್ತೇವೆ ಎಂದು ರೆಹಮಾನ್‌ ಹೇಳಿದ್ದಾರೆ. ಇಬ್ಬರ ಮದುವೆಯಲ್ಲಿ ಸಜಿತಾ ಪೋಷಕರು ಕೂಡ ಭಾಗಿಯಾಗಿದ್ದರು ಎಂದು ಮದುವೆಯಲ್ಲಿ ಪಾಲ್ಗೊಂಡಿದ್ದ ನೆನ್ಮಾರ ಶಾಸಕ ಕೆ ಬಾಬು ಮಾಧ್ಯಮಗಳಿಗೆ ತಿಳಿಸಿದ್ದು, ಎಲ್ಲರೂ ಅವರಿಗೆ ಬದುಕಲು ಬಿಡಿ ಎಂದು ಮನವಿ ಮಾಡಿದ್ದಾರೆ.

ಸಜಿತಾ ಮತ್ತು ರೆಹಮಾನ್ ಅಕ್ಕಪಕ್ಕದ ಮನೆಯಲ್ಲಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಸಜಿತಾ 10 ವರ್ಷಗಳ ಹಿಂದೆ 18 ವರ್ಷದವಳಿದ್ದಾಗ ಕಾಣೆಯಾಗಿದ್ದಳು. ದಂಪತಿಗಳು ತಮ್ಮ ಕುಟುಂಬಗಳ ವಿರೋಧಕ್ಕೆ ಹೆದರುತ್ತಿದ್ದ ಕಾರಣ ಅವರು ರಹಸ್ಯ ಜೀವನವನ್ನು ನಡೆಸುತ್ತಿದ್ದರು. ಮಾರ್ಚ್ 2021 ರಲ್ಲಿ, ದಂಪತಿಗಳು ಕೊಠಡಿಯನ್ನು ಬಿಟ್ಟು ಹತ್ತಿರದ ಮನೆಯೊಂದನ್ನು ಬಾಡಿಗೆಗೆ ಪಡೆದರು.

ರೆಹಮಾನ್ ಹೋದ ನಂತರ ಆತನ ಕುಟುಂಬ ನಾಪತ್ತೆ ದೂರು ದಾಖಲಿಸಿತು. ಆದರೆ ನಂತರ ಆತನ ಸಹೋದರ ನೆಮ್ಮಾರ ಬಳಿ ಆತನನ್ನು ನೋಡಿದನು ಮತ್ತು ಆತನನ್ನು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ರೆಹಮಾನ್ ಪತ್ತೆಯಾದ ನಂತರ ದಂಪತಿಯ ಕಥೆ ಬಹಿರಂಗವಾಯಿತು. ಸಜಿತಾಳ ಹೆತ್ತವರು, ರೆಹಮಾನ್ ಮನೆಯಿಂದ ಕೆಲವು ಮೀಟರ್ ದೂರದಲ್ಲಿ ಆಕೆ ಅಡಗಿಕೊಂಡಿದ್ದರು, ತಮ್ಮ ಮಗಳು ಇಷ್ಟು ಹತ್ತಿರದಲ್ಲಿದ್ದಾಳೆ ಎಂದು ತಿಳಿದೇ ಇರಲಿಲ್ಲ. ಕೊನೆಗೂ ದಂಪತಿಗಳು ಸತಿ, ಪತಿಗಳಾಗಿದ್ದಾರೆ.

ಇದನ್ನೂ ಓದಿ : ಪ್ರೀತಿಗಾಗಿ ಪ್ರಿಯತಮೆಯನ್ನು 10 ವರ್ಷ ರೂಮಿನಲ್ಲಿ ಬಚ್ಚಿಟ್ಟ ಪ್ರೇಮಿ…!!!

( After 10 years of single life, Rahman and Sajitha got married; Couple sharing sweets in Palakkad Kerala )

Comments are closed.