School Reopen : ಕೇರಳದಲ್ಲಿ ನವೆಂಬರ್1 ರಿಂದ ಶಾಲಾರಂಭ : ಒಂದೂವರೆ ವರ್ಷದ ಬಳಿಕ ಶಾಲೆ ತೆರೆಯಲು ನಿರ್ಧಾರ

ತಿರುವನಂತಪುರಂ : ಕೇರಳದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಮುಂದುವರಿದಿದೆ. ಜೊತೆಗೆ ನಿಫಾ ವೈರಸ್‌ ಪ್ರಮಾಣವೂ ಹೆಚ್ಚುತ್ತಿದೆ. ಈ ನಡುವಲ್ಲೇ ಶಾಲೆ, ಕಾಲೇಜುಗಳನ್ನು ಆರಂಭಿಸಲು ಕೇರಳ ಸರಕಾರ ಮುಂದಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ನಡೆದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ದೇಶದಲ್ಲಿ ದಾಖಲಾಗುತ್ತಿರುವ ಕೊರೊನಾ ವೈರಸ್‌ ಸೋಂಕಿನ ಪೈಕಿ ಕೇರಳದಲ್ಲಿಯೇ ಶೇ.75ಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರಕಾರ ಹರಸಾಹಸ ಪಡುತ್ತಿದೆ. ಇದೇ ಕಾರಣಕ್ಕೆ ಒಂದೂವರೆ ವರ್ಷದಿಂದಲೂ ಶಾಲೆಗಳನ್ನು ತೆರೆದಿರಲಿಲ್ಲ. ಆದ್ರೀಗ ಕರ್ನಾಟಕದಲ್ಲಿ ಶಾಲೆಗಳು ಆರಂಭಗೊಂಡ ಬೆನ್ನಲ್ಲೇ ಕೇರಳದಲ್ಲಿಯೂ ಶಾಲೆ, ಕಾಲೇಜು ಆರಂಭಕ್ಕೆ ಸಿದ್ದತೆ ಜೋರಾಗಿದೆ.

ಅಕ್ಟೋಬರ್‌ 04 ರಿಂದ ಕಾಲೇಜುಗಳು ಆರಂಭವಾಗಲಿದೆ. ಅಲ್ಲದೇ ನವೆಂಬರ್‌ 1ರಿಂದ ಶಾಲೆಗಳನ್ನು ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಶಾಲೆಗಳನ್ನು ತೆರೆಯುವ ಕುರಿತು ಮಾರ್ಗಸೂಚಿಗಳು ಮತ್ತು ತರಗತಿಗಳನ್ನು ಅಧ್ಯಯನ ಆರಂಭಿಸುವ ಕುರಿತು ನಂತರದ ದಿನಗಳಲ್ಲಿ ತೀರ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಶಾಲೆಗಳನ್ನು ತೆರೆಯುವ ವಿಷಯ ಚರ್ಚೆಯಲ್ಲಿದೆ ಎಂದು ಮುಖ್ಯಮಂತ್ರಿಗಳೇ ತಿಳಿಸಿದ್ದರು. ಸರ್ಕಾರವು ಆರೋಗ್ಯ ತಜ್ಞರೊಂದಿಗೆ ಈ ಸಮಸ್ಯೆಯನ್ನು ಚರ್ಚಿಸುತ್ತಿದೆ. ಸರ್ಕಾರವು ಒಂಬತ್ತರಿಂದ ತರಗತಿಗಳಲ್ಲಿ ತರಗತಿಗಳನ್ನು ಆರಂಭಿಸಲು ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : 10 ವರ್ಷ ರಹಸ್ಯ ಕೋಣೆಯಲ್ಲಿದ್ದ ಪ್ರೇಮಿಗಳು : ರೆಹಮಾನ್‌ ಸಜಿತಾಗೆ ಕೊನೆಗೂ ಮದುವೆ ಭಾಗ್ಯ

ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್‌ ಆರ್ಭಟ : ದ.ಕ ಜಿಲ್ಲೆ ಗಡಿ ಭಾಗದಲ್ಲಿ ಕಟ್ಟೆಚ್ಚರ

ಇದನ್ನೂ ಓದಿ : ಕೊಲ್ಲೂರು ದೇವಳ ಪ್ರವೇಶಕ್ಕಿನ್ನು ಆಧಾರ್‌ ಕಡ್ಡಾಯ : ಕೇರಳ ಭಕ್ತರ ನಿಗಾಕ್ಕೆ ಉಡುಪಿ ಜಿಲ್ಲಾಡಳಿತದ ಹೊಸ ಆದೇಶ

( School opening in Kerala November 1st: Decision to open school after one and a half years )

Comments are closed.