Sabarimala : ತುಲಾಮಾಸದ ಪೂಜೆ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ : ಅ.16 ರಿಂದ ಭಕ್ತರಿಗೆ ಅವಕಾಶ

ಕೇರಳ : ಧರ್ಮಶಾಸ್ತ ಶಬರಿಮಲೆ ಅಯ್ಯಪ್ಪ ದೇವಸ್ಥಾನ ತುಲಾ ಪೂಜೆಗಾಗಿ ಅಕ್ಟೋಬರ್ 16 ರಂದು ಸಂಜೆ 5 ಗಂಟೆಗೆ ತೆರೆಯಲಿದೆ. ಅಲ್ಲದೇ ಇದೇ ವೇಳೆಯಲ್ಲಿಯೇ ದೇವಸ್ಥಾನದಲ್ಲಿ ಮುಂದಿನ ಮೆಲ್ಶಾಂತಿ (ಮುಖ್ಯ ಅರ್ಚಕ) ನಡೆಯಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ.

ಅಕ್ಟೋಬರ್ 17 ರಿಂದ 21 ರವರೆಗೆ ಶಬರಿಮಲೆಗೆ ಭಕ್ತರಿಗೆ ಪ್ರವೇಶ ನೀಡಲಾಗಿದೆ. ಆದರೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮೂಲಕ ಮಾತ್ರವೇ ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಅಯ್ಯಪ್ಪ ದೇವಸ್ಥಾನವನ್ನು ತೆರೆಯುವ ದಿನದಂದು ಯಾವುದೇ ಪೂಜೆಗಳು ಇರುವುದಿಲ್ಲ. ನೆಯ್ಯಾಭಿಷೇಕ, ಉದಯಸ್ಥಾಮನ ಪೂಜೆ, ಕಲಾಭಿಷೇಕ, ಪಡಿಪೂಜೆ ಮತ್ತು ಪುಷ್ಪಾಭಿಷೇಕಗಳನ್ನು ಈ ಅವಧಿಯಲ್ಲಿ ನಡೆಸಲಾಗುತ್ತದೆ. ಉಷಾಪೂಜೆಗಳು ಮುಗಿದ ನಂತರ ಶಬರಿಮಲೆ ಮತ್ತು ಮಾಲಿಕಪ್ಪುರಂ ದೇವಸ್ಥಾನಗಳಿಗೆ ಮೆಲ್ಶಾಂತಿಗಳನ್ನು (ಮುಖ್ಯ ಅರ್ಚಕರನ್ನು) ಅಕ್ಟೋಬರ್ 17 ರಂದು ಡ್ರಾ ಮೂಲಕ ಆಯ್ಕೆ ಮಾಡಲಾಗುವುದು ಎಂದು ಮಂಡಳಿ ಹೇಳಿದೆ.

Shabarimala ayyappa
Sabarimala : ತುಲಾಮಾಸದ ಪೂಜೆ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ : ಅ. 16 ರಿಂದ ಭಕ್ತರಿಗೆ ಅವಕಾಶ 4

ದೇವಸ್ಥಾನದ ಮುಖ್ಯ ಅರ್ಚಕರಾದ ಮೆಲ್ಶಾಂತಿ ವಿ.ಕೆ. ಜಯರಾಜ್ ಪೊಟ್ಟಿ ತಂತ್ರಿ ಕಂದರರು ಮಹೇಶ್ ಮೋಹನರು ಅವರ ಸಮ್ಮುಖದಲ್ಲಿ ಮಂಡಳಿಯು ಹೊಸ ಅರ್ಚಕರ ನೇಮಕವನ್ನು ಮಾಡಲಿದೆ. ನಂತರ ಉಪದೇವತಾ ದೇವಸ್ಥಾನವನ್ನು ತೆರೆದು ದೀಪವನ್ನು ಬೆಳಗಿಸಲಾಗುತ್ತದೆ, ಇನ್ನುದೇಗುಲಕ್ಕೆ ಹೋಗುವ ಮಾರ್ಗದ 18 ನೇ ಹೆಜ್ಜೆಯ ಮುಂದೆ ಬೆಂಕಿ ಹಚ್ಚಲಾಗುವುದು. ಪ್ರಮುಖವಾಗಿ ಪಂಡಲಂ ಅರಮನೆಯಿಂದ 10 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಹುಡುಗರಿಂದ ಚೀಟಿಗಳನ್ನು ತೆಗೆಯುವ ಮೂಲಕ ಎರಡೂ ಮೆಲ್ಶಾಂತಿಗಳನ್ನು ನೇಮಕ ಮಾಡಲಾಗುತ್ತದೆ. ಈ ಮುಖ್ಯ ಅರ್ಚಕರು ಮುಂದಿನ ಒಂದು ವರ್ಷದ ಅವಧಿಗೆ ಮೆಲ್ಶಾಂತಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

Shabarimala ayyappa 2
Sabarimala : ತುಲಾಮಾಸದ ಪೂಜೆ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ : ಅ. 16 ರಿಂದ ಭಕ್ತರಿಗೆ ಅವಕಾಶ 5

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರಿಗೆ ಮುಕ್ತ ಅವಕಾಶವನ್ನು ಕಲ್ಪಿಸಿಲ್ಲ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆ ಪ್ರಮಾಣಪತ್ರ ಅಥವಾ ಆರ್‌ಟಿ- ಪಿಸಿಆರ್ ನೆಗೆಟಿವ್‌ ವರದಿಯನ್ನು ಹೊಂದಿರಬೇಕು.

Shabarimala ayyappa 1
Sabarimala : ತುಲಾಮಾಸದ ಪೂಜೆ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ : ಅ. 16 ರಿಂದ ಭಕ್ತರಿಗೆ ಅವಕಾಶ 6

ಅಕ್ಟೋಬರ್ 21 ರಂದು ದೇವಸ್ಥಾನವನ್ನುಮತ್ತೆ ಮುಚ್ಚಲಾಗುತ್ತದೆ. ನಂತರ ಚಿತಿರಾ ಅಟ್ಟಾವಿಶೇಷದ ಅಂಗವಾಗಿ ನವೆಂಬರ್ 2 ರಂದು ಪುನಃ ತೆರೆಯಲಾಗುತ್ತದೆ. ಅದರ ನಂತರ, ನವೆಂಬರ್ 3 ರಂದು ದೇವಾಲಯವನ್ನು ಮತ್ತೆ ಮುಚ್ಚಲಾಗುವುದು ಮತ್ತು ನವೆಂಬರ್ 15 ರಂದು ವಾರ್ಷಿಕ ಮಂಡಲ-ಮಕರವಿಲಕ್ಕು ಉತ್ಸವಕ್ಕಾಗಿ ಪುನಃ ತೆರೆಯಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

(Sabarimala Ayyappa temple to reopen on 16 Oct; new head priest to be selected next day: Check details )

Comments are closed.