Beauty Tips : ಕಂಕುಳ ಕಪ್ಪಿಗೆ ಮನೆಯಲ್ಲಿಯೇ ಮಾಡಿ ಮದ್ದು

0
  • ಅಂಚನ್ ಗೀತಾ

ಈಗಿನ ಮಾರ್ಡನ್ ಯುಗದಲ್ಲಿ ತೋಳಿಲ್ಲದ ಉಡುಪು ಧರಿಸುವ ಮೂಲಕ ಅಂದವಾಗಿ ಕಾಣಬೇಕು ಎಂಬುದು ಎಷ್ಟೋ ಹೆಣ್ಣು ಮಕ್ಕಳ ಆಸೆ ಸಹಜವೇ. ಆದರೆ ಕೆಲವರಿಗೆ ಕಂಕುಳ ಕಪ್ಪಿನಿಂದಾಗಿ ತೋಳಿಲ್ಲದ ಧಿರಿಸು ಧರಿಸಲು ಹಿಂಜರಿಕೆ. ಈ ಸಮಸ್ಯೆಗೆ ಕಾರಣಗಳು ಹಲವು.

ಬೇಡದ ಕೂದಲ ನಿವಾರಣೆಗೆ ಬಳಸುವ ಕ್ರೀಮ್, ಫಂಗಸ್ ಸೋಂಕು ಮುಂತಾದವುಗಳಿಂದ ಕಂಕುಳ ಕೆಳಗೆ ಕಪ್ಪಾಗಿರುತ್ತದೆ. ಕಂಕುಳ ಕಪ್ಪನ್ನು ನಿವಾರಿಸಲೆಂದೇ ಕೆಲವೊಂದು ಕ್ರೀಮ್ ಗಳು ಲಭ್ಯವಿದ್ರು ಅವುಗಳ ಪರಿಣಾಮ ಕಡಿಮೆಯೇ.

ಅದರ ಬದಲು ಮನೆಯಲ್ಲಿಯೇ ಈ ಕಲೆಯನ್ನು ತೆಗೆದು ಸಹಜ ಸೌಂದರ್ಯ ಹೆಚ್ಚಿಸಬಹುದು. ಹಾಗಾದ್ರೆ ಯಾವ ರೀತಿ ಕಂಕುಳ ಕಪ್ಪನ್ನು ಬೆಳ್ಳಗಾಗಿಸೋದು. ಬನ್ನಿ ಇಲ್ಲಿದೆ ಹಲವೂ ಟಿಪ್ಸ್.

ಆಲೂಗಡ್ಡೆ
ಚರ್ಮದ ಯಾವುದೇ ಭಾಗ ಕಪ್ಪಾಗಿರಲಿ ಅಲ್ಲಿ ಅಲೂಗಡ್ಡೆ ರಸ ಹಚ್ಚುವುದರಿಂದ ಕಪ್ಪಾದ ಭಾಗ ನಿಧಾನಕ್ಕೆ ಬೆಳ್ಳಗಾಗುವುದಲ್ಲದೆ ಚರ್ಮದ ಹೊಳಪು ಹೆಚ್ಚುತ್ತದೆ. ಅಲೂಗಡ್ಡೆಯನ್ನು ಎರಡು ಭಾಗ ಮಾಡಿ ಅದನ್ನು ಕಂಕುಳಿಗೆ ಉಜ್ಜಬಹುದು ಅಥವಾ ಸಿಪ್ಪೆ ತೆಗೆದು ಅದನ್ನು ಅರೆದು ರಸ ತೆಗೆದು ಹಚ್ಚಬಹುದು. ಅದನ್ನು ಅರೆದು ತೆಗೆದು ಹಚ್ಚಬಹುದು. ಬಳಿಕ 15ರಿಂದ 20 ನಿಮಿಷದ ನಂತರ ತೊಳೆಯಬೇಕು.

ಆಪಲ್ ಸೈಡರ್ ವಿನೆಗರ್
ಇದರಲ್ಲಿ ಅಮಿನೊ ಹಾಗೂ ಲಾಕ್ಟಿಕ್ ಆಸಿಡ್ ಅಂಶ ಅಧಿಕವಿದ್ದು ಸತ್ತ ಚರ್ಮದ ಜೀವಕೋಶವನ್ನು ನಾಶ ಮಾಡಲು ಇವು ಸಹಕಾರಿ.ಇದು ಕಂಕುಳಿನ ಚಿಕ್ಕ ಚಿಕ್ಕ ರಂಧ್ರಗಳನ್ನು ಮುಚ್ಚಿ ಹೊಳಪು ಹೆಚ್ಚುವಂತೆ ಮಾಡುತ್ತದೆ. ಹೀಗಾಗಿ ಆಪಲ್ ಸೈಡರ್ ವಿನೆಗರ್ ಅನ್ನು ಹತ್ತಿಯಲ್ಲಿ ಅದ್ದಿ ಕಂಕುಳಿನ ಸುತ್ತಲೂ ಹಚ್ಚಿ ಒಣಗಲು ಬಿಡಿ, ಚೆನ್ನಾಗಿ ಒಣಗಿದ ಮೇಲೆ ತೊಳೆಯಿರಿ.

ಸೌತೆಕಾಯಿ
ಇದ್ರಲ್ಲಿ ಬ್ಲೀಚಿಂಗ್ ಅಂಶವಿದ್ದು ಇದು ಚರ್ಮದ ಉಷ್ಣಾಂಶವನ್ನು ಕಡಿಮೆ ಮಾಡುವ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ. ಸೌತೆ ಕಾಯಿ ಯನ್ನು ಅರೆದು ರಸ ತೆಗೆಯಿರಿ. ನಂತರ ಹತ್ತಿಯನ್ನು ರಸದಲ್ಲಿ ಅದ್ದಿ ಕಂಕುಳಿನ ಸುತ್ತಲೂ ಹಚ್ಚಿ. ಈ ರೀತಿ ಪ್ರತಿದಿನ ಮಾಡಿದರೆ ಕಂಕುಳ ಹೊಳಪು ಹೆಚ್ಚುವುದಲ್ಲದೇ ಕಂಕುಳಿನಿಂದ ದುರ್ವಾಸನೆಯೂ ಕಡಿಮೆಯಾಗುತ್ತದೆ.

ಸಕ್ಕರೆ ಹಾಗೂ ಆಲಿವ್ ಎಣ್ಣೆ
ಸಕ್ಕರೆ ಹಾಗೂ ಆಲಿವ್ ಎಣ್ಣೆ ಮಿಶ್ರಣವನ್ನು ಹಚ್ಚುವುದರಿಂದ ಒಣ ಚರ್ಮಕ್ಕೆ ಮುರುಜೀವ ಸಿಗುವುದಲ್ಲದೇ ಕಾಂತಿಯು ಹೆಚ್ಚುತ್ತದೆ. ಅದಕ್ಕಾಗಿ ಎರಡು ಚಮಚ ಸಕ್ಕರೆಗೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಕಂಕುಳಿಗೆ ಹಚ್ಚಿ ಸ್ಕ್ರಬ್ ನಂತೆ ಉಜ್ಜಿ. 10 ನಿಮಿಷ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಮಾಡುವುದರಿಂದ ಹದಿನೈದು ದಿನಗಳಲ್ಲಿ ಫಲಿತಾಂಶ ನಿರೀಕ್ಷಿಸಬಹುದು.

ಲೋಳೆಸರ
ಲೋಳೆಸರವನ್ನು ಕಂಕುಳಿಗೆ ಹಚ್ಚುವುದರಿಂದ ಆ ಭಾಗದ ಚರ್ಮವು ಮೃದುವಾಗುವುದರೊಂದಿಗೆ ಹೊಳಪು ಹೆಚ್ಚುತ್ತದೆ. ಅದಕ್ಕೆ ನೀವೂ ಮಾಡಬೇಕಾಗಿರುವುದು ಲೋಳೆಸರದ ಗಿಡದಿಂದ ಎಲೆಯನ್ನು ಕಿತ್ತು ಅದರ ಒಳಗಿರುವ ಲೋಳೆಯನ್ನು ಕಂಕುಳಿಗೆ ಹಚ್ಚಿ.

15ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಂಕುಳಿನ ಕಪ್ಪು ಕಲೆ ಮಾಯ ಆಗುವುದರ ಜೊತೆಗೆ ಹೊಳಪು ಹೆಚ್ಚಾಗುವುದು.

(kannada beauty tips for face glow )

Leave A Reply

Your email address will not be published.