ತಿರುವನಂತಪುರಂ: ಕೇರಳದಲ್ಲಿ ನಿಫಾ ವೈರಸ್ (Nipah virus )ಸೋಂಕು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವರನಾಡಿನಲ್ಲಿ ಕಟ್ಟುನಿಟ್ಟಿನ ಆದೇಶಗಳನ್ನು ಪಾಲನೆ ಮಾಡಲಾಗುತ್ತಿದೆ. ಅದ್ರಲ್ಲೂ ಶಬರಿಮಲೆಯಲ್ಲಿ (sabarimala ayyappa swamy temple ) ನಡೆಯುವ ಮಾಸಿಕ ಪೂಜೆಯ ಸಂದರ್ಭದಲ್ಲಿ ನಿಫಾ ಮಾರ್ಗಸೂಚಿ (Nipah Guidliness) ಹೊರಡಿಸುವಂತೆ ಕೇರಳ ಹೈಕೋರ್ಟ್ (Kerala High Court) ಕೇರಳ ಸರಕಾರಕ್ಕೆ ಸೂಚನೆ ನೀಡಿದೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ (kozhikode nipah) ನಿಫಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕೇರಳ ಹೈಕೋರ್ಟ್ ಕೇರಳ ಸರಕಾರಕ್ಕೆ ಸೂಚಿಸಿದೆ. ಮಾಸಿಕ ಪೂಜೆಯ ಸಂದರ್ಭದಲ್ಲಿ ಶಬರಿಮಲೆ ಯಾತ್ರೆ ಹಾಗೂ ಅಗತ್ಯಬಿದ್ದರೆ ಮಾತ್ರವೇ ದೇವಸ್ಥಾನವನ್ನು ತೆರೆಯಲು ಅಗತ್ಯ ಮಾರ್ಗಸೂಚಿ ಹೊರಡಿಸುವಂತೆ ಸೂಚಿಸಿದೆ.

ಇದನ್ನೂ ಓದಿ : ನಿಫಾ ವೈರಸ್ ಸಂಪರ್ಕಿತರ ಪತ್ತೆಗೆ ಪೊಲೀಸರ ಸಹಾಯ ಕೋರಿದ ಕೇರಳ ಸರಕಾರ
ಇಂದು ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಸಂಜೆ 5 ಗಂಟೆಗೆ ಬಾಗಿಲು ತೆರೆಯಲಿದ್ದು, ಸೆಪ್ಟೆಂಬರ್ 22 ರಂದು ರಾತ್ರಿ ಬಂದ್ ಆಗಲಿದೆ. ಒಟ್ಟು ಐದು ದಿನಗಳ ಕಾಲ ಅಯ್ಯಪ್ಪ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ಭಕ್ತರಿಗೆ ಹಲವು ನಿರ್ಬಂಧ ಹೇರುವ ಸಾಧ್ಯತೆಯಿದೆ.
ಇದರ ಬೆನ್ನಲ್ಲೇ ತಿರುವಾಂಕೂರು ದೇವಸ್ವಂ ಬೋರ್ಡ್ ಆರೋಗ್ಯ ಇಲಾಖೆಯ (Kearala Health Department) ಆಯುಕ್ತರ ಜೊತೆಗೆ ಸಮಾಲೋಚನೆ ಯನ್ನು ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ. ಪ್ರತೀ ತಿಂಗಳು ಐದು ದಿನಗಳ ಕಾಲ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯ ಭಕ್ತರಿಗೆ ತೆರೆದಿರುತ್ತದೆ.
ಭಾರತದ ಪವಿತ್ರ ಪುಣ್ಯಕ್ಷೇತ್ರವಾಗಿರುವ ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಲು ವರ್ಷಂಪ್ರತಿ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ಅದ್ರಲ್ಲೂ ಡಿಸೆಂಬರ್, ಜನವರಿ ತಿಂಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಮುಂದಿನ ನಾಲ್ಕೈದು ತಿಂಗಳಲ್ಲಿ ಮಕರ ಸಂಕ್ರಾಂತಿ ಸಮೀಪಿಸಲಿದೆ. ಇದೀಗ ಮಕರ ಸಂಕ್ರಾಂತಿಗೂ ನಿಫಾ ಕರಿನೆರಳು ಚಾಚಿದೆ.

ಇದನ್ನೂ ಓದಿ : ನಿಫಾ ವೈರಸ್ ಪ್ರಕರಣ ಹೆಚ್ಚಳ: ಶಾಲೆಗಳಿಗೆ ರಜೆ ಘೋಷಣೆ, ಕೇರಳದಲ್ಲಿ ಲಾಕ್‌ಡೌನ್ ಜಾರಿ ?
ಕೇರಳ ಸರಕಾರ ಈಗಾಗಲೇ ಉತ್ತರ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಹೇರಿಕೆ ಮಾಡಲಾಗಿದೆ. ಅಲ್ಲದೇ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಹೊಸ ನಿಫಾ ವೈರಸ್ ಪ್ರಕರಣಗಳು ಕೂಡ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಇದೀಗ 6 ಕ್ಕೆ ಏರಿಕೆಯಾಗಿದೆ.
ನಿಫಾ ವೈರಸ್ ಪತ್ತೆಯಾಗುವ ಮೊದಲೇ ಕೇರಳದಲ್ಲಿ ಇಬ್ಬರು ನಿಫಾ ಜ್ವರಕ್ಕೆ ಬಲಿಯಾಗಿದ್ದರು. ಸೋಂಕಿತರ ಸಂಪರ್ಕ ಪಟ್ಟಿಯಲ್ಲಿ 1,080 ಜನರಿದ್ದು, ಹೊಸದಾಗಿ 130 ಜನರನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ಅದ್ರಲ್ಲೂ ಹೈ ರಿಸ್ಕ್ ವಿಭಾಗದಲ್ಲಿ 175 ಜನರಿದ್ದು, 122 ಆರೋಗ್ಯ ಕಾರ್ಯಕರ್ತರು ಇದನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ನಿಫಾ ಸೋಂಕು ಹರಡುವ ಭೀತಿ : ಸೆ.24ರ ವರೆಗೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಇನ್ನು ನಿಫಾ ವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರೀಯೆಯಲ್ಲಿ ಭಾಗಿಯಾದವರ ಮೇಲೆಯೂ ನಿಗಾ ಇರಿಸಲಾಗುತ್ತಿದೆ. ಈ ಪೈಕಿ ಹಲವರಿಗೆ ನಿಫಾ ವೈರಸ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಆರು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಹಲವರ ವೈದ್ಯಕೀಯ ವರದಿ ಇನ್ನಷ್ಟೇ ಕೈ ಸೇರಬೇಕಾಗಿದೆ.

ನಿಫಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸೆಪ್ಟೆಂಬರ್ 24 ರವರೆಗೆ ಬಂದ್ ಮಾಡಲಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಆನ್‌ಲೈನ್ ತರಗತಿ ಆರಂಭಿಸಲು ಸೂಚಿಸಲಾಗಿದೆ. ನಿಫಾ ಏರಿಕೆಯಿಂದ ರಜೆ ಮುಂದುವರಿಕೆಯಾಗುವ ಸಾಧ್ಯತೆಯಿದೆ.
Kerala Nipah Virus High Court Directs Issue Guidelines For Sabarimala Yatra