Kushinagar : ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರನ್ನು ನಿಲ್ಲಿಸಿ ನಮಾಜ್ : ವಿಡಿಯೋ ವೈರಲ್

ಕುಶಿನಗರ (Kushinagar ) : ಪ್ರಯಾಣದ ವೇಳೆ ರೈಲಿನ ಸ್ಲೀಪರ್ ಕೋಚ್ ನ ಕಾರಿಡಾರ್ ನಲ್ಲಿ ಪ್ರಯಾಣಿಕರನ್ನು ನಿಲ್ಲಿಸಿ ನವಾಜ್ (namaz) ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ. ಖಡ್ಡಾ ರೈಲು ನಿಲ್ದಾಣದಲ್ಲಿ ಸತ್ಯಾಗ್ರಹ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 15273) ಸ್ಲೀಪರ್ (Satyagrah Express -15273) ಕೋಚ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇದೀಗ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ರೈಲಿನ ಕಾರಿಡಾರ್ ನಲ್ಲಿ ಶೀಟ್ ಹಾಕಿಕೊಂಡು ಸಾಲಾಗಿ ಕುಳಿತ ಸಾಕಷ್ಟು ಮಂದಿ ಏಕಾಏಕಿ ನಮಾಜ್ ಮಾಡಲು ಆರಂಭಿಸಿದ್ದಾರೆ. ಈ ವೇಳೆಯಲ್ಲಿ ವ್ಯಕ್ತಿಯೋರ್ವ ಅವರನ್ನು ಕಾವಲು ಕಾಯುತ್ತಿದ್ದ. ಅಲ್ಲದೇ ಕಾರಿಡಾರ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರನ್ನು ತಡೆದು ನಿಲ್ಲಿಸಿದ್ದಾನೆ. ಇದರಿಂದಾಗಿ ರೈಲ್ವೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಗೆ ಒಂದಿಷ್ಟು ಹೊತ್ತು ಅಡಚಣೆ ಎದುರಿಸಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾಕಷ್ಟು ಜನರು ಈ ಕುರಿತು ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಖಡ್ಡಾ ರೈಲು ನಿಲ್ದಾಣದಲ್ಲಿ ಸತ್ಯಾಗ್ರಹ ಎಕ್ಸ್‌ಪ್ರೆಸ್ ನಲ್ಲಿ ಸೆರೆ ಹಿಡಿಯಲಾಗಿರುವ ವಿಡಿಯೋ ಎಂದು ವಲಯ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಮತ್ತು ಮಾಜಿ ಶಾಸಕ ದೀಪಲಾಲ್ ಭಾರ್ತಿ ತಿಳಿಸಿದ್ದಾರೆ. ಅಲ್ಲದೇ ವಿಡಿಯೋವನ್ನು ತಾನೇ ಸೆರೆಹಿಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ನಾನು ಇದೇ ರೈಲಿನಲ್ಲಿ ರೈಲಿನಲ್ಲಿ ಖಡ್ಡಾದಿಂದ ಕಪ್ತಂಗಂಜ್‌ಗೆ ಹೋಗುತ್ತಿದ್ದೆ.ರೈಲಿನ ಒಳಭಾಗಕ್ಕೆ ತೆರಳಿದಾಗ ಈ ದೃಶ್ಯವನ್ನು ನೀಡಿ, ವಿಡಿಯೋವನ್ನು ಸೆರೆಹಿಡಿದಿದ್ದೇನೆ. ರೈಲಿನ ಕೋಚ್ ಕಾರಿಡಾರ್ ನಲ್ಲಿ ಈ ರೀತಿಯಾಗಿ ನಮಾಜ್ ಮಾಡುವುದು ತಪ್ಪು, ಈ ಕುರಿತು ಆರೋಪಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಘಟನೆಯ ಕುರಿತು ರೈಲ್ವೇ ರಕ್ಷಣಾ ಪಡೆಯ ಇನ್ಸ್‌ಪೆಕ್ಟರ್ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವೈರಲ್ ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇನ್‌ಸ್ಪೆಕ್ಟರ್ ಇನ್ ಚಾರ್ಜ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಕಪ್ತಂಗಂಜ್ ಸಮಯ್ ಸಿಂಗ್ ಹೇಳಿದ್ದಾರೆ. ಈ ಕುರಿತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ದೂರು ಬಂದರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಮತ್ತೊಂದೆಡೆ ರೈಲಿನಲ್ಲಿ ನಮಾಜ್ ಮಾಡುವ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದು ರೈಲ್ವೆ ಎಸ್ಪಿ ಡಾ.ಅವಧೇಶ್ ಸಿಂಗ್ ಹೇಳಿದ್ದಾರೆ. ವಿಡಿಯೋ ವೈರಲ್ ಆಗಿರುವ ಬಗ್ಗೆ ತನಿಖೆ ನಡೆಸಲಾಗುವುದು. ಯಾರಾದರೂ ದೂರು ನೀಡಿದರೆ ಪ್ರಕರಣವನ್ನೂ ದಾಖಲಿಸಲಾಗುವುದು. ಸಾಕ್ಷ್ಯಾಧಾರದ ಆಧಾರದ ಮೇಲೆ ಸರ್ಕಾರ ರೈಲ್ವೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ : Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್..!

ಇದನ್ನೂ ಓದಿ : Fake Blood Platelets : ಡೆಂಗ್ಯೂ ರೋಗಿಗೆ ಪ್ಲಾಸ್ಮಾ ಬದಲು ಮೂಸಂಬಿ ಜೂಸ್ : ನಕಲಿ ಪ್ಲೇಟ್‌ ಲೆಟ್‌ ಜಾಲಪತ್ತೆ, 10 ಮಂದಿ ಅರೆಸ್ಟ್

Kushinagar video of offering namaz in the corridor of the Satyagrah Express -15273 sleeper coach of the train goes viral

Comments are closed.