India Vs Pakistan Melbourne Rain : ಮೆಲ್ಬೋರ್ನ್‌ನಲ್ಲಿ ಸತತ 6 ಗಂಟೆಗಳ ಮಳೆ, ಭಾರತ Vs ಪಾಕಿಸ್ತಾನ ಮ್ಯಾಚ್ ನಡೆಯುತ್ತಾ ?

ಮೆಲ್ಬೋರ್ನ್: ಭಾರತ ಮತ್ತು ಪಾಕಿಸ್ತಾನ (India Vs Pakistan) ತಂಡಗಳ ಮಧ್ಯೆ ಸೂಪರ್ ಸಂಡೇ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ( Melbourne Cricket Ground) ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022) ಪಂದ್ಯವನ್ನು ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಮೆಗಾ ಫೈಟ್’ಗೆ ಕೌಂಟ್’ಡೌನ್ ಶುರುವಾಗಿದ್ದು, ಪಂದ್ಯ ಭಾನುವಾರ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಆದರೆ ಪಂದ್ಯದಲ್ಲಿ ಮಳೆಯ ಭೀತಿ ಎದುರಾಗಿದೆ. ಮೆಲ್ಬೋರ್ನ್’ನಲ್ಲಿ (Weather forecast in Melbourne) ಶನಿವಾರ ಬೆಳಗ್ಗೆಯಿಂದಲೇ ಸತತ ಆರು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಮೆಲ್ಬೋರ್ನ್’ನಲ್ಲಿ ಮಳೆ ಸುರಿಯುತ್ತಿರುವ ದೃಶ್ಯವನ್ನು ಹಿರಿಯ ಕ್ರೀಡಾ ಪತ್ರಕರ್ತ ಬೋರಿಯಾ ಮಜುಮ್ದಾರ್ ಟ್ವಿಟರ್’ನಲ್ಲಿ ಪ್ರಕಟಿಸಿದ್ದಾರೆ.

“ಮೆಲ್ಬೋರ್ನ್’ನಲ್ಲಿ ಸತತ ಆರು ಗಂಟೆಗಳಿಂದ ಮಳೆ ಸುರಿಯುತ್ತಿದೆ ಮತ್ತು ಇನ್ನೂ ನಿಂತಿಲ್ಲ. ಜೊತೆಗೆ ಗಾಳಿಯೂ ಬೀಸುತ್ತಿದೆ” ಎಂದು ಬೋರಿಯಾ ಟ್ವೀಟ್ ಮಾಡಿದ್ದಾರೆ.

India Vs Pakistan Melbourne : ಬಾರೀ ಮಳೆಯ ಮುನ್ಸೂಚನೆ

ಮೆಲ್ಬೋರ್ನ್ ಅನಿರೀಕ್ಷಿತ ಹವಮಾನಕ್ಕೆ ಖ್ಯಾತಿ ಪಡೆದಿರುವ ಪ್ರದೇಶ. ಅಲ್ಲಿ ಯಾವಾಗ ಮಳೆ ಸುರಿಯುತ್ತದೆ ಎಂಬುದನ್ನು ಊಹಿಸುವುದೇ ಕಷ್ಟ. ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಭಾನುವಾರ ಬೆಳಗ್ಗೆ ಮತ್ತು ಸಂಜೆ ಮೆಲ್ಬೋರ್ನ್’ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಮುನ್ನಾ ದಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಳೆಯ ಸಾಧ್ಯತೆ ಬಗ್ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Team India Captain Rohit Sharma) ಕೂಡ ಮಾತನಾಡಿದ್ದಾರೆ.

“ನಾನು ಬೆಳಗ್ಗೆ ಎದ್ದು ನೋಡಿದಾಗ ಮೋಡ ಕವಿದ ವಾತಾವರಣವಿತ್ತು. ಈಗ ಸೂರ್ಯನ ಬೆಳಕು ಕಾಣುತ್ತಿದೆ. ನಾವು 40 ಓವರ್’ಗಳ ಪೂರ್ಣ ಪಂದ್ಯದ ನಿರೀಕ್ಷೆಯಲ್ಲಿ ಇಲ್ಲಿಗೆ ಬಂದಿದ್ದೇವೆ. ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದ ವೇಳೆಯೂ ಮಳೆ ಬಂದಿತ್ತು. ಆದರೂ ಅಲ್ಲಿ ನಾವು 8 ಓವರ್’ಗಳ ಪಂದ್ಯವಾಡಿದ್ದೆವು” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ : ಟೀಮ್ ಇಂಡಿಯಾ ವಿಶ್ವಕಪ್ ಪಡೆಯಲ್ಲಿ ಮೂವರು ಕನ್ನಡಿಗರು, ಒಬ್ಬ ರಾಹುಲ್, ಇನ್ನೊಬ್ಬ ದ್ರಾವಿಡ್, ಮೂರನೆಯವರು ಯಾರು?

ಇದನ್ನೂ ಓದಿ : T20 World cup Super 12 : ಅರ್ಹತಾ ಸುತ್ತು ಮುಕ್ತಾಯ, ಸೂಪರ್-12ಗೆ 4 ತಂಡಗಳು, ಇಲ್ಲಿದೆ ಹೊಸ ವೇಳಾಪಟ್ಟಿ

T20 World Cup 2022 India Vs Pakistan continuous rainfall in in 6 hours Melbourne Weather forecast Rain Updates

Comments are closed.