Lalu Prasad Yadav : ಮನೆಯ ಮೆಟ್ಟಿಲಿನಿಂದ ಜಾರಿ ಬಿದ್ದ ಲಾಲು ಪ್ರಸಾದ್​ ಯಾದವ್​ : ಬಲ ಭುಜ ಮುರಿತ

ಪಾಟ್ನಾ : Lalu Prasad Yadav : ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಭಾನುವಾರ ಪಾಟ್ನಾದಲ್ಲಿರುವ ತಮ್ಮ ಪತ್ನಿ ರಾಬ್ರಿ ದೇವಿ ನಿವಾಸದಲ್ಲಿ ಮೆಟ್ಟಿಲಿನಿಂದ ಜಾರಿ ಬಿದ್ದು ಏಟು ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್​ ಆಯತಪ್ಪಿ ಬಿದ್ದ ಪರಿಣಾಮ ಅವರ ಭುಜ ಹಾಗೂ ಬೆನ್ನಿಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ. ಬಿದ್ದ ರಭಸಕ್ಕೆ ಲಾಲು ಪ್ರಸಾದ್​ ಯಾದವ್​ ಬಲ ಭುಜ ಮುರಿದಿದೆ ಎನ್ನಲಾಗಿದೆ.

ಲಾಲು ಯಾದವ್ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೆ ಕೆಳಗೆ ಬಿದ್ದು ಬಲ ಭುಜ ಮತ್ತು ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್​ ಯಾದವ್​ ಕಿಡ್ನಿ ಸಂಬಂಧಿ ಚಿಕಿತ್ಸೆಗೆಂದು ವಿದೇಶಕ್ಕೆ ಕರೆದುಕೊಂಡು ಹೋಗಬೇಕು ಎಂದುಕೊಂಡಿರುವಾಗಲೇ ಈ ಅವಘಡ ಸಂಭವಿಸಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವೈದ್ಯರು ಲಾಲು ಪ್ರಸಾಸ್​ ಯಾದವ್​​ರನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದ್ದು ಇದರಲ್ಲಿ ಅವರ ಬಲ ಭುಜ ಮುರಿತಗೊಂಡಿದೆ ಎಂದು ತಿಳಿದುಬಂದಿದೆ. ಪೆಟ್ಟಾದ ಜಾಗದ ಸುತ್ತ ಕ್ರೇಪ್​ ಬ್ಯಾಂಡೇಜ್​​ ಹಾಕಲಾಗಿದೆ. ಹಾಗೂ ಔಷಧಿಗಳನ್ನು ನೀಡಿ ಅವರನ್ನು ಮನೆಗೆ ಕಳಿಸಲಾಗಿದೆ ಎಂದು ಲಾಲು ಪ್ರಸಾದ್​ ಯಾದವ್​ ಆಪ್ತ ಮೂಲಗಳು ತಿಳಿಸಿವೆ. ಭುಜ ಹಾಗೂ ಬೆನ್ನಿಗೆ ಏಟು ಬಿದ್ದಿರುವುದನ್ನು ಹೊರತುಪಡಿಸಿ ಲಾಲು ಪ್ರಸಾದ್​ ಯಾದವ್​ಗೆ ಇನ್ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ರ ಆಪ್ತ ಮೂಲಗಳು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿವೆ.

ಮೇವು ಹಗರಣದಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಶಿಕ್ಷೆಯನ್ನು ಅನುಭವಿಸುತ್ತಿರುವ ಲಾಲು ಪ್ರಸಾದ್​ ಯಾದವ್​ ಕಳೆದ ಒಂದೆರಡು ತಿಂಗಳಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಇದನ್ನು ಓದಿ : MLA Basana Gowda Patil Yatnal : ಮಂತ್ರಿ ಸ್ಥಾನಕ್ಕೆ ಕ್ಷೇತ್ರ ಬಿಟ್ಟು ವರಿಷ್ಠರ ಮನೆ ಅಲೆಯಬೇಕು : ಬಸನಗೌಡ ಪಾಟೀಲ್​ ಯತ್ನಾಳ್​

ಇದನ್ನೂ ಓದಿ : ದೆಹಲಿಯ ಗುರುದ್ವಾರದಲ್ಲಿ ಮಲಗುತ್ತಿದ್ದ ಹುಡುಗ.. ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ !

Lalu Prasad Yadav Falls From Stairs in Patna, Suffers Fracture in Right Shoulder

Comments are closed.