Lalu Prasad Yadav: ಲಾಲು ಪ್ರಸಾದ್‌ ಯಾದವ್‌ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಪ್ರಕರಣದ ಇತಿಹಾಸವೇನು?

ದೇಶದಲ್ಲಿ ಸಂಚಲನ ಮೂಡಿಸಿದ್ದ ಬಿಹಾರದ ಮೇವು ಹಗರಣದ ಡೊರಾಂಡಾ ಖಜಾನೆ (Doranda treasury) ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ಗೆ ಯಾದವ್‌ಗೆ  (Lalu Prasad Yadav) 5 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ ಅಲ್ಲದೇ ₹60 ಲಕ್ಷ ದಂಡವನ್ನು ಸಹ ಕೋರ್ಟ್ ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್‌ ಅವರಿಗೆ ವಿಧಿಸಿದೆ.

ಝಾರ್ಖಂಡ್‌ದ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು (CBI Court) ಮೇವು ಹಗರಣಕ್ಕೆ ಸಂಬಂಧಿಸಿದ ಡೊರಾಂಡಾ ಖಜಾನೆಯಿಂದ ₹ 139.35 ಕೋಟಿ ಅಕ್ರಮ ಹಿಂಪಡೆದ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು (Lalu Prasad Yadav) ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಈಗಾಗಲೇ ಇದೇ ಪ್ರಕರಣದ 36 ಆರೋಪಿಗಳು ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದ್ದು ಅವರಿಗೆ ಮೂರು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಿದೆ.

ಫೆಬ್ರವರಿ 15, ಮಂಗಳವಾರ ಲಾಲು ಪ್ರಸಾದ್ ಯಾದವ್ ಅವರು ದೋಷಿಗಳೆಂದು ಪ್ರಕಟಿಸಿರುವ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 18ರಂದು ಘೋಷಿಸುವುದಾಗಿ ತಿಳಿಸಿದೆ. ₹950 ಕೋಟಿ ಮೊತ್ತದ ಮೇವು ಹಗರಣ ಅವಿಭಜಿತ ಬಿಹಾರದಲ್ಲಿ ನಡೆದಿತ್ತು. ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಹಣವನ್ನು ಅಕ್ರಮವಾಗಿ ಪಡೆದುಕೊಂಡ ಆರೋಪದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಹಲವರ ವಿರುದ್ಧ ಆರೊಪ ಕೇಳಿಬಂದಿತ್ತು. ಡೊರಂಡ ಜಿಲ್ಲಾ ಸರ್ಕಾರಿ ಖಜಾನೆಯಿಂದ ₹139 ಕೋಟಿಗಳನ್ನು ಅಕ್ರಮವಾಗಿ ಪಡೆದಿರುವ ಆರೋಪ ಇದೀಗ ಸಾಬೀತಾಗಿದ್ದು ಲಾಲೂ ಪ್ರಸಾದ್ ಯಾದವ್‌ಗೆ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಪ್ರಕಟಿಸಿದೆ.

ಕುಖ್ಯಾತ ₹ 950 ಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಇತರ ನಾಲ್ಕು ವಿಷಯಗಳಲ್ಲಿ ಲಾಲು ಯಾದವ್ ಅವರು ಈಗಾಗಲೇ ದೋಷಿ ಎಂದು ಸಾಬೀತಾಗಿದೆ – ₹ 37.7 ಕೋಟಿ ಮತ್ತು ಚೈಬಾಸಾ ಖಜಾನೆಯಿಂದ ₹ 33.13 ಕೋಟಿ, ದಿಯೋಘರ್ ಖಜಾನೆಯಿಂದ ₹ 89.27 ಕೋಟಿ ಮತ್ತು ₹ 3.76 ಕೋಟಿ ವಂಚನೆ ಪ್ರಕರಣದಲ್ಲಿ ಈ ತೀರ್ಪನ್ನು ಕೋರ್ಟ್ ನೀಡಿದೆ.

ಇದನ್ನೂ ಓದಿ: Lalu Prasad Yadav: ಮೇವು ಹಗರಣದ ಪ್ರಕರಣವೊಂದರಲ್ಲಿ ಲಾಲು ಪ್ರಸಾದ್ ಯಾದವ್ ದೋಷಿ

(Lalu Prasad Yadav sentenced to 5 year jail 60 lakh fine in Fodded Scam)

Comments are closed.