LDF v/s Kerala Governor: ತಾರಕಕ್ಕೇರಿದ ಸಂಘರ್ಷ; ಡೀಮ್ಡ್ ವಿವಿ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರ ಕೆಳಗಿಳಿಸಿದ ಸರ್ಕಾರ

ಕೇರಳ: LDF v/s Kerala Governor: ಕೇರಳದಲ್ಲಿ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಹಾಗೂ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಕೇರಳದ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ತೆಗೆದುಹಾಕುವ ತೀರ್ಮಾನ ತೆಗೆದುಕೊಂಡ ಬೆನ್ನಲ್ಲೇ ರಾಜ್ಯ ಸರ್ಕಾರವು ನಿರ್ಣಯವನ್ನು ಕಾರ್ಯರೂಪಕ್ಕೆ ತಂದಿದೆ. ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರನ್ನು ಕೇರಳ ಸರ್ಕಾರ ಕೆಳಗಿಳಿಸಿದೆ.

ಇದನ್ನೂ ಓದಿ: Congress controversy: ದೆಹಲಿ ಪಾಲಿಕೆ ಚುನಾವಣೆ ಮುನ್ನವೇ ವಿವಾದಕ್ಕೆ ಗುರಿಯಾದ ಕಾಂಗ್ರೆಸ್; ಸಿಖ್ ವಿರೋಧಿ ದಂಗೆ ಆರೋಪಿಗೆ ಸಮಿತಿ ಹುದ್ದೆ

ಕೇರಳದ ಹಲವು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿ ಕೇರಳ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರಲ್ಲಿ 9 ವಿಶ್ವವಿದ್ಯಾಲಯಗಳ ಕುಲಪತಿಗಳು ರಾಜೀನಾಮೆ ನೀಡಬೇಕು ಎಂದು ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಆದೇಶ ಹೊರಡಿಸಿದ್ದರು. ಇದಾದ ಬಳಿಕ ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಹಾಗೂ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ನಡುವೆ ತೀವ್ರ ಬಿಕ್ಕಟ್ಟು ಉಂಟಾಗಿದೆ.

ಸದ್ಯ ರಾಜ್ಯಪಾಲರಿಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಪಿಣರಾಯಿ ವಿಜಯನ್ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಕೆಳಗಿಳಿಸುವ ಕುರಿತು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ. ಈ ನಿರ್ಧಾರ ಕೈಗೊಂಡ ಬೆನ್ನಲ್ಲೇ ಕೇರಳ ಕಲಾಮಂಡಲಂ ವಿಶ್ವವಿದ್ಯಾಲಯ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಕೆಳಗಿಳಿಸಿದೆ. ಇನ್ನು ಖಾನ್ ಅವರಿದ್ದ ಕುಲಪತಿ ಸ್ಥಾನಕ್ಕೆ ಕಲೆ ಮತ್ತು ಸಾಂಸ್ಕøತಿಕ ಕ್ಷೇತ್ರದ ಗಣ್ಯ ವ್ಯಕ್ತಿಯನ್ನು ನೇಮಿಸಲು ವಿಶ್ವವಿದ್ಯಾಲಯದ ನಿಯಮಗಳನ್ನು ಬದಲಾಯಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ರಾಜ್ಯಪಾಲರು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿದ್ದಾರೆ ಎಂದು ಕೇರಳ ರಾಜ್ಯದ ಡೆಮಾಕ್ರಟಿಕ್ ಫ್ರಂಟ್ (LDF) ಆಡಳಿತ ಆರೋಪಿಸಿದೆ.

ಸದ್ಯ ಬಿಜೆಪಿಯೇತರ ಆಡಳಿತವಿರುವ 3 ದಕ್ಷಿಣ ರಾಜ್ಯಗಳಲ್ಲಿ ಗವರ್ನರ್ ಗಳು ಮತ್ತು ಸರ್ಕಾರಗಳ ನಡುವೆ ಜಟಾಪಟಿ ನಡೆಯುತ್ತಿದೆ. ತಮಿಳುನಾಡು ಆರ್.ಎನ್.ರವಿಯನ್ನು ವಾಪಸ್ ಕರೆಸಿಕೊಳ್ಳಲು ಕೋರಿದೆ. ಕೇರಳವು ಖಾನ್ ಅವರನ್ನು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನದಿಂದ ತೆರವು ಮಾಡಲು ವಿಶೇಷ ಸುಗ್ರೀವಾಜ್ಞೆಯನ್ನು ಪ್ರಸ್ತಾಪಿಸಿದೆ. ತಮಿಳಿಸೈ ಸೌಂದರರಾಜನ್ ತೆಲಂಗಾಣದಲ್ಲಿ ಆಕೆಯ ದೂವಾಣಿ ಟ್ಯಾಪ್ ಆಗಿರುವ ಬಗ್ಗೆ ಅನುಮಾನ ಹೊರಹಾಕಿದ್ದಾರೆ.

ಇದನ್ನೂ ಓದಿ: Lalu Kidney transplant: ಲಾಲೂ ಪ್ರಸಾದ್ ಯಾದವ್ ಗೆ ಮಗಳಿಂದಲೇ ಕಿಡ್ನಿ ದಾನ; ಸಿಂಗಾಪುರದಲ್ಲಿ ನವೆಂಬರ್ ಅಂತ್ಯದಲ್ಲಿ ಆಪರೇಷನ್

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಆಡಳಿತವು ಇನ್ನು ಮುಂದೆ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ರಾಜ್ಯಪಾಲರು ಬೇಡ ಎಂದಿದೆ. ಉಪಕುಲಪತಿಗಳ ನೇಮಕ ಸೇರಿದಂತೆ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಗವರ್ನರ್ ಮತ್ತು ರಾಜ್ಯ ಸರ್ಕಾರ ಭಿನ್ನಾಭಿಪ್ರಾಯವನ್ನು ಹೊಂದಿದೆ.

LDF v/s Kerala Governor: Kerala removes Governor as Vice Chancellor of Kalamandalam University

Comments are closed.