Congress controversy: ದೆಹಲಿ ಪಾಲಿಕೆ ಚುನಾವಣೆ ಮುನ್ನವೇ ವಿವಾದಕ್ಕೆ ಗುರಿಯಾದ ಕಾಂಗ್ರೆಸ್; ಸಿಖ್ ವಿರೋಧಿ ದಂಗೆ ಆರೋಪಿಗೆ ಸಮಿತಿ ಹುದ್ದೆ

ನವದೆಹಲಿ: Congress controversy: ವಿವಾದಿತ ಕಾಂಗ್ರೆಸ್ ನಾಯಕ, ಸಿಖ್ ವಿರೋಧಿ ದಂಗೆಯ ಪ್ರಮುಖ ಆರೋಪಿ ಜಗದೀಶ್ ಟೈಟ್ಲರ್ ಅವರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸಮಿತಿಯ ಸದಸ್ಯತ್ವ ನೀಡುವ ಮೂಲಕ ಕಾಂಗ್ರೆಸ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. 1984ರಲ್ಲಿ ಸಾವಿರಾರು ಸಿಖ್ಖರ ಹತ್ಯೆಗೆ ಕಾರಣವಾದ ಸಿಖ್ ವಿರೋಧಿ ದಂಗೆಯ ಪ್ರಮುಖ ಆರೋಪಿ ಇವರಾಗಿದ್ದಾರೆ.

ಇದನ್ನೂ ಓದಿ: Lalu Kidney transplant: ಲಾಲೂ ಪ್ರಸಾದ್ ಯಾದವ್ ಗೆ ಮಗಳಿಂದಲೇ ಕಿಡ್ನಿ ದಾನ; ಸಿಂಗಾಪುರದಲ್ಲಿ ನವೆಂಬರ್ ಅಂತ್ಯದಲ್ಲಿ ಆಪರೇಷನ್

ಕಳೆದ ಕೆಲ ವರ್ಷಗಳಿಂದ ಜಗದೀಶ್ ಟೈಟ್ಲರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ದೂರವಿರಿಸಿತ್ತು. 1980ರಲ್ಲಿ ಪ್ರಥಮ ಬಾರಿಗೆ ಜಗದೀಶ್ ಟೈಟ್ಲರ್ ಲೋಕಸಭೆಗೆ ಆಯ್ಕೆಯಾಗಿದ್ದರು. 1991 ಹಾಗೂ 20014ರ ಲೋಕಸಭೆ ಚುನಾವಣೆಗೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆ ಎರಡೂ ಚುನಾವಣೆಯಲ್ಲಿ ಅವರು ಗೆಲುವನ್ನು ಸಾಧಿಸಿದ್ದರು. ಆದರೆ ಸಿಖ್ ವಿರೋಧಿ ದಂಗೆ ಕುರಿತು ನಾನಾವತಿ ಸಮಿತಿ ವರದಿ ಬಹಿರಂಗಗೊಂಡ ಬೆನ್ನಲ್ಲೇ ಟೈಟ್ಲರ್ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಕಾಂಗ್ರೆಸ್ ಅವರಿಂದ ಅಂತರವನ್ನು ಕಾಯ್ದುಕೊಂಡಿತ್ತು. ಆದರೆ ಇದೀಗ ಏಕಾಏಕಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸಮಿತಿಯ ಸದಸ್ಯತ್ವ ನೀಡುವ ಮೂಲಕ ಕಾಂಗ್ರೆಸ್ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಕಾಂಗ್ರೆಸ್ ನ ಈ ನಡೆ ವಿರುದ್ಧ ಎಲ್ಲೆಡೆ ಟೀಕೆಗಳು ಕೇಳಿಬರುತ್ತಿವೆ. ಜಗದೀಶ್ ಟೈಟ್ಲರ್ ಅವರಿಗೆ ಹುದ್ದೆ ನೀಡುವ ಮೂಲಕ ಕಾಂಗ್ರೆಸ್ ಸಿಖ್ಖರ ಗಾಯದ ಮೇಲೆ ಉಪ್ಪು ಸುರಿದಿದೆ ಎಂದು ಬಿಜೆಪಿ ವಕ್ತಾರ ಆರ್.ಪಿ.ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ. ಸಿಖ್ ವಿರೋಧಿ ದಂಗೆ ಕುರಿತು ಕಾಂಗ್ರೆಸ್ ಗೆ ಪಶ್ಚಾತ್ತಾಪವಿಲ್ಲ. ಹೀಗಾಗಿ ರಾಜೀವ್ ಗಾಂಧಿ ತಂಡದಲ್ಲಿದ್ದ ಜಗದೀಶ್ ಟೈಟ್ಲರ್ ಅವರಿಗೆ ಕಾಂಗ್ರೆಸ್ ಹುದ್ದೆ ನೀಡಿದೆ. ಕಾಂಗ್ರೆಸ್ ನ ಅಸಲಿ ಮುಖವಾಡ ಇದು ಎಂದು ಬಿಜೆಪಿ ವಕ್ತಾರ ಆರ್.ಪಿ.ಸಿಂಗ್ ಟೀಕಿಸಿದ್ದಾರೆ.

ಇದನ್ನೂ ಓದಿ: Jadeja’s wife gets BJP ticket : ಪತ್ನಿಗೆ ಬಿಜೆಪಿ ಟಿಕೆಟ್ : ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ರವೀಂದ್ರ ಜಡೇಜಾ

ಆಗಿನ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ಅಂದರೆ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಸಾವಿರಾರು ಸಿಖ್ಖರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜಗದೀಶ್ ಟೈಟ್ಲರ್ ಪ್ರಮುಖ ಆರೋಪಿ ಆಗಿದ್ದಾರೆ.

Congress Controversy: Congress has been hit by controversy before the Delhi Corporation elections; Committee post for anti-Sikh riot accused

Comments are closed.