LED TV Blast : ಎಲ್‌ಇಡಿ ಟಿವಿ ಸ್ಪೋಟ : 16 ವರ್ಷದ ಬಾಲಕ ಸಾವು, ಛಿದ್ರವಾಯ್ತು ಕಾಂಕ್ರೀಟ್‌ ಗೋಡೆ

ಗಾಜಿಯಾಬಾದ್‌ : ( LED TV Blast ) ಮನೆ ಮಂದಿಯೆಲ್ಲಾ ಟಿವಿ ನೋಡುತ್ತಿದ್ದ ವೇಳೆಯಲ್ಲಿಯೇ ಎಲ್‌ಇಡಿ ಟಿವಿಯೊಂದು ಸ್ಪೋಟವಾಗಿ 16 ವರ್ಷದ ಬಾಲಕ ಸಾವನ್ನಪ್ಪಿ, ಸ್ಪೋಟದ ತೀವ್ರತೆಗೆ ಮನೆಯ ಗೋಡೆ ಛಿದ್ರವಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ಬಾಲಕ ಅತ್ತಿಗೆ, ತಾಯಿ ಹಾಗೂ ಆತನ ಸ್ನೇಹಿತನ ಜೊತೆಯಲ್ಲಿ ಟಿವಿ ನೋಡುತ್ತಿದ್ದ ವೇಳೆಯಲ್ಲಿ ಏಕಾಏಕಿ ಸ್ಪೋಟ (LED TV Blast )ಗೊಂಡಿದೆ.ಕೂಡಲೇ ಬಾಲಕ ಸೇರಿದಂತೆ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ. ಸ್ಫೋಟದ ಭೀಕರತೆಗೆ ಮನೆಯ ಗೋಡೆ ಛಿದ್ರವಾಗಿದ್ದಲ್ಲದೆ, ಸ್ಫೋಟದ ಸದ್ದಿಗೆ ಅಕ್ಕಪಕ್ಕದ ಮನೆಯವರು ಸಹ ಬೆಚ್ಚಿಬಿದ್ದಿದ್ದಾರೆ.ಭಯಾನಕ ಸದ್ದಿಗೆ ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ : Kanthara Movie : ದಾಖಲೆ‌‌ ಮೊತ್ತಕ್ಕೆ ಕಾಂತಾರ ರೈಟ್ಸ್ ಸೇಲ್: ಓಟಿಟಿಯಲ್ಲೂ ಗೆದ್ದ ರಿಷಬ್ ಶೆಟ್ಟಿ

ಇದನ್ನೂ ಓದಿ : Dhruva Sarja : ಅಜ್ಜಿ,ಅಣ್ಣನ ಅಗಲಿಕೆ ಕಾಡ್ತಿದೆ: ಅದ್ದೂರಿ ಬರ್ತಡೇ ಬೇಡ ಎಂದ ಧ್ರುವ ಸರ್ಜಾ

ಇದನ್ನೂ ಓದಿ : Road Accident : ಮುಂಬೈನಲ್ಲಿ ಭೀಕರ ಅಪಘಾತ; ಐವರು ಸಾವು, 12 ಮಂದಿಗೆ ಗಾಯ

ಅಕ್ಕಪಕ್ಕದವರು ಆರಂಭದಲ್ಲಿ ಸ್ಪೋಟದ ಸದ್ದು ಕೇಳಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿದೆ ಎಂದು ಭಾವಿಸಿಕೊಂಡಿದ್ದರು. ಆದರೆ ಹೊರಗೆ ಬಂದು ನೋಡಿದರೆ ಪಕ್ಕದ ಮನೆಯಿಂದ ಹೊಗೆ ಬರುತ್ತಿತ್ತು ಎಂದು ವಿನಿತಾ ಹೇಳಿಕೆಯನ್ನು ನೀಡಿದ್ದಾರೆ. ಮೃತ ಬಾಲಕನ ಕುಟುಂಬ ಸದಸ್ಯೆಯಾದ ಮೋನಿಕಾ ಎನ್ನುವವರು ಈ ಸ್ಫೋಟ ನಡೆಯುವ ವೇಳೆ ತಾನು ಇನ್ನೊಂದು ಕೋಣೆಯಲ್ಲಿ ಇದ್ದಿರುವುದಾಗಿ, ಸ್ಫೋಟದ ಸದ್ದಿಗೆ ಇಡಿ ಮನೆಯೆ ನಡುಗಿದ್ದು, ಅದು ತುಂಬಾ ಭಯಾನಕವಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ : Earthquake in Chattisgarh:ಛತ್ತೀಸ್‌ಗಢದಲ್ಲಿ 3.0 ತೀವ್ರತೆಯ ಭೂಕಂಪ

ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಸೇರಿ ನಾಲ್ವರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಟಿವಿಯನ್ನು ಗೋಡೆಗೆ ಅಂಟಿಸಲಾಗಿತ್ತು. ಇದರಿಂದಾಗಿ ಟಿವಿ ಸ್ಪೋಟಗೊಂಡಿದೆ ಎನ್ನಲಾಗುತ್ತಿದೆ. ಈ ಕುರಿತು ಗಾಜಿಯಾಬಾದ್‌ ನ ಪೋಲೀಸ್‌ ಅಧಿಕಾರಿ ಜ್ನಾನೇಂದ್ರ ಸಿಂಗ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮೃತನ ತಾಯಿ ಮತ್ತು ಸ್ನೇಹಿತ ತರುಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

A 16-year-old boy died when an LED TV exploded while everyone in the house was watching TV. The incident took place in Ghaziabad, Uttar Pradesh, where the wall of the house was broken due to the intensity of the explosion.

Comments are closed.