Idol immersion : ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಪ್ರವಾಹ 8 ಮಂದಿ ಜಲಸಮಾಧಿ.. ಬೆಚ್ಚಿ ಬೀಳಿಸುತ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗುವ ದೃಶ್ಯ

ಜಲಪೈಗುರಿ : Idol immersion ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ಏಕಾಏಕಿ ಪ್ರವಾಹ ಕಾಣಿಸಿಕೊಂಡು 8 ಮಂದಿ ಜಲಸಮಾಧಿಯಾಗಿದ್ದಾರೆ. ಈ ಘೋರ ದುರಂತ ಪಶ್ಚಿಮ ಬಂಗಾಳದ ಜಲಪೈಗುರಿ ಅನ್ನೋ ಪ್ರದೇಶದಲ್ಲಿ ನಡೆದಿದೆ.

ನವರಾತ್ರಿ ಉತ್ಸವದ ವೇಳೆ ಪಶ್ಚಿಮ ಬಂಗಾಳದಾದ್ಯಂಥ ದುರ್ಗಾ ಮಾತೆ ಮೂರ್ತಿಯನ್ನ ಪ್ರತಿಷ್ಟಾಪಿಸಿದ ಆರಾಧಿಸ್ತಾರೆ. 9 ದಿನದ ಬಳಿಕ ದುರ್ಗಾ ಮಾತೆ ಮೂರ್ತಿಗಳನ್ನ ನದಿ,ಬಾವಿ, ಹಳ್ಳಕೊಳ್ಳಗಳಲ್ಲಿ ವಿಸರ್ಜನೆ ಮಾಡ್ತಾರೆ. ನಿನ್ನೆ ವಿಜಯದಶಮಿ ವೇಳೆ ಜಲಪೈ ಗುರಿಯ ಬಳಿ ಮಾಳ ನದಿಯಲ್ಲಿ ದುರ್ಗಾ ದೇವಿ ವಿಸರ್ಜನೆಗೆ ನೂರಾರು ಜನರು ಜಮಾಯಿಸಿದ್ರು. ರಾತ್ರಿ 8.30ರ ಸುಮಾರಿಗೆ ನದಿಯಲ್ಲಿ ಮೂರ್ತಿ ವಿರ್ಸಜನೆಗೆ ಅಂತಾ ಅನೇಕರು ನದಿಗೆ ಇಳಿದಿದ್ರು. ಇನ್ನೂ ಕೆಲವರು ನದಿಯ ದಂಡೆಯಲ್ಲಿ ನಿಂತು ಮೂರ್ತಿ ವಿರ್ಸಜನೆಯನ್ನ ವೀಕ್ಷಿಸತ್ತಿದ್ದರು. ಈ ವೇಳೆ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗಿದೆ. ನೋಡ ನೋಡುತ್ತಿದ್ದಂತೆ ಪ್ರವಾಹ ಅಪ್ಪಳಿಸಿದ್ದರಿಂದ ನದಿಯ ತೀರದಲ್ಲಿ ಹಾಗೂ ಅರ್ಧ ನೀರಿಗೆ ಇಳಿದಿದ್ದ ಜನರು ಕೊಚ್ಚಿಕೊಂಡು ಹೋಗಿದ್ದಾರೆ. ನೀರಿನ ಸೆಳೆತಕ್ಕೆ ಜನರು ಕೊಚ್ಚಿ ಕೊಂಡು ಹೋಗುವ ದೃಶ್ಯವನ್ನ ನದಿಯ ತೀರದಲ್ಲಿ ನಿಂತಿದ್ದವರು ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ.

ರಕ್ಷಿಸಲು ಆಗೋಕೆ ಆಗದಷ್ಟರ ಮಟ್ಟಿಗೆ ನೀರು ರಭಸವಾಗಿ ಹರಿದು ಬಂದಿದ್ದರಿಂದ ನೋಡ ನೋಡ್ತಿದ್ದಂತೆ ನೀರಿನಲ್ಲಿ ಹಲವು ಕೊಚ್ಚಿಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡವರು ನದಿಯಲ್ಲಿ ಕೊಚ್ಚಿ ಹೋದವರ ರಕ್ಷಣೆಗೆ ಇಳಿದಿದ್ರು. ಸದ್ಯ 8 ಜನರ ಮೃತ ದೇಹ ಸಿಕ್ಕಿದ್ದು. ಇದ್ರಲ್ಲಿ ನಾಲ್ವರು ಮಹಿಳೆಯರು ಇದ್ದಾರೆ ಅಂತಾ ಗೊತ್ತಾಗಿದೆ. 13ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು  

ಜಲಪೈಗುರಿ ಜಿಲ್ಲಾಧಿಕಾರಿ ಮೌಮಿತಾ ಗೋಡಾರಾ ತಿಳಿಸಿದ್ದಾರೆ.  ಇದುವರೆಗೂ 50 ಜನರನ್ನ ರಕ್ಷಿಸಲಾಗಿದೆ. ಆದ್ರೆ ಇನ್ನೂ ಹಲವರು ನಾಪತ್ತೆಯಾಗಿರೋ ಬಗ್ಗೆ ಶಂಕೆ ಇದ್ದು ರಕ್ಷಣಾಕಾರ್ಯಾಚರಣೆ ಮುಂದುವರಿದಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಅಂತಾ ಮಾಳ ವಿಧಾನಸಭಾ ಕ್ಷೇತ್ರದ ಶಾಸಕ ಬಲುಚಿಕ್ ಬರಾಕ್ ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರೋ ಪಶ್ಚಿಮ ಬಂಗಾಳ ವಿಧಾನಸಭೆ  ವಿಪಕ್ಷ ನಾಯಕ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹೆಚ್ಚಿನ ರಕ್ಷಣಾ ಸಿಬ್ಬಂದಿಯನ್ನ ನಿಯೋಜಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Kanthara Movie : ದಾಖಲೆ‌‌ ಮೊತ್ತಕ್ಕೆ ಕಾಂತಾರ ರೈಟ್ಸ್ ಸೇಲ್: ಓಟಿಟಿಯಲ್ಲೂ ಗೆದ್ದ ರಿಷಬ್ ಶೆಟ್ಟಿ

Idol immersion eight people drowned in the Mal river due to flash floods during idol immersion

Comments are closed.