ಲೋಕಸಭಾ ಚುನಾವಣೆ ಬಿಜೆಪಿ ಮೊದಲ ಪಟ್ಟಿ ಪ್ರಕಟ : ನರೇಂದ್ರ ಮೋದಿ, ಅಮಿತ್ ಶಾಗೆ ಸ್ಥಾನ, ಯಾರಿಗೆ ಯಾವ ಕ್ಷೇತ್ರ, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Lok Sabha Election 2024 BJP first List : ಲೋಕಸಭೆ ಚುನಾವಣೆ 2024ಕ್ಕೆ ಆಡಳಿತ ರೂಢ ಬಿಜೆಪಿ ಸಿದ್ದವಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Lok Sabha Election 2024 BJP first List : ಲೋಕಸಭೆ ಚುನಾವಣೆ 2024ಕ್ಕೆ ಆಡಳಿತ ರೂಢ ಬಿಜೆಪಿ ಸಿದ್ದವಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ( PM Narendra Modi) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amith Sha) ಸೇರಿದಂತೆ ಹಲವು ನಾಯಕರ ಹೆಸರು ಮೊದಲ ಪಟ್ಟಿಯಲ್ಲಿದೆ. ಯಾವ ರಾಜ್ಯದಿಂದ ಯಾವ ನಾಯಕರು ಸ್ಪರ್ಧೆ ಮಾಡುತ್ತಿದ್ದಾರೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Lok Sabha Election 2024 BJP first List Released PM Narendra Modi Varanasi, Amith Sha Gandhi Nagar here is Complete List
Image Credit : India Today

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ನಿನ್ನೆತಡರಾತ್ರಿಯವರೆಗೂ ಚರ್ಚೆ ನಡೆಸಿದ್ದು, ಅಳೆದು ತೂಗಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಒಟ್ಟು16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 195 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧೆ ಮಾಡಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಂಧಿನಗರದಿಂದ ಕಣಕ್ಕೆ ಇಳಿಯಲಿದ್ದಾರೆ. ದಿವಂಗತ ಸುಷ್ಮಾ ಸ್ವರಾಜ್ ಪುತ್ರಿಗೂ ಲೋಕಸಭೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ ಯಾರಿಗೆಲ್ಲಾ ಟಿಕೆಟ್ ?

ಬಿಜೆಪಿ ಮೊದಲ ಪಟ್ಟಿಯಲ್ಲಿ ಒಟ್ಟು 195 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇದರಲ್ಲಿ 34 ಕೇಂದ್ರ ಮತ್ತು ರಾಜ್ಯ ಸಚಿವರ ಹೆಸರು ಸೇರಿಕೊಂಡಿದ್ದು, 28 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು 47 ಯುವ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಇಷ್ಟೇ ಅಲ್ಲದೇ ಪರಿಶಿಷ್ಟ ಜಾತಿಯ 27 ಅಭ್ಯರ್ಥಿಗಳು,ಪರಿಶಿಷ್ಟ ವರ್ಗದ 18 ಅಭ್ಯರ್ಥಿಗಳು ಹಾಗೂ ಹಿಂದುಳಿದ ವರ್ಗದ 57 ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ.

Lok Sabha Election 2024 BJP first List Released PM Narendra Modi Varanasi, Amith Sha Gandhi Nagar here is Complete List
Image Credit : jagaran

ಬಿಜೆಪಿ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಉತ್ತರ ಪ್ರದೇಶದಿಂದಲೇ ಅತೀ ಹೆಚ್ಚು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. ಉತ್ತರ ಪ್ರದೇಶದಿಂದ 51, ಪಶ್ಚಿಮ ಬಂಗಾಳ 26, ಮಧ್ಯಪ್ರದೇಶ 24, ಗುಜರಾತ್‌ ದ 15, ರಾಜಸ್ಥಾನ 15, ಕೇರಳ 12, ತೆಲಂಗಾಣ 9, ಅಸ್ಸಾಂ 11, ಜಾರ್ಖಂಡ್‌ 11, ಛತ್ತೀಸ್‌ಗಢ 11, ದೆಹಲಿ 11, ಜಮ್ಮು ಮತ್ತು ಕಾಶ್ಮೀರ 5, ಉತ್ತರಾಖಂಡ 3, ಅರುಣಾಚಲ, ಗೋವಾ, ತ್ರಿಪುರಾ, ಅಂಡಮಾನ್-ನಿಕೋಬಾರ್ ಮತ್ತು ದಮನ್ ಮತ್ತು ದಿಯುನಲ್ಲಿ ತಲಾ 1 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆ ?

ಪ್ರಧಾನಿ ನರೇಂದ್ರ ಮೋದಿ -ವಾರಣಾಸಿ
ವಿಷ್ಣುಪಾದ ರೇ – ಅಂಡಮಾನ್ ಮತ್ತು ನಿಕೋಬಾರ್‌
ಕಿರಣ್ ರಿಜಿಜು – ಅರುಣಾಚಲ ಪಶ್ಚಿಮ
ತಾಪಿರ್ ಗಾಂವ್ – ಅರುಣಾಚಲ ಪೂರ್ವ
ಕೃಪಾನಾಥ್ ಮಲ್ಲಗೆ – ಕರೀಂಗಂಜ್
ಪರಿಮಳಾ ಶುಕ್ಲಾ ವೈದ್ಯ
ಅಮರ್ ಸಿಂಗ್
ಬಿಜುಲಿ ಕಲಿತಾ ಮೆಡಿಗೆ – ಗುವಾಹಟಿ
ದಿಲೀಪ್ ಸಹಕಿಯಾ- ಮಂಗಲ್ದೋಯಿ
ರಂಜಿತ್ ದತ್ತಾ- ತೇಜ್‌ಪುರ
ಸುರೇಶ್ ಬೋರಾ- ನೌಗಾಂವ್‌

ಇದನ್ನೂ ಓದಿ : ಬಿಜೆಪಿ ಅಸಮಾಧಾನಕ್ಕೆ ಸೈಲೆಂಟ್‌ ಆಗಿಯೇ ಮದ್ದೆರೆದ ರಾಜ್ಯಾಧ್ಯಕ್ಷ : ಬಿಎಸ್‌ ಯಡಿಯೂರಪ್ಪ ಹಾದಿಯಲ್ಲೇ ಪುತ್ರ ಬಿವೈ ವಿಜಯೇಂದ್ರ

ಕಾಮಾಖ್ಯ ಪ್ರಸಾದ್ ತಾಸಾ – ಕಲಿಯಬೌರ್
ತಪನ್ ಕುಮಾರ್ ಗೊಗೋಯ್ – ಜೋರ್ಹತ್‌
ಸರ್ಬಾನಂದ ಸೋನೋವಾಲ್- ದ್ರಿಬುಗಢ್‌
ಪ್ರಧಾನ್ ಬರೋವಾ – ಲಖಿಂಪುರ
ಚಿಂತಾಮಣಿ ಮಹಾರಾಜ – ಸರ್ಗುಜ
ರಾಯಗಢ್ ಟು ರಾಧೇಶ್ಯಾಮ್ – ರಾಥಿಯಾ
ಜಾಜ್ಗೀರ್ ಚಂಪಾ- ಕಮಲೇಶ್ ಜಂಗ್ಡೆ
ಕೊರ್ಬಾ – ಸರೋಜ್ ಪಾಂಡೆ
ಬಿಲಾಸ್ಪುರ – ತೋಖಾನ್ ಸಾಹು
ರಾಜನಂದಗಾಂವ್ – ಸಂತೋಷ್ ಪಾಂಡೆ
ದುರ್ಗ್ – ವಿಜಯ್ ಬಘೇಲ್
ಬ್ರಿಜ್ಮೋಹನ್ ಅಗರ್ವಾಲ್ – ರಾಯ್ಪುರ
ರೂಪಕುಮಾರಿ ಚೌಧರಿ – ಮಹಾಸಮುಂಡ್
ಬಸ್ತಾರ್‌- ಮಹೇಶ್ ಕಶ್ಯಪ್
ಭಜರಾಜ್ ನಂದ್- ಕಂಕರ್

ಇದನ್ನೂ ಓದಿ : ಬೆಂಗಳೂರು ಉತ್ತರಕ್ಕೆ ಸದಾನಂದ ಗೌಡರ ಬದಲು ಸಿಟಿ ರವಿಗೆ ಟಿಕೆಟ್‌ ! ಹೈಕಮಾಂಡ್‌ಗೆ ತಲೆನೋವಾದ ಸಿಟಿ ರವಿ – ಶೋಭಾ ಟಿಕೆಟ್‌ ಫೈಟ್‌

ಜಿತೇಂದ್ರ ಸಿಂಗ್ – ಉಧಂಪುರ
ಗೊಡ್ಡಾ- ನಿಶಿಕಾಂತ್ ದುಬೆ
ಅರ್ಜುನ್ ಮುಂಡಾ – ಪೆಗ್‌
ಅನ್ನಪೂರ್ಣ ದೇವಿ – ಕೊಡೆರ್ಮ
ಚಾಂದಿನಿ ಚೌಕ- ಪ್ರವೀಣ್ ಖಂಡೇಲ್ವಾಲ್
ಬಾನ್ಸುರಿ ಸ್ವರಾಜ್ – ನವದೆಹಲಿ
ಭೋಪಾಲ್‌- ಅಲೋಕ್ ಶರ್ಮಾ
ಗುಣ – ಜ್ಯೋತಿರಾದಿತ್ಯ ಸಿಂಧಿಯಾ
ಸಾಗರ್ – ಲತಾ ವಾಂಖೆಡೆ
ವೀರೇಂದ್ರ ಖಾತಿ- ಟೀಕಾಮ್‌ಗರ್
ದಾಮೋಹ್‌- ರಾಹುಲ್ ಲೋಧಿ
ಖಜುರಾಹೊ- ವಿಡಿ ಶರ್ಮಾ
ಗಣೇಶ್ ಸಿಂಗ್-ಸತ್ನಾ

ಇದನ್ನೂ ಓದಿ : ಲೋಕಸಭೆ ಚುನಾವಣೆ 2024 : ಬಿಡುಗಡೆ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಜನಾರ್ದನ್ ಮಿಶ್ರಾ- ರೇವಾ
ರಾಜೇಶ್ ಮಿಶ್ರಾ – ಸಿದ್ಧಿ
ಶಹದೋಲ್‌- ಹಿಮಾದ್ರಿ ಸಿಂಗ್
ಜಬಲ್ಪುರ- ಆಶಿಶ್ ದುಬೆ
ಫಗ್ಗನ್ ಸಿಂಗ್ ಕುಲಾಸ್ತೆ-ಮಾಂಡ್ಲಾ
ಹೋಶಂಗಾಬಾದ್ – ದರ್ಶನ್ ಸಿಂಗ್
ಶಿವರಾಜ್ – ವಿದಿಶಾ
ಮಹೇಂದ್ರ ಸಿಂಗ್ ಸೋಲಂಕಿ- ದೇವಾಸ್
ಸುಧೀರ್ ಗುಪ್ತಾ – ಮಂಡ್‌ಸೌರ್‌
ಗಜೇಂದ್ರ ಪಟೇಲ- ರತ್ಲಾಂ

ಅಲ್ವಾರ್ – ಭೂಪೇಂದ್ರ ಯಾದವ್
ಅರ್ಜುನ್ ರಾಮ್ ಮೇಘವಾಲ್- ಬಿಕಾನೆರ್
ಗಜೇಂದ್ರ ಸಿಂಗ್ ಶೇಖಾವತ್ – ಜೋಧಪುರ
ಕೈಲಾಶ್ ಚೌಧರಿ – ಬಾರ್ಮರ್
ಓಂ ಬಿರ್ಲಾ- ಕೋಟಾ
ದುಶ್ಯಂತ್ ಸಿಂಗ್ – ಝಲ್ವಾರ
ಚಿತ್ತೋರಗಢ- ಸಿಪಿ ಜೋಶಿ
ನಾಗೌರ್ ಜ್ಯೋತಿ- ಮಿರ್ಧಾ

ಬಿಜೆಪಿ ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ಪ್ರಕಟಿಸುವ ಮೊದಲು ಫೆಬ್ರವರಿ 29 ರಂದು ಮಹತ್ವದ ಸಭೆ ನಡೆಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ತಡರಾತ್ರಿಯ ವರೆಗೂ ಸಭೆ ನಡೆಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಲೋಕಸಭಾ ಚುನಾವಣೆಗೆ ಬಿಜೆಪಿ ಮೊದಲ ಹಂತದಲ್ಲಿ 100 ರಿಂದ 125 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ ಅತೀ ಹೆಚ್ಚಿನ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. 2014-2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕಳೆದುಕೊಂಡ ಸ್ಥಾನಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಅದ್ರಲ್ಲೂ ಈ ಬಾರಿ ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರಿಗೆ ಮಣೆ ಹಾಕಲಾಗಿದೆ.

2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ 53 ಮಹಿಳೆಯರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ಶೇ.33ರ ಪ್ರಕಾರ ಈ ಬಾರಿ 70 ಮಹಿಳೆಯರು ಟಿಕೆಟ್ ಪಡೆಯಬಹುದು ಎಂದು ಅಂದಾಜಿಸಲಾಗಿದೆ. 2019ರಲ್ಲಿ ಬಿಜೆಪಿ 543 ಸ್ಥಾನಗಳ ಪೈಕಿ 436 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಉಳಿದ ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ನೀಡಿತ್ತು.

ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ 436 ಸ್ಥಾನಗಳ ಪೈಕಿ 303 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಅಲ್ಲದೇ ಅತ್ಯಧಿಕ ಬಹುಮತಗಳಿಂದ ಬಿಜೆಪಿ ಅಧಿಕಾರದ ಗದ್ದೆಗೆಯನ್ನು ಮರಳಿ ಪಡೆದಿತ್ತು. ಅದ್ರಲ್ಲೂ 51 ಸ್ಥಾನಗಳಲ್ಲಿ ಎದುರಾಳಿ ಪಕ್ಷಗಳು ಠೇವಣಿ ಕಳೆದುಕೊಂಡಿದ್ದವು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) 351 ಸ್ಥಾನಗಳಿಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) 90 ಸ್ಥಾನಗಳನ್ನು ಮತ್ತು ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ 15 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ 303 ಸ್ಥಾನಗಳೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೆಸ್‌ ಮಾತ್ರವಲ್ಲದೇ ಡಿಎಂಕೆಗೆ 24, ತೃಣಮೂಲ ಕಾಂಗ್ರೆಸ್‌ಗೆ 22 ಮತ್ತು ವೈಎಸ್‌ಆರ್‌ಸಿಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

Lok Sabha Election 2024 BJP first List Released PM Narendra Modi Varanasi, Amith Sha Gandhi Nagar here is Complete List

Comments are closed.