ರಾಜಸ್ಥಾನ : LPG Cylinders : ತಮ್ಮ ರಾಜ್ಯದ ಬಿಪಿಎಲ್ ಮತ್ತು ಉಜ್ವಲಾ ವರ್ಗದ ಜನರಿಗೆ ತಲಾ ಐದು ನೂರು ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ. ಅಲ್ವಾರ್ ಜಿಲ್ಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್, ಬೆಲೆ ಏರಿಕೆ ಎನ್ನುವುದು ನಮ್ಮ ಮುಂದಿರುವ ಗಂಭೀರ ವಿಚಾರವಾಗಿದೆ. ಮುಂದಿನ ವರ್ಷ ಏಪ್ರಿಲ್ 1ರ ಬಳಿಕ ಬಿಪಿಎಲ್ ಕುಟುಂಬಗಳಿಗೆ ತಲಾ ಐದು ನೂರು ರೂಪಾಯಿಗಳಂತೆ ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ಗಳನ್ನು ನೀಡುತ್ತೇವೆ. ಸರ್ಕಾರದ ಕಲ್ಯಾಣ ಯೋಜನೆಯಿಂದ ಯಾರೂ ವಂಚಿತರಾಗಬಾರದು ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವು ವಿವರಗಳನ್ನು ಅಧ್ಯಯನ ಮಾಡುತ್ತಿದೆ. ಮುಂದಿನ ತಿಂಗಳು ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತೇನೆ. ನಾನು ಕೇವಲ ಒಂದು ವಿಷಯವನ್ನು ಹೇಳಲು ಇಚ್ಛಿಸುತ್ತೇನೆ. ಉಳಿದ ಘೋಷಣೆಗಳನ್ನು ನಾನು ಬಜೆಟ್ನಲ್ಲಿ ಮಾಡುತ್ತೇನೆ. ಉಜ್ವಲ ಯೋಜನೆ ಹೆಸರಿನಲ್ಲಿ ಪ್ರಧಾನಿ ಮೋದಿ ಎಲ್ಪಿಜಿ ಕನೆಕ್ಷನ್ ಮತ್ತು ಗ್ಯಾಸ್ ಸ್ಟೌ ಕೊಡುವ ನಾಟಕ ಮಾಡಿದ್ದಾರೆ. 400 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1040 ರೂಪಾಯಿಗೆ ಏರಿಕೆ ಮಾಡಿದ್ದಾರೆ. ಹೀಗಾಗಿ ಯಾರೂ ಎಲ್ಪಿಜಿ ಖರೀದಿ ಮಾಡುತ್ತಿಲ್ಲ. ಇದೆಲ್ಲವನ್ನು ನಾವು ಅಧ್ಯಯನ ಮಾಡಿದ್ದೇವೆ. ಏಪ್ರಿಲ್ 1ರಿಂದ ನಮ್ಮ ರಾಜ್ಯದ ಜನತೆಗೆ 12 ಸಿಲಿಂಡರ್ಗಳು ಸಿಗಲಿದೆ. ಈಗಿನ ಬೆಲೆ 1040 ರೂಪಾಯಿಯ ಬದಲಿಗೆ ಪ್ರತಿ ವರ್ಷ 500 ರೂಪಾಯಿಗೆ ಸಿಗಲಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅಶೋಕ್ ಗೆಹ್ಲೋಟ್ ಇಂತಹದ್ದೊಂದು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯಶಾಲಿಯಾಗಿ ಹೊರಹೊಮ್ಮಿದೆ. 200 ವಿಧಾನಸಭಾ ಸ್ಥಾನಗಳಲ್ಲಿ 100 ಸ್ಥಾನವನ್ನು ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಿತ್ತು. ಈ ಬಾರಿ ಆಂತರಿಕ ಕಲಹ ಜೋರಾಗಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರಗೊಳ್ಳುವ ನಿರೀಕ್ಷೆಯಿದೆ ಎಂದು ರಾಜಕೀಯ ಪಂಡಿತರು ಹೇಳ್ತಿದ್ದಾರೆ.
ಇದನ್ನೂ ಓದಿ : News Next Special: IPL Players Auction; ಈ ಮೂವರು ಕನ್ನಡಿಗರ ಮೇಲೆ ಕೃಪೆ ತೋರುತ್ತಾ RCB ?
LPG Cylinders At Just Rs 500 In THIS State From Next Year. Deets Here