13th installment of PM Kisan : ರೈತರಿಗೆ ಗುಡ್ ನ್ಯೂಸ್‌ : ಖಾತೆಗೆ ಜಮಾ ಆಗಲಿದೆ ಪಿಎಂ ಕಿಸಾನ್‌ ಯೋಜನೆಯ 13ನೇ ಕಂತು

ನವದೆಹಲಿ : ದೇಶದ ರೈತರ ವ್ಯವಸಾಯಕ್ಕೆ ಪ್ರೋತ್ಸಾಹ ಹಾಗೂ ಆರ್ಥಿಕ ನೆರವು ನೀಡುವುದಕ್ಕಾಗಿ ಕೇಂದ್ರ ಸರಕಾರ 2019ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ಕಿಸಾನ್‌ ಯೋಜನೆಯನ್ನು (13th installment of PM Kisan) ಹಮ್ಮಿಕೊಂಡಿದೆ. ಈಗಾಗಲೇ ರೈತರು ಈ ಯೋಜನೆಯ 12ನೇ ಕಂತನ್ನು ಪಡೆದುಕೊಂಡಿದ್ದು, ಇದೀಗ 13ನೇ ಕಂತಿಗಾಗಿ ಕಾಯುತ್ತಿದ್ದಾರೆ. ಅದರಂತೆ ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ 13ನೇ ಕಂತು ಬಿಡುಗಡೆಯಾಗಲಿದೆ ಎಂದು ವರದಿ ಆಗಿದೆ.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಅಡಿಯಲ್ಲಿ ವರ್ಷಕ್ಕೆ 6000ದಂತೆ 10 ಕೋಟಿಗೂ ಅಧಿಕ ರೈತರಿಗೆ ಪ್ರತಿ 4 ತಿಂಗಳಿಗೊಮ್ಮೆ ಪ್ರತಿಯೊಬ್ಬ ರೈತರಿಗೆ 2000 ರೂ.ನಂತೆ ಮೂರು ಕಂತುಗಳಲ್ಲಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ಪಿಎಂ ಕಿಸಾನ್‌ ಯೋಜನೆಗೆ ಕೆವೈಸಿ ಕಡ್ಡಾಯ :
ದೇಶದ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕೆಂದರೆ ಕಡ್ಡಾಯವಾಗಿ ಇ-ಕೆವೈಸಿಯನ್ನು ಭರ್ತಿ ಮಾಡಬೇಕಾಗಿದೆ. ಇದರಲ್ಲಿ ಮುಖ್ಯವಾಗಿ ರೈತರು ಭೂಮಿಯ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗಿದೆಯೇ ಎಂದು ಪರಿಶೀಲಿಸಬೇಕಾಗಿದೆ. ಇದನ್ನು ಭರ್ತಿ ಮಾಡಿದ್ದರೆ ಮಾತ್ರ 13ನೇ ಕಂತು ನೇರವಾಗಿ ರೈತರ ಖಾತೆಗೆ ಬರುತ್ತದೆ. ಯಾಕೆಂದರೆ ಈಯೋಜನೆಯ ನಕಲಿ ರೈತರ ವಂಚನೆಯನ್ನು ತಡೆಗಟ್ಟಲು ಕೇಂದ್ರ ಸರಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಂಡಿದೆ. ಹಾಗಾಗಿ ಇತ್ತೀಚಿನ ಹಾಗೂ ಮುಂದಿನ ಕಂತನ್ನು ಪಡೆಯಲು ರೈತರು ತಪ್ಪದೇ ಭೂಮಿ ವಿವರಗಳ ಪರಿಶೀಲನೆ ಹಾಗೂ ಇ-ಕೆವೈಸಿಯನ್ನು ಅವಶ್ಯವಾಗಿ ಭರ್ತಿ ಮಾಡಿಸಬೇಕಾಗಿದೆ.

ಇದನ್ನೂ ಓದಿ : PM Kisan 13th installment : ದೇಶದ ರೈತರಿಗೆ ಸಿಹಿ ಸುದ್ದಿ : ಶೀಘ್ರವೇ ಬಿಡುಗಡೆ ಆಗಲಿದೆ ಪಿಎಂ ಕಿಸಾನ್‌ ಯೋಜನೆಯ 13ನೇ ಕಂತು

ಇದನ್ನೂ ಓದಿ : Fertilizer subsidy : ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರಕಾರ : ರಸಗೊಬ್ಬರ ಸಬ್ಸಿಡಿ ಕಂತು ಬಿಡುಗಡೆ

ಇದನ್ನೂ ಓದಿ : PM Kisan Update : ಪಿಎಂ ಕಿಸಾನ್ ಯೋಜನೆಯಿಂದ 6000 ರೂ. ಜಮೆ ಆಗಬೇಕಾ : ಹಾಗಾದ್ರೆ ತಕ್ಷಣವೇ ಈ ಕೆಲಸ ಮಾಡಿ

ಸಮಸ್ಯೆಗಳಿಗಾಗಿ ಈ ಯೋಜನೆಯ ಸಹಾಯವಾಣಿಗೆ ಕರೆ ಮಾಡಿ :
ಪಿಎಂ ಕಿಸಾನ್‌ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ ರೈತರು ಅಧಿಕೃತ ಇಮೇಲ್‌ ಐಡಿಯಲ್ಲಿ ಸಂಪರ್ಕಿಸಬೇಕಾಗಿದೆ. ಪ್ರಧಾನಮಂತ್ರಿ ಕಿಸಾನ್‌ ಯೋಜನೆ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 (ಟೋಲ್‌ ಫ್ರೀ) ಅಥವಾ 011-23381092 ಅನ್ನು ಸಹ ಸಂಪರ್ಕಿಸಬಹುದಾಗಿದೆ. ಈ ಯೋಜನೆಗೆ ಸಂಬಂಧಿಸಿದ ನಿಮ್ಮ ಪ್ರತಿಯೊಂದು ಸಮಸ್ಯೆಯನ್ನು ಇಲ್ಲಿ ಕೂಡ ಪರಿಹರಿಸಿಕೊಳ್ಳಬಹುದು.

Good news for farmers: 13th installment of PM Kisan Scheme will be credited to the account

Comments are closed.