man kills rapist : ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ : ಬಾಂಬ್‌ ಸಿಡಿಸಿ ಅತ್ಯಾಚಾರಿಯನ್ನು ಕೊಂದ ಪತಿ !

ನವದೆಹಲಿ : ಮನೆಗೆ ನುಗ್ಗಿದ್ದ ಮೂವರು ಕಾಮುಕರು ಪತಿಯ ಎದುರಲ್ಲೇ ಪತ್ನಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಆದರೆ ಪೊಲೀಸರಿಗೆ ದೂರು ನೀಡದ ಪತಿ ಪತ್ನಿಯ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಪ್ರತೀಕಾರ ತೀರಿಸಿಕೊಂಡಿರುವ (man kills rapist) ರೀತಿ ಮಾತ್ರ ಎಲ್ಲರಿಗೂ ಶಾಕ್‌ ನೀಡಿದೆ. ಮೂವರ ಪೈಕಿ ಓರ್ವನನ್ನು ಬಾಂಬ್‌ ಸಿಡಿಸಿ ಕೊಲೆ ಮಾಡಿದ್ರೆ, ಮತ್ತೋರ್ವ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ.

ಜನವರಿ ೪ರಂದು ಲಾಲ್‌ ಸಿಂಗ್‌ ಎಂಬಾತ ಹೊಲಕ್ಕೆ ತೆರಳಿದ ವೇಳೆಯಲ್ಲಿ ಕೊಳವೆ ಬಾವಿಯ ಸಮೀಪದಲ್ಲಿ ನಡೆದ ಸ್ಪೋಟದಲ್ಲಿ ಸಾವನ್ನಪ್ಪಿದ್ದ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಶಾಕ್‌ ಎದುರಾಗಿತ್ತು. ಲಾಲ್‌ ಸಿಂಗ್‌ ಜಿಲೆಟಿನ್‌ ಸ್ಪೋಟದಿಂದ ಸಾವನ್ನಪ್ಪಿದ್ದ ಅನ್ನೋ ಮಾಹಿತಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ಪತ್ತೆಯಾಗಿತ್ತು. ಆದರೆ ಇದೇ ರೀತಿ ಗ್ರಾಮದಲ್ಲಿ ಈ ಹಿಂದೆಯೂ ಸ್ಪೋಟ ಸಂಭವಿಸಿದ್ದು, ಈ ಸ್ಪೋಟದಲ್ಲಿ ಭನ್ವರ್‌ ಲಾಲ್‌ ಎಂಬಾತ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದ ಅನ್ನೋ ಮಾಹಿತಿ ಪೊಲೀಸರಿಗೆ ತಿಳಿದಿತ್ತು.

ಈ ಹಿನ್ನೆಲೆಯಲ್ಲಿ ರತ್ಲಾಮ್‌ ಪೊಲೀಸ್‌ ವರಿಷ್ಠಾಧಿಕಾರಿ ಗೌರವ್‌ ತಿವಾರಿ ಅವರ ನೇತೃತ್ವದಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆಯಲ್ಲಿ ಗ್ರಾಮದಲ್ಲಿನ ಕುಟುಂಬವೊಂದು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಕುಟುಂಬವನ್ನು ಪತ್ತೆ ಮಾಡಿದ ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸುತ್ತಲೇ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿತ್ತು. ಕಳೆದ ಹದಿನೈದು ದಿನಗಳ ಹಿಂದೆ ಸ್ಪೋಟದಲ್ಲಿ ಸಾವನ್ನಪ್ಪಿದ್ದ ಲಾಲ್‌ಸಿಂಗ್‌, ದಿನೇಶ್‌ ಹಾಗೂ ಭವರ್‌ ಲಾಲ್‌ ಎಂಬವರು ಈ ವ್ಯಕ್ತಿಯ ಮನೆಗೆ ನುಗ್ಗಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಇದನ್ನು ತಡೆಯಲು ಬಂದ ಪತಿಯ ಮೇಲೆಯೂ ಹಲ್ಲೆ ನಡೆಸಿದ್ದರು. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆಯೊಡ್ಡಿದ್ದರು.

ಘಟನೆಯ ಬೆನ್ನಲ್ಲೇ ಊರು ತೊರೆದಿದ್ದ ಕುಟುಂಬ ದೂರದಲ್ಲಿದ್ದುಕೊಂಡೇ ಪ್ರತೀಕಾರ ತೀರಿಸಲು ಫ್ಲ್ಯಾನ್‌ ರೂಪಿಸಿದ್ದಾನೆ. ಪೊಲೀಸರಿಗೆ ದೂರು ನೀಡದೇ, ಇಂಟರ್‌ನೆಟ್‌ ಮೂಲಕ ಬಾಂಬ್‌ ತಯಾರಿಸುವುದನ್ನು ಕಲಿತಿದ್ದಾನೆ. ಆರಂಭದಲ್ಲಿ ಭವರ್‌ಲಾಲ್‌ ನನ್ನು ಕೊಲೆ ಮಾಡಲು ಯತ್ನಿಸಿದ್ದ ಆದರೆ ಅದು ಫಲಕಾರಿಯಾಗಲಿಲ್ಲ. ನಂತರ ಲಾಲ್‌ಸಿಂಗ್‌ನನ್ನು ಬಾಂಬ್‌ ಸಿಡಿಸಿ ಕೊಲೆ ಮಾಡಿದ್ದಾನೆ. ಪೊಲೀಸರಿಗೆ ಮಾಹಿತಿ ದೊರೆತ ಬೆನ್ನಲ್ಲೇ ಪೊಲೀಸರು ಆರೋಪಿಗಳಾದ ಭವರ್‌ ಲಾಲ್‌ ಹಾಗೂ ದಿನೇಶ್‌ ಎಂಬವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ನಾಪತ್ತೆಯಾಗಿದ್ದ ನಟಿ ಗೋಣಿಚೀಲದಲ್ಲಿ ಶವವಾಗಿ ಪತ್ತೆ :ಪತಿ ಪೊಲೀಸರ ವಶಕ್ಕೆ

ಇದನ್ನೂ ಓದಿ : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಡೆ ಲಾ ಫ್ಯುಯೆಂಟೆ ನಿಧನ

( Madhya Pradesh man learns to make bomb from internet kills wife’s rapist)

Comments are closed.