South Africa Win : ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಸೋಲು ಕಂಡ ಟೀಂ ಇಂಡಿಯಾ

ಪರ್ಲ್ಸ್‌ : ದಕ್ಷಿಣ ಆಫ್ರಿಕಾ ವಿರುದ್ದದ ( India vs South Africa ) ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಅಂತಿಮ ಹಂತದಲ್ಲಿ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ಭರ್ಜರಿ ಬ್ಯಾಟಿಂಗ್‌ ನಡುವಲ್ಲೇ ಟೀಂ ಇಂಡಿಯಾ 31 ರನ್‌ಗಳ ( South Africa Win )ಅಂತರದಿಂದ ಸೋಲನ್ನು ಅನುಭವಿಸಿದೆ. ಈ ಮೂಲಕ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಪರ್ಲ್‌ನಲ್ಲಿರುವ ಬೋಲ್ಯಾನ್ಡ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಟಿಂ ಇಂಡಿಯಾ ಉಪನಾಯಕ ಬೂಮ್ರಾ ಆರಂಭಿಕ ಆಘಾತವನ್ನು ನೀಡಿದ್ದರು. 6 ರನ್‌ಗಳಿಸಿ ಆಡುತ್ತಿದ್ದ ಜೆ ಮಲನ್‌ ಗೆ ಫೆವಿಲಿಯನ್‌ ಹಾದಿ ತೋರಿಸುತ್ತಲೇ, ವೆಂಕಟೇಶ್‌ ಅಯ್ಯರ್‌ ಮಾಕ್ರಮ್‌ ಅವರನ್ನು ರನೌಟ್‌ ಮಾಡಿದ್ರು. ನಂತರದಲ್ಲಿ ಡಿ ಕಾಕ್‌ ಹಾಗೂ ನಾಯಕ ಬವುಮಾ ಉತ್ತಮ ಜೊತೆಯಾಟದ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಆರ್‌. ಅಶ್ಚಿನ್‌ 27ರನ್‌ ಗಳಿಸಿದ ಆಡುತ್ತಿದ್ದ ಡಿ.ಕಾಕ್‌ ಅವರನ್ನು ಬೌಲ್ಡ್‌ ಮಾಡಿದ್ರು.

ನಂತರದಲ್ಲಿ ಬವುಮಾ ಜೊತೆಯಾದ ವ್ಯಾನ್ ಡೆರ್ ಡಸ್ಸೆನ್ ಭರ್ಜರಿ ಜೊತೆಯಾಟ ನಡೆಸಿದ್ದಾರೆ. ನಾಯಕ ಬವುಮಾ 143 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 110 ರನ್‌ ಗಳಿಸಿದ್ರೆ, ವ್ಯಾನ್ ಡೆರ್ ಡಸ್ಸೆನ್ 96 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 9 ಬೌಂಡರಿ ನೆರವಿನಿಂದ 129 ರನ್‌ ಸಿಡಿಸಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 296 ರನ್‌ ಗಳಿಸಿತ್ತು.

ದಕ್ಷಿಣ ಆಫ್ರಿಕಾ ತಂಡ ನೀಡಿದ್ದ 297 ರನ್‌ ಗುರಿ ಬೆನ್ನತ್ತಲು ಹೊರಟ ಭಾರತ ತಂಡಕ್ಕೆ ಮಕರಮ್‌ ಆಘಾತ ನೀಡಿದ್ದಾರೆ. 12 ರನ್‌ ಗಳಿಸಿ ಆಟವಾಡುತ್ತಿದ್ದ ಟೀಂ ಇಂಡಿಯಾ ನಾಯಕ ರಾಹುಲ್‌ ಅವರನ್ನು ಬಲಿ ಪಡೆದಿದ್ದಾರೆ. ಆದರೆ ನಂತರ ವಿರಾಟ್‌ ಕೊಯ್ಲಿ ಜೊತೆಯಾದ ಶಿಖರ್‌ ಧವನ್‌ ಉತ್ತಮ ಜೊತೆಯಾಟ ನೀಡಿದ್ರು. ಶಿಖರ್‌ ಧವನ್‌ 79 ರನ್‌ ಗಳಿಸಿದ್ರೆ, ವಿರಾಟ್‌ ಕೊಯ್ಲಿ 51 ರನ್‌ ಸಿಡಿಸಿದ್ದಾರೆ. ಆದರೆ ನಂತರದಲ್ಲಿ ರಿಷಬ್‌ ಪಂತ್‌ ಹಾಗೂ ಶ್ರೇಯಸ್‌ ಅಯ್ಯರ್‌ ಭರವಸೆ ಮೂಡಿಸಿದ್ರೂ ಕೂಡ ಬೇಗನೆ ವಿಕೆಟ್‌ ಒಪ್ಪಿಸಿದ್ರು.

ಆದರೆ ಪದಾರ್ಪಣೆ ಪಂದ್ಯವನ್ನಾಡಿದ ವೆಂಕಟೇಶ್‌ ಅಯ್ಯರ್‌, ಆರ್.‌ ಅಶ್ವಿನ್‌ ಹಾಗೂ ಭುವನೇಶ್ವರ್‌ ಕುಮಾರ್‌ ನಿರಾಸೆ ಅನುಭವಿಸಿದ್ರು. ಆದರೆ ಅಂತಿಮ ಹಂತದಲ್ಲಿ ಶಾರ್ದೂಲ್‌ ಠಾಕೂರ್‌ ಹಾಗೂ ಬೂಮ್ರಾ ಭಾರತ ತಂಡವನ್ನು ಗೆಲುವಿನ ದಡ ಸೇರಿಸಲು ಯತ್ನಿಸಿದ್ದಾರೆ. ಶಾರ್ದೂಲ್‌ ಠಾಕೂರ್‌ ೪೩ ಎಸೆತಗಳಲ್ಲಿ 50 ರನ್‌ಗಳಿಸಿದ್ರೆ ಬೂಮ್ರಾ 23 ಎಸೆತಗಳಲ್ಲಿ 14 ರನ್‌ ಬಾರಿಸಿದ್ರು. ಆದರೂ ಅಂತಿಮವಾಗಿ ಭಾರತ ತಂಡ 8 ವಿಕೆಟ್‌ ಕಳೆದುಕೊಂಡು 265 ರನ್‌ ಗಳಿಸಲು ಮಾತ್ರವೇ ಶಕ್ತವಾಯಿತು. ಮೂಲಕ 31ರನ್‌ಗಳ ಅಂತರದಿಂದ ರಾಹುಲ್‌ ಪಡೆ ಸೋಲನ್ನು ಅನುಭವಿಸಿದೆ.

ಇದನ್ನೂ ಓದಿ : ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ಮತ್ತು ರಶೀದ್ ಖಾನ್ ಖರೀದಿಸಿದ ಅಹಮದಾಬಾದ್‌

ಇದನ್ನೂ ಓದಿ : ವೃತ್ತಿಪರ ಟೆನ್ನಿಸ್​​ಗೆ ವಿದಾಯ ಘೋಷಿಸುವ ಮಾತುಗಳನ್ನಾಡಿದ ಸಾನಿಯಾ ಮಿರ್ಜಾ

(India vs South Africa 1st ODI Live Score: South Africa Win 31 runs)

Comments are closed.