Disabled Welfare Department : ಅಂಗವಿಕಲರ ಕಲ್ಯಾಣ ಇಲಾಖೆ ಹೊಂದಿದ ಮೊದಲ ರಾಜ್ಯ ಮಹಾರಾಷ್ಟ್ರ

ಮುಂಬೈ : ಅಂಗವಿಕರ ಕಲ್ಯಾಣಕ್ಕಾಗಿ ಸ್ವತಂತ್ರ ಇಲಾಖೆ ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ಮಹಾರಾಷ್ಟ್ರವು ಅಂಗವಿಕಲರ ಕಲ್ಯಾಣಕ್ಕಾಗಿ ಇಲಾಖೆಯೊಂದನ್ನು (Disabled Welfare Department) ಪ್ರಾರಂಭಿಸಿದೆ. ಈ ಇಲಾಖೆಯನ್ನು ದಿವ್ಯಾಂಗ್‌ ಕಲ್ಯಾಣ ಇಲಾಖೆ ಎಂದು ಕರೆಯಲಾಗಿದೆ.

ಮಹಾರಾಷ್ಟ್ರದಲ್ಲಿ ಪ್ರಾರಂಭಗೊಂಡ ದಿವ್ಯಾಂಗ ಕಲ್ಯಾಣ ಇಲಾಖೆ ಹಲವು ಪ್ರಶ್ನೆಗಳಿಗೆ ಒಂದೇ ಕಡೆ ಪರಿಹಾರ ಸಿಗುವಂತೆ ಮಾಡಿದೆ. ಮುಖ್ಯಮಂತ್ರಿ ಶಿಂಧೆ ಸರಕಾರವು ಅಂಗವಿಕಲರ ಕೆಲಸ ಸುಗುಮಗೊಳಿಸುವುದಕ್ಕಾಗಿ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಮುಂಬೈನ ಪ್ರಹಾರ್‌ ಕ್ರಾಂತಿ ಸಂಘಟನೆಯ ಅಧ್ಯಕ್ಷ ಬಿ. ಕೇನ್‌ ತಿಳಿಸಿದ್ದಾರೆ. ಇಲ್ಲಿಯವರೆಗೆ ಅಂಗವಿಕಲರು ತಮ್ಮ ಕೆಲಸ ಕಾರ್ಯಗಳಿಗೆ ಕೆಲವೊಮ್ಮೆ ನಗರಾಭಿವೃದ್ಧಿ ಸಚಿವಾಲಯ, ಕೆಲವೊಮ್ಮೆ ಗ್ರಾಮೀಣಾಭಿವೃದ್ಧಿ ಮತ್ತುಸಾಮಾಜಿಕ ನ್ಯಾಯಕ್ಕೆ ಸಚಿವಾಲಯ ಉದ್ಯೋಗ, ಪುನರ್ವಸತಿ ಇತ್ಯಾದಿ ಸಮಸ್ಯೆಗಳಿಗೆ ಹೋಗಬೇಕಾಗಿತ್ತು.

ಈಗ ದಿವ್ಯಾಂಗ ಕಲ್ಯಾಣ ಇಲಾಖೆಯೊಂದಿಗೆ (Disabled Welfare Department) ಅವರಿಗೆ ಒಂದೇ ಸ್ಥಳದಲ್ಲಿ ಎಲ್ಲ ಸೌಲಭ್ಯವು ಸಿಗುತ್ತದೆ ಎಂದು ಕೇನ್‌ ಹೇಳಿದರು. ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮತ್ತುಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ವಿಕಲಚೇತನರ ಕಲ್ಯಾಣಕ್ಕಾಗಿ ಸ್ವತಂತ್ರ ಇಲಾಖೆಯನ್ನು ಸ್ಥಾಪಿಸುವ ನಿರ್ಧಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : CM Bommai announcement: ವಿಕಲಚೇತನ ಮಕ್ಕಳಿಗೆ ವಿಶೇಷ ಯೋಜನೆ : ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ

ಇದನ್ನೂ ಓದಿ : High Court Notice: ಕೆಜಿಎಫ್- 2 ಹಾಡನ್ನು ತೆಗೆಯದೆ ನ್ಯಾಯಾಂಗ ನಿಂದನೆ; ಕರ್ನಾಟಕ ಹೈಕೋರ್ಟ್ ನಿಂದ ರಾಹುಲ್ ಗಾಂಧಿಗೆ ನೋಟಿಸ್

ಇದನ್ನೂ ಓದಿ : Siddaramayya hospitalised: ಶಸ್ತ್ರಚಿಕಿತ್ಸೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

ವಿಕಲಚೇತನರ ಅಂತರಾಷ್ಟ್ರೀಯ ದಿನದ ದಿನದಂದು ರಾಜ್ಯದಲ್ಲಿ ಸ್ವತಂತ್ರ ದಿವ್ಯಾಂಗ ಕಲ್ಯಾಣ ಇಲಾಖೆಯನ್ನು ಘೋಷಿಸಲಾಯಿತು. ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಇಲಾಖೆ ಮೂಲಕ ವಿಕಲಚೇತನ ಬಂಧುಗಳು ವರ್ಷಗಟ್ಟಲೇ ನೀಡಿದ ಹೋರಾಟಕ್ಕೆ ನ್ಯಾಯ ದೊರಕಿಸಿ ಕೊಡಲಾಗಿದೆ ಎಂದು ಶಿಂಧೆ ಟ್ವೀಟ್‌ ಮಾಡಿದ್ದಾರೆ. ಏಕನಾಥ್‌ ಶಿಂಧೆ ಸೇರಿದಂತೆ ಹಲವಾರು ಶಿವಸೇನಾ ಶಾಕರು ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರಕಾರದ ವಿರುದ್ಧ ಬಂಡಾಯ ಎದ್ದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಜೊತೆ ಸೇರಿ ಜೂನ್‌ 30ರಂದು ತಮ್ಮದೇ ಸಮ್ಮಿಶ್ರ ಸರಕಾರ ರಚಿಸಿದ್ದರು.

Maharashtra is the first state to have a Department for the Welfare of Persons with Disabilities

Comments are closed.